ರಜನಿಕಾಂತ್ ನಟನೆಯ 'ಜೈಲರ್ 2' ಸಿನಿಮಾದ ಒಟಿಟಿ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಹಕ್ಕುಗಳನ್ನು ಪಡೆದುಕೊಂಡಿದ್ದು, ಇದು ತಮಿಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

ತಮಿಳು ಮತ್ತು ಮಲಯಾಳಂ ಪ್ರೇಕ್ಷಕರು ಕಾದು ಕುಳಿತಿರುವ 'ಜೈಲರ್ 2' ಸಿನಿಮಾ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ಒಟಿಟಿ ಹಕ್ಕುಗಳು ಈಗಾಗ್ಲೇ ಮಾರಾಟವಾಗಿವೆ. ಅಮೆಜಾನ್ ಪ್ರೈಮ್ ವಿಡಿಯೋ, 'ಜೈಲರ್ 2' ಚಿತ್ರದ ಒಟಿಟಿ ಹಕ್ಕುಗಳನ್ನು ಬರೋಬ್ಬರಿ 160 ಕೋಟಿ ರೂಪಾಯಿಗೆ ಖರೀದಿಸಿದೆ. ಇದು ತಮಿಳು ಚಿತ್ರರಂಗದಲ್ಲಿ ಇಲ್ಲಿಯವರೆಗಿನ ಅತಿ ದೊಡ್ಡ ಒಟಿಟಿ ಡೀಲ್ ಆಗಿದೆ. ನೆಲ್ಸನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಚಿತ್ರ 'ಜೈಲರ್'ನ ಎರಡನೇ ಭಾಗವೇ 'ಜೈಲರ್ 2'.

Add Asianetnews Kannada as a Preferred SourcegooglePreferred

ಈ ಚಿತ್ರದಲ್ಲಿ ರಜನಿಕಾಂತ್ ಅವರು 'ಮುತ್ತುವೇಲ್ ಪಾಂಡ್ಯನ್' ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. 2023ರಲ್ಲಿ ರಿಲೀಸ್ ಆದ 'ಜೈಲರ್' ಸಿನಿಮಾ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅಂದಿನಿಂದಲೇ ಅಭಿಮಾನಿಗಳು ಎರಡನೇ ಭಾಗಕ್ಕಾಗಿ ಕಾಯುತ್ತಿದ್ದರು. ಜನವರಿ 14 ರಂದು ಒಂದು ಪ್ರೊಮೋ ವಿಡಿಯೋ ಜೊತೆಗೆ ಎರಡನೇ ಭಾಗವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ನಂತರ ಮಾರ್ಚ್‌ನಲ್ಲಿ ಚಿತ್ರೀಕರಣ ಕೂಡ ಶುರುವಾಗಿದೆ.

ಮೊದಲ ಹಂತದ ಶೂಟಿಂಗ್ ಪಾಲಕ್ಕಾಡ್‌ನ ಅಟ್ಟಪ್ಪಾಡಿಯಲ್ಲಿ ನಡೆದಿತ್ತು. ಕೋಯಿಕ್ಕೋಡ್‌ನಲ್ಲೂ ಚಿತ್ರೀಕರಣ ಮಾಡಲಾಗಿದೆ. ಮಲಯಾಳಂನ ಖ್ಯಾತ ನಟ ಸೂರಜ್ ವೆಂಜರಮೂಡು ಕೂಡ ರಜನಿಕಾಂತ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಎರಡನೇ ಭಾಗದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ 'ಮ್ಯಾಥ್ಯೂ' ಎಂಬ ಡಾನ್ ಪಾತ್ರ ಇರುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಲಭ್ಯವಿರುವ ಮಾಹಿತಿ ಪ್ರಕಾರ, 'ಜೈಲರ್ 2' ನಲ್ಲಿ ಮೋಹನ್‌ಲಾಲ್ ಕೂಡ ಇರಲಿದ್ದಾರೆ.

ಆಕ್ಷನ್ ದೃಶ್ಯಗಳಿಂದ ತುಂಬಿರಲಿದೆ ಜೈಲರ್ 2

ತಮಿಳು ಚಿತ್ರರಂಗದಲ್ಲಿ ಅತಿ ದೊಡ್ಡ ಓಪನಿಂಗ್ ಪಡೆಯುವ ನಿರೀಕ್ಷೆ ಇರುವ ಪ್ರಾಜೆಕ್ಟ್‌ಗಳಲ್ಲಿ 'ಜೈಲರ್ 2' ಕೂಡ ಒಂದು. ಮೊದಲ ಭಾಗದಂತೆ ಎರಡನೇ ಭಾಗಕ್ಕೂ ಅನಿರುದ್ಧ್ ರವಿಚಂದರ್ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರ ಕೂಡ ಆಕ್ಷನ್ ದೃಶ್ಯಗಳಿಂದ ತುಂಬಿರಲಿದೆ ಎನ್ನಲಾಗಿದೆ. ರಜನಿಕಾಂತ್ ಅವರ ಕೊನೆಯದಾಗಿ ತೆರೆಕಂಡ ಚಿತ್ರ 'ಕೂಲಿ'. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಇದರಲ್ಲಿ ರಜನಿಕಾಂತ್ ಜೊತೆ ನಾಗಾರ್ಜುನ ಪ್ರಮುಖ ಪಾತ್ರದಲ್ಲಿದ್ದರೆ, ಅಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.