ಮುಂಬೈ(ಅ.06) ಸಿನಿಮಾ ರಂಗದಲ್ಲಿ ಪಾತ್ರಕ್ಕಾಗಿ ನಿರ್ದೇಶಕರು ಮಂಚ ಏರುವಂತೆ ಕರೆಯುತ್ತಾರೆ ಎಂಬ ಅಳಲನ್ನು ನಟಿಯರು ಹೊರಹಾಕುತ್ತಿದ್ದರು. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ಸಪ್ನಾ ಪಬ್ಬಿ.

ತಮ್ಮ ಸಾಮಾಜಿಕ ತಾಣ ದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಬರೆದಿರುವ ನಟಿ ಶೂಟಿಂಗ್ ನಡೆಯುತ್ತಿದ್ದಾಗಿನ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ.

ಯಾರ ಹೆಸರನ್ನು ಹೇಳದ ಸಪ್ನಾ, ನನಗೆ ಅನ್ ಕಂಫರ್ಟ್ ಫೀಲ್ ಆಗುವಂಥಹ ಬಿಕಿನಿ ಧರಿಸಲು ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದಾರೆ. ಬಿಕಿನಿ ಧರಿಸಿ ಸಾಂಗ್ ನಲ್ಲಿ ಹೆಜ್ಜೆ ಹಾಕಲು ಒತ್ತಾಯ ಮಾಡಲಾಗಿತ್ತು ಎಂದಿದ್ದಾರೆ.

ತನುಶ್ರೀ ದತ್ತಾ ಮೇಲೆ ಕೈ ಹಾಕಿದ್ದ ನಟ ಯಾರು?

ಇದಾದ ಮೇಲೆ ನಿನ್ನೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪ್ರಾಜೆಕ್ಟ್ ಪ್ರೊಡ್ಯೂಸರ್ ಒಬ್ಬರು ನನಗೆ ಧಿಮಾಕಿನಿಂದಲೇ ಹೇಳಿದ್ದರು. ಅಲ್ಲದೇ ಸಿಟ್ಟಿನಿಂದ ಬ್ರಾ ವೊಂದನ್ನು ಎಸೆದಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲಿಯೇ ಇದ್ದ ನಟಿಯೊಬ್ಬರು ಇದನ್ನು ಕಂಡು ನನ್ನನ್ನು ಅವಹೇಳನ ಮಾಡುವ ರೀತಿ ನಕ್ಕಿದ್ದು ಬಹಳ ನೋವು ತಂದಿತ್ತು ಎಂದು ಹೇಳಿಕೊಂಡಿದ್ದಾರೆ.......

ಸ್ವರಾ ಭಾಸ್ಕರ್ ಹಸ್ತಮೈಥುನ ದೃಶ್ಯದ  ನಂತರ ಏನಾಯ್ತು?

ರಾಧಿಕಾ ಆಪ್ಟೆ, ಸ್ವರಾ ಭಾಸ್ಕರ್, ರಿಚಾ ಚಡ್ಡಾ, ಕೊಂಕಣ ಸೇನ್ ಶರ್ಮಾ ನಂಥರ ತನುಶ್ರೀ ದತ್ತ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು. ಅದಾದ ಮೇಲೆ ಬಾಲಿವುಡ್ ನಲ್ಲಿ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು.

 
 
 
 
 
 
 
 
 
 
 
 
 

Hey Sanjay why so serious? #thetrip2 👩🏻‍🔧🧘🏻‍♀️💃🏻👩🏻‍🔧

A post shared by Sapna Pabbi (@sapnapabbi_sappers) on Sep 15, 2018 at 2:01am PDT