ದಬಾಂಗ್ ನಟಿ ಸೋನಾಕ್ಷಿ ಸಿನ್ಹಾ ಲವ್ ಕಹಾನಿ ಇದುವರೆಗೂ ಹೊರ ಬಂದಿರಲಿಲ್ಲ. ತಮ್ಮ ಹಳೆ ಲವ್ ಕಹಾನಿ ಬಗ್ಗೆ ಸೋನಾಕ್ಷಿ ಬಾಯಿ ಬಿಟ್ಟಿದ್ದಾರೆ. 

ಹಿಂದೆ ನಾನು ಸೆಲಬ್ರಿಟಿಯೊಬ್ಬರ ಜೊತೆ ಡೇಟಿಂಗ್ ನಡೆಸಿದ್ದೆ. ಆದರೆ ಈ ವಿಷಯ ಹೊರ ಜಗತ್ತಿಗೆ ತಿಳಿದಿಲ್ಲ ಎಂದು ಕುತೂಹಲ ಹೆಚ್ಚಿಸಿದ್ದಾರೆ. ಯಾರೂ ಆ ಸೆಲಬ್ರಿಟಿ ಎಂಬುದನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸರ್ವಮಂಗಳ ಮಾಂಗಲ್ಯೇ’ ನಟಿ

ಸಂದರ್ಶನವೊಂದರಲ್ಲಿ ಡೇಟಿಂಗ್ ಬಗ್ಗೆ ವಿಚಾರಿಸಿದಾಗ, ನನ್ನ ತಂದೆ-ತಾಯಿ ಸುಶೀಲನಾದ, ಗುಣವಂತನಾದ ಹುಡುಗನ ಜೊತೆ ನಾನು ಡೇಟಿಂಗ್ ಮಾಡುವುದನ್ನು ಇಷ್ಟಪಡುತ್ತಾರೆ. ಆದರೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ಆ ರೀತಿ ಇಲ್ಲ’ ಎಂದಿದ್ದಾರೆ.

ಮದುವೆಯಾಗದೇ ಗಂಡು ಮಗುವಿಗೆ ಜನ್ಮ ನೀಡಿದ ಅರ್ಜುನ್ ರಾಂಪಾಲ್ ಗೆಳತಿ 

ಬಂಟಿ ಸಜ್ದೇಶ್ ಜೊತೆ ಸೋನಾಕ್ಷಿ ಡೇಟಿಂಗ್ ನಡೆಸುತ್ತಿದ್ದರು ಎಂಬ ಮಾತು ಕೇಳಿ ಬಂದಿತ್ತು. ಇದನ್ನು ಅವರು ತಳ್ಳಿ ಹಾಕಿದ್ದರು. ಯಾರನ್ನು ಮದುವೆಯಾಗುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ನನಗೆ ಮದುವೆ ನಿಗದಿಯಾದಾಗ ನಾನೇ ಜಗತ್ತಿಗೆ ತಿಳಿಸುತ್ತೇನೆ. ಇಂತಹ ವಿಚಾರವನ್ನು ಮುಚ್ಚಿಡುವುದರಲ್ಲಿ ನಂಬಿಕೆ ಇಲ್ಲ. ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ. ಇನ್ನೂ ಇದರ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.