Asianet Suvarna News Asianet Suvarna News

ಆಸಿಸ್‌ಗೆ 28 ಸಾವಿರ ರೂ. ದೇಣಿಗೆ ಕೊಟ್ಟ ಜುಹಿ ಚಾವ್ಲಾ ಪುತ್ರ!

ಆಸಿಸ್ ಕಾಡ್ಗಿಚ್ಚಿಗೆ ಮರುಗಿದ ಜಗತ್ತು| ಕಾಡ್ಗಿಚ್ಚಿಗೆ ಸಿಕ್ಕು ನಲುಗಿರುವ ಆಸ್ಟ್ರೆಲೀಯಾ| ಆಸೀಸ್’ಗೆ 28 ಸಾವಿರ ರೂ. ದೇಣಿಗೆ ನೀಡಿದ ಜುಹಿ ಚಾವ್ಲಾ ಪುತ್ರ| ಬಾಲಿವುಡ್ ನಟಿ ಜುಹಿ ಚಾವ್ಲಾ ಪುತ್ರ ಅರ್ಜುನ್| ಪುತ್ರನ ಕಾರ್ಯ ಶ್ಲಾಘಿಷಿದ ನಟಿ ಜುಹಿ ಚಾವ್ಲಾ|

Juhi Chawla Son Arjun Donates To Australia Fire Relief
Author
Bengaluru, First Published Jan 18, 2020, 8:48 PM IST

ಮುಂಬೈ(ಜ.18): ಕಾಡ್ಗಿಚ್ಚಿಗೆ ಸಿಕ್ಕು ನಲುಗಿರುವ ಆಸ್ಟ್ರೆಲೀಯಾಗೆ ಬಾಲಿವುಡ್ ನಟಿ ಜುಹಿ ಚಾವ್ಲಾ ಪುತ್ರ ಅರ್ಜುನ್ 28 ಸಾವಿರ ರೂ. ದೇಣಿಗೆ ನೀಡಿದ್ದಾರೆ.

ಇಂಗ್ಲೆಂಡ್’ನಲ್ಲಿ ಓದುತ್ತಿರುವ 16 ವರ್ಷ ಪ್ರಾಯದ ಜುಹಿ ಚಾವ್ಲಾ ಪುತ್ರ ಅರ್ಜುನ್, ತಮ್ಮ ಪಾಕೆಟ್ ಮನಿಯಿಂದಲೇ 300 ಪೌಂಡ್ಸ್(28 ಸಾವಿರ ರೂ.) ದೇಣಿಗೆ ನೀಡಿರುವುದು ವಿಶೇಷ.

ಜೂಹಿ ಚಾವ್ಲಾ'ಪ್ರೇಮಲೋಕ'ದ ಹೀರೋ ಇವರೇ; ಇಂಟರೆಸ್ಟಿಂಗ್ ಲವ್ ಕಹಾನಿ!

ಈ ಕುರಿತು ಮಾಹಿತಿ ನೀಡಿರುವ ಜುಹಿ ಚಾವ್ಲಾ, ತಮ್ಮ ಮಗನ ಕಾರ್ಯವನ್ನು ಶ್ಲಾಘಿಸುವುದಾಗಿ ಹೇಳಿದ್ದಾರೆ. ಆಸಿಸ್ ಜನರ ನೋವನ್ನು ಅರ್ಥ ಮಾಡಿಕೊಂಡ ಅರ್ಜುನ್ ನಿಜಕ್ಕೂ ಒಳ್ಳೆಯ ಹೃದಯ ಹೊಂದಿದ್ದಾನೆ ಎಂದು ಜುಹಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಗುರು ಅವರ ‘ಕಾವೇರಿ ಕಾಲಿಂಗ್’ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಜುಹಿ, ಪ್ರಕೃತಿ ವಿನಾಶ ಎಂತಹ ಭೀಕರ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಆಸ್ಟ್ರೆಲೀಯಾದ ಕಾಡ್ಗಿಚ್ಚು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios