ನಟ ಜೂ.ಎನ್‌ಟಿಆರ್‌ಗೆ ಗಾಯಗಳಾಗಿವೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಅವರ ತಂಡ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಗಳ ನಂತರ ಎಂಟು ವಾರಗಳ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

ನಟ ಜೂ.ಎನ್‌ಟಿಆರ್‌ಗೆ ಗಾಯಗಳಾಗಿವೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಅವರ ತಂಡ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಗಳ ನಂತರ ಎಂಟು ವಾರಗಳ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಟಾಲಿವುಡ್‌ನಲ್ಲಿ ಸದ್ಯ ಗಾಯದ ಪರ್ವ ನಡೆಯುತ್ತಿದೆ. ಮೊನ್ನೆ ಬಾಲಯ್ಯ ಗಾಯಗೊಂಡಿದ್ದರು.

ಇತ್ತ ರಾಮ್ ಚರಣ್ ಕೂಡ ಆಸ್ಪತ್ರೆಯಲ್ಲಿದ್ದು, ಅವರ ಮಣಿಕಟ್ಟಿಗೆ ಆಪರೇಷನ್ ಆಗಿದೆ. ಈಗ ಜೂ.ಎನ್‌ಟಿಆರ್‌ ಕೂಡ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಅವರಿಗೆ ಗಾಯವಾಗಿದೆ ಎಂದು ಅವರ ತಂಡ ಅಧಿಕೃತವಾಗಿ ತಿಳಿಸಿದೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದು, ಈ ಸುದ್ದಿ ತಿಳಿಸಲು ವಿಷಾದವಿದೆ ಎಂದಿದ್ದಾರೆ. ಸೋಮವಾರ ಸಂಜೆ ಜೂ.ಎನ್‌ಟಿಆರ್‌ ಅವರ ಭುಜಕ್ಕೆ ದುರದೃಷ್ಟವಶಾತ್ ಗಾಯವಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಸಂಪೂರ್ಣ ವೈದ್ಯಕೀಯ ಪರೀಕ್ಷೆಗಳ ನಂತರ, ಡಾ. ಜೆ. ಮಧುಸೂದನ್ ರಾವ್ ಮತ್ತು ಡಾ. ಆರ್. ಎ. ಪೂರ್ಣಚಂದ್ರ ತೇಜಸ್ವಿ ನೇತೃತ್ವದ ವೈದ್ಯರ ತಂಡವು, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆರರಿಂದ ಎಂಟು ವಾರಗಳ ಕಾಲ ಪೂರ್ತಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ತಾರಕ್ ಅವರ ಆರೋಗ್ಯ ಮತ್ತು ಚೇತರಿಕೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನಾವು ಕಾಲಕಾಲಕ್ಕೆ ನೀಡುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ತಂಡ ತಿಳಿಸಿದೆ.

ಭುಜಕ್ಕೆ ಗಾಯ?

ಆದರೆ, ಗಾಯ ಎಲ್ಲಿ ಮತ್ತು ಹೇಗೆ ಆಯಿತು ಎಂಬುದನ್ನು ತಂಡ ಬಹಿರಂಗಪಡಿಸಿಲ್ಲ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿದ್ದು, ಬಾಲಿವುಡ್ ನಟ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಬಹುಶಃ ಚಿತ್ರೀಕರಣದ ವೇಳೆ ಅವರ ಭುಜಕ್ಕೆ ಗಾಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಸಿನಿಮಾವನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.