ಬಾಲಿವುಡ್ ನಲ್ಲಿ ಮತ್ತೊಂದು ಶೀತಲ ಸಮರ ಆರಂಭವಾಗಿದೆಯೇ..  ಎಂಗೇಜ್ ಮೆಂಟ್ ಮಾಡಿಕೊಂಡ ಬ್ಯೂಟಿ ಪ್ರಿಯಾಂಕ ಚೋಪ್ರಾ  ಮತ್ತು ಕಂಗನಾ ರಣಾವತ್ ನಡುವೆ ಹೊಸ ವಿವಾದದ ಗಾಳಿ ಬೀಸಿದೆಯೇ? ಈ ಸ್ಟೋರಿ ಓದಿ..

ಬಾಲಿವುಡ್ ನಲ್ಲಿ ಮತ್ತೊಂದು ಶೀತಲ ಸಮರ ಆರಂಭವಾಗಿದೆಯೇ.. ಎಂಗೇಜ್ ಮೆಂಟ್ ಮಾಡಿಕೊಂಡ ಬ್ಯೂಟಿ ಪ್ರಿಯಾಂಕ ಚೋಪ್ರಾ ಮತ್ತು ಕಂಗನಾ ರಣಾವತ್ ನಡುವೆ ಹೊಸ ವಿವಾದದ ಗಾಳಿ ಬೀಸಿದೆಯೇ? ಈ ಸ್ಟೋರಿ ಓದಿ..

ಪ್ರಿಯಾಂಕಾ ಛೋಪ್ರಾ ನಡವಳಿಕೆಯಿಂದ ನನಗೆ ಅಪ್ ಸೆಟ್ ಆಗಿದೆ ಎಂದು ಇನ್ನೊಬ್ಬ ಬಾಲಿವುಡ್ ಸುಂದರಿ ಕಂಗನಾ ಹೇಳಿದ್ದಾರೆ. ಯಾಕಪ್ಪಾ ಅಂತೀರಾ। ಹೇಳ್ತಿವಿ ಕೇಳಿ..

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಗೆಳೆಯ ಗಾಯಕ, ನಟ ನಿಕ್ ಜೊನಾಸ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಈ ವಿಷಯನ್ನು ನನಗೆ ತಿಳಿಸಿಲ್ಲ ಎಂಬುದು ಕಂಗನಾ ಆರೋಪ. ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ ತನ್ನ ಗೆಳತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಷ್ಯ ಇಷ್ಟೆ.. ಪ್ರಿಯಾಂಕಾ ಎಂಗೇಜ್ ಮಾಡಿಕೊಂಡ ವಿಚಾರ ನನಗೆ ಹೇಳಿಲ್ಲ ಎಂಬುದನ್ನು ತನಾಷೆಯಾಗಿ ಹೇಳುವಾಗ ಕಂಗನಾ ಮೇಲಿನಂತೆ ಆರೋಪಿಸಿದ್ದಾರೆ. ಕಂಗನಾ-ಪ್ರಿಯಾಂಕ ಇಬ್ಬರು ಫ್ಯಾಷನ್ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. 2017 ರ ಅಂತ್ಯದಲ್ಲಿ ಅಮೆರಿಕದಲ್ಲಿ ಪರಿಚಯದವರ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಮತ್ತು ನಿಕ್ ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಅವರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ಹಲವು ಕಡೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದು ಈಗ ರಿಂಗ್ ಬದಲಾಯಿಸಿಕೊಂಡಿದ್ದಾರೆ.

ಇನ್ನು ರಾಜಕಾರಣದ ಮಾತುಗಳನ್ನು ಆಗಾಗ ಆಡುತ್ತಿರುವ ಕಂಗನಾ ತಮ್ಮ ಮುಂದಿನ ಚಿತ್ರ ಮಣಿಕರ್ಣಿಕಾ ದ ಕ್ವೀನ್ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ.