ಮೋದಿ ಪ್ರಜಾಪ್ರಭುತ್ವದ ಸಮರ್ಥ ನಾಯಕ: ಕಂಗನಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 2:14 PM IST
Kangana ranauat wants Modi as PM in 2019 as well
Highlights

'ಕ್ವೀನ್' ನಟಿ ಕಂಗನಾ ರಣಾವತ್ ತಮ್ಮ ನೇರ, ನಿಷ್ಠುರ ನಡೆಯಿಂದಲೇ ಖ್ಯಾತರಾದವರು. ಪ್ರಧಾನಿ ಮೋದಿಯವರ ಜೀವನಾಧಾರಿತ ಚಿತ್ರ 'ಚಲೋ ಜೀತೇ ಹೈ...' ಚಿತ್ರ ಪ್ರದರ್ಶನದ ವೇಳೆ ಮೋದಿಯನ್ನು ಹಾಡಿ, ಹೊಗಳಿದ್ದು, ಮುಂದಿನ ಚುನಾವಣೆಯಲ್ಲಿಯೂ ನರೇಂದ್ರ ಮೋದಿಯೇ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಮಂಗೇಶ್ ಹಡಾವಲೇ ನಿರ್ದೇಶನದ 'ಚಲೋ ಜೀತೇ ಹೈ...'  ಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ , ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ. 

ಪ್ರಧಾನಿ ಮೋದಿಯವರ ಬಾಲ್ಯ ಜೀವನದಿಂದ ಪ್ರಭಾವಿತರಾಗಿ, 'ಮೋದಿ ಪ್ರಜಾಪ್ರಭುತ್ವ ರಾಷ್ಟ್ರದ ನೈಜ ನಾಯಕ..' ಎಂದು 'ಕ್ವೀನ್' ನಟಿ ಕಂಗನಾ ಶ್ಲಾಘಿಸಿದ್ದಾರೆ.

'ಸ್ವಜನಪಕ್ಷಪಾತವಿಲ್ಲದೇ ಮೋದಿ ಸರಕಾರ ನಡೆಸುತ್ತಿದ್ದು, ಪ್ರಧಾನಿಯಾಗಲು ಅರ್ಹ ಅಭ್ಯರ್ಥಿ. ಕುಟುಂಬ ರಾಜಕೀಯ ಹಿನ್ನೆಲೆಯಿಲ್ಲದೆಯೂ ಇಂಥದ್ದೊಂದು ಮಹಾನ್ ಹುದ್ದೆಯನ್ನು ಅಲಂಕರಿಸಿದ್ದಾರೆ. ದೇಶದ ಪ್ರಧಾನಿಯಾಗಿ ಅವರನ್ನು ಆಯ್ಕೆ ಮಾಡಿದ್ದು, ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕಷ್ಟಪಟ್ಟು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದ್ದರಿಂದ ಅವರ ವಿಶ್ವಾಸರ್ಹತೆ ಬಗ್ಗೆ ಯಾವುದೇ ಅನುಮಾನವೂ ಬೇಡ. ಭಾರತವನ್ನು ಪ್ರಗತಿಯ ಪಥದಲ್ಲಿ ಸಾಗಿಸಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು,' ಎಂದು ಆಶಿಸಿದ್ದಾರೆ.

'2019ರಲ್ಲಿ ನಡೆಯುವ ಚುನಾವಣೆಯಲ್ಲಿಯೂ ಮೋದಿಯೇ ಗೆದ್ದು, ಪ್ರಧಾನಿಯಾಗಬೇಕು,' ಎಂದು ಕಂಗನಾ ಆಪೇಕ್ಷಿಸಿದ್ದಾರೆ.

ಸದಾ ತಮ್ಮ ನೇರ, ನಿಷ್ಠುರ ನಡೆ, ನುಡಿಯಿಂದಲೇ ಪ್ರಖ್ಯಾತರಾದ ಕಂಗನಾ, ತಮ್ಮ ಈ ಗುಣದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದವರು. ಅಲ್ಲದೇ ಹಲವರ ವಿರೋಧವನ್ನೂ ಕಟ್ಟಿಕೊಂಡವರು. 

ಇದನ್ನೂ ಓದಿ

ಕಂಗನ್ ಗಂಜಿ ಗಿರಾಕಿಯಾಗಿದ್ದು ಯಾವಾಗ?
 

loader