ಕಂಗನಾ ಶೀಘ್ರ ರಾಜಕೀಯ ಪ್ರವೇಶ..?

First Published 28, Jul 2018, 12:24 PM IST
Is Kangana Ranaut entering politics
Highlights

ಬಾಲಿವುಡ್ ಕ್ವೀನ್ ಬೋಲ್ಡ್ ತಾರೆ ಕಂಗನಾ ರಣಾವತ್ ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶ ಮಾಡುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. 

ಮುಂಬೈ :  ಬಾಲಿವುಡ್  ಬೋಲ್ಡ್ ತಾರೆ ಕಂಗನಾ ರಣೌತ್ ರಾಜಕೀಯದ ಬಗ್ಗೆ ತಮ್ಮ ಆಸಕ್ತಿಯನ್ನು ಹೊರ ಹಾಕಿದ್ದಾರೆ. 

ಅಲ್ಲದೇ ದೇಶದಲ್ಲಿನ ಸಾಮಾಜಿಕ ಅಸಮಾನತೆಗಳ ಬಗ್ಗೆಯೂ ಕೂಡ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.  ಇದರಿಂದ ಅವರು ದೇಶದ ರಾಜಕೀಯಕ್ಕೆ ಪ್ರವೇಶ ಮಾಡಬಹುದು ಎನ್ನುವ ಮುನ್ಸೂಚನೆಯೊಂದು ದೊರಕಿದೆ. 

ಅಲ್ಲದೇ ಶೀಘ್ರದಲ್ಲೇ ಆಕೆ ರಾಜಕೀಯಕ್ಕೆ ಪ್ರವೇಶ ಮಾಡಬಹುದು ಎನ್ನುವುದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿದು ಬಂದಿದೆ. 

ಯುವ ಪಡೆ ದೇಶದ ಆಡಳಿತ ನಡೆಸಬೇಕು. ದೇಶಕ್ಕೆ ಸೇವೆ ಸಲ್ಲಿಸುವ ಮನಸ್ಸು ತಮಗಿದೆ ಎನ್ನುವುದನ್ನು ತಿಳಿಸಿದ್ದಾರೆ. ಇದರಿಂದ ಶೀಘ್ರದಲ್ಲೇ ಬಾಲಿವುಡ್ ಕ್ಷೀನ್ ರಾಜಕೀಯ ಪ್ರವೇಶ ಮಾಡಬಹುದು ಎನ್ನುವ ಮುನ್ಸೂಚನೆಯೊಂದು ದೊರಕಿದಂತಾಗಿದೆ. 

ಸದ್ಯ ಕಂಗನಾ ತಮ್ಮ ಮುಂದಿನ ಚಿತ್ರ ಮಣಿಕರ್ಣಿಕಾ ದ ಕ್ವೀನ್ ಬಿಡುಗಡೆಗೆ ಕಾತರರಾಗಿದ್ದಾರೆ. 

loader