ಸೆಕ್ಸಿ ಕ್ವೀನ್ ಮಲ್ಲಿಕಾ ಶೆರಾವತ್ ಇತ್ತೀಚಿಗೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ. ಇದಕ್ಕೆ ಶೆರಾವತ್ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗುತ್ತೆ! 

ನೀರಲ್ಲಿ ಮೀನಾಗಿ ಬಿಕಿನಿ ತೊಟ್ಟ ನಟಿ!

ಇತ್ತೀಚಿಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮೀಟೂ ಆಂದೋಲನದ ಬಗ್ಗೆ ಮಾತನಾಡುತ್ತಾ, ಮೀಟೂ ಬಗ್ಗೆ ನನಗೆ ಇದುವರೆಗೂ ಯಾರೂ ಪ್ರಶ್ನಿಸಿಲ್ಲ. ನಾನು ಬೋಲ್ಡ್ ಹುಡುಗಿ. ಹಾಗಾಗಿ ಅಂತಹ ಪ್ರಶ್ನೆಯನ್ನು ಕೇಳುವ ಧೈರ್ಯ ಯಾರೂ ಮಾಡಿಲ್ಲ. ಇದೊಂದು ಒಳ್ಳೆಯ ಬೆಳವಣಿಗೆ. ಇದರ ಬಗ್ಗೆ ಚರ್ಚಿಸಲು ಒಂದು ವೇದಿಕೆ ಸಿಕ್ಕಿದೆ. ಕೆಲಸ ಮಾಡುವ ಸ್ಥಳದಲ್ಲಿ ಸೇಫ್ ವಾತಾವರಣ ಹೊಂದುವುದು ಪ್ರತಿ ಗಂಡು - ಹೆಣ್ಣಿನ ಹಕ್ಕು. ಈ ಆಂದೋಲನ ಪ್ರತಿಯೊಬ್ಬರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದಿದ್ದಾರೆ. 

ಕಣ್ಸನ್ನೆ ಪ್ರಿಯಾಗೆ ನಾನೇನು ಕಡಿಮೆ, ಟೀನಾ ಮದರಂಗಿ ಮಾಯೆ!

ಹೀಗೆ ಮಾತನಾಡುತ್ತಾ, ನಾನು ಸಾಕಷ್ಟು ಸಿನಿಮಾ ಆಫರ್ ಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಯಾಕಂದರೆ ಕೆಲ ನಟರು, ನಿರ್ದೇಶಕರು, ನಿರ್ಮಾಪಕರು ಅವರ ಗರ್ಲ್ ಫ್ರೆಂಡನ್ನೇ ಹಿರೋಯಿನ್ ಮಾಡಿಕೊಂಡಿದ್ದಾರೆ. ನಾನವರ ಗರ್ಲ್ ಫ್ರೆಂಡ್ ಅಲ್ಲ ಅನ್ನೋ ಕಾರಣಕ್ಕೆ ಅವಕಾಶ ಕೈ ತಪ್ಪಿತು ಎಂದಿದ್ದಾರೆ.