ಬಾಲಿವುಡ್ 'ಕ್ವೀನ್' ಗಂಜಿ ಗಿರಾಕಿಯಾಗಿದ್ದು ಯಾವಾಗ?

First Published 6, Apr 2018, 7:41 PM IST
Know kangana ranaut fitness secret
Highlights

ಕಂಗನಾ ರನಾವತ್ ಬಾಲಿವುಡ್‌ನ ಕೆಚ್ಚಿನ ಲೇಡಿ ಎಂದೇ ಫೇಮಸ್. ಅಭಿನಯಕ್ಕೂ ಸೈ, ವಿವಾದಕ್ಕೂ ಜೈ ಅನ್ನುವ ಈ ಬಿಂಕದ ಸಿಂಗಾರಿ ಫಿಟ್‌ನೆಸ್ ವಿಷಯದಲ್ಲಿ ಎಂದೂ ರಾಜಿಮಾಡಿಕೊಳ್ಳಲ್ಲ.

ಕಂಗನಾ ರನಾವತ್ ಬಾಲಿವುಡ್‌ನ ಕೆಚ್ಚಿನ ಲೇಡಿ ಎಂದೇ ಫೇಮಸ್. ಅಭಿನಯಕ್ಕೂ ಸೈ, ವಿವಾದಕ್ಕೂ ಜೈ ಅನ್ನುವ ಈ ಬಿಂಕದ ಸಿಂಗಾರಿ ಫಿಟ್‌ನೆಸ್ ವಿಷಯದಲ್ಲಿ ಎಂದೂ ರಾಜಿಮಾಡಿಕೊಳ್ಳಲ್ಲ. ಹಿಮಾಚಲ ಪ್ರದೇಶದ ತಣ್ಣನೆಯ ಹವೆಯಲ್ಲಿದ್ದೂ ಸಿಡಿದೇಳುವ ಬೆಂಕಿಯಂಥ ಹುಡುಗಿ ತನ್ನ ಫಿಟ್‌ನೆಸ್ ರಹಸ್ಯಗಳನ್ನ ಎಗ್ಗಿಲ್ಲದೇ ಹಂಚಿಕೊಳ್ತಾರೆ. ಗಂಜಿ ಕುಡಿಯೋದರೊಂದಿಗೆ ಆರಂಭವಾಗುವ ಆಕೆಯ ದಿನಚರಿಯಲ್ಲಿ ಎಕ್ಸರ್‌ಸೈಸ್ ಎಂದೂ ಮಿಸ್ಸಾದದ್ದಿಲ್ಲ.

ಡಯೆಟ್ ಹೇಗಿರುತ್ತೆ? 
- ಬೆಳಗ್ಗೆ ಗಂಜಿ ಮತ್ತು ಎಗ್ ವೈಟ್ ಆಮ್ಲೆಟ್
- ಬ್ರಂಚ್‌ಗೆ ಹಣ್ಣು ಮತ್ತು ಪ್ರೊಟೀನ್ ಶೇಕ್
- ಮಧ್ಯಾಹ್ನ ಮನೆಯಲ್ಲಿ ಮಾಡಿದ ದಾಲ್, 2 ಚಪಾತಿ, ತರಕಾರಿ, ಗ್ರಿಲ್ಡ್ ಚಿಕನ್
- ಸಂಜೆ ಬ್ರೌನ್ ಬ್ರೆಡ್ ಮತ್ತು ಎಗ್‌ವೈಟ್ ಸ್ಯಾಂಡ್‌ವಿಚ್
- ರಾತ್ರಿ ಊಟಕ್ಕೆ ಸೂಪು, ಬೇಯಿಸಿದ ತರಕಾರಿ, ಚಿಕನ್ 
- ಇಡೀ ದಿನ ಚೆನ್ನಾಗಿ ನೀರು ಕುಡೀತಾರೆ. ಆಗಾಗ ಪಿಜ್ಜಾ ತಿನ್ನೋ ಖಯಾಲಿನೂ ಇದೆ

ಫಿಟ್‌ನೆಸ್ ಮಿಸ್ಸಾಗಲ್ಲ

ಕಂಗನಾ ಫಿಟ್‌ನೆಸ್ ಗುರು ಲೀನಾ ಮೊಗ್ರ. 
- ಪ್ರತಿದಿನ ಜಿಮ್‌ನಲ್ಲಿ 1 ರಿಂದ 2 ಗಂಟೆ ಎಕ್ಸರ್‌ಸೈಸ್ ಮಾಡ್ತಾರೆ.
- ವಾರಕ್ಕೊಮ್ಮೆ ಒಂದಿಷ್ಟು ಕಿಲೋಮೀಟರ್ ಓಡ್ತಾರೆ.
-  ಮಂಗಳವಾರ 45 ನಿಮಿಷ ಕಿಕ್ಬಾಕ್ಸಿಂಗ್ ಅಭ್ಯಾಸ ಮಾಡೋ ರೂಢಿ.
- ಬುಧವಾರ ರೆಸ್ಟ್ ತಗೊಂಡು ಗುರುವಾರ ಚಿಕ್ಕಪುಟ್ಟ ಎಕ್ಸರ್ ಸೈಸ್, ಶುಕ್ರವಾರ ಯೋಗ,  ಶನಿವಾರ ಹೃದಯ, ದೇಹದ ಸದೃಢತೆಗೆ ಬೇಕಾದ ಎಕ್ಸರ್ ಸೈಜ್‌ಗಳು.

loader