ನವದೆಹಲಿ[ಜೂ. 26]  ಮಲಯಾಳಂನ  ‘ಒರು ಅಡಾರ್‌ ಲವ್‌’ ಚಿತ್ರದ ಕಣ್ಣು ಹೊಡೆಯುವ ಸೀನ್ ವರ್ಷದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿತ್ತು. 

ಭಾರತೀಯ ನಾಗರಿಕೆ ಸೇವೆ ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದ ಟೀನಾ ಡಾಬಿ ಖಾನ್ ತಮ್ಮನ್ನು ತಾವು ಕಾಶ್ಮೀರಿ ಸೊಸೆ ಎಂದು ಕರೆದುಕೊಂಡಿದ್ದಾರೆ. ಟೀನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಣ್ಣು ಹೊಡೆಯುವ ವಿಡಿಯೋ ಒಂದನ್ನು ಶೇರ್ ಮಾಡಿದ್ದು ನೆಟ್ಟಿಗರಿಂದ ಸಖತ್ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಪತಿಯೊಂದಿಗೆ ಟಾಪರ್ ಟೀನಾ ಲುಂಗಿ ಡ್ಯಾನ್ಸ್

2015 ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದರು. ಅದೇ ವರ್ಷದ ಪರೀಕ್ಷೆಯಲ್ಲಿ ಸೆಕೆಂಡ್ ಪ್ಲೇಸ್ ಬಂದಿದ್ದ ಅಥಾರ್ ಜತೆ ಡೇಟಿಂಗ್ ಮಾಡಲು ಶುರುಹಚ್ಚಿಕೊಂಡಾಗ ಸೋಶಯಲ್ ಮೀಡಿಯಾ ಟೀನಾ ಪ್ರತಿಯೊಂದು ನಡವಳಿಕೆಯನ್ನು ಗಮನಿಸತೊಡಗಿತ್ತು. ಇಬ್ಬರು ನಂತರ 2018 ರಲ್ಲಿ ಮದುವೆಯಾಗಿದ್ದು ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

 

 
 
 
 
 
 
 
 
 
 
 
 
 

😍

A post shared by Tina Dabi Khan (@dabi_tina) on Jun 22, 2019 at 10:05am PDT