ಗಂಡು ಮಗುವಿಗೆ ಜನ್ಮ ನೀಡಿದ ಅರ್ಜುನ್ ರಾಂಪಾಲ್ ಗೆಳತಿ ಗ್ಯಾಬ್ರಿಲ್ಲಾ | ಮಗುವಿನ ಮೊದಲ ಫೋಟೋ ರಿವೀಲ್ ಮಾಡಿದ ಗ್ಯಾಬ್ರಿಲ್ಲಾ 

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗರ್ಲ್ ಫ್ರೆಂಡ್ ಗ್ಯಾಬ್ರಿಲ್ಲಾ ದೆಮೆಟ್ರಿಯಾದೇಸ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅರ್ಜುನ್ ಮಗನನ್ನು ಎತ್ತಿಕೊಂಡಿರುವ ಫೋಟೋವನ್ನು ಗ್ಯಾಬ್ರಿಲ್ಲಾ ಶೇರ್ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಅರ್ಜುನ್ ರಾಂಪಾಲ್ ಗೆ ಈಗಾಗಲೇ ಮದುವೆಯಾಗಿದ್ದು ಮಹಿಕಾ ಹಾಗೂ ಮೈರಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರಿಬ್ಬರೂ ಗ್ಯಾಬ್ರಿಲ್ಲಾರನ್ನು ನೋಡಲು ಆಸ್ಪತ್ರೆಗೆ ಬಂದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಅರ್ಜುನ್ ಮೆಹರ್ ಜೆಸಿಯಾ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾಗಿ 20 ವರ್ಷದ ನಂತರ ಕಳೆದ ವರ್ಷ ಇಬ್ಬರೂ ಬೇರೆ ಬೇರೆಯಾಗಿದ್ದರು. ನಂತರ ಗ್ಯಾಬ್ರಿಲ್ಲಾ ಜೊತೆ ಲೀವಿಂಗ್ ರಿಲೇಶನ್ ಷಿಪ್ ನಲ್ಲಿದ್ದರು. ಇವರಿಬ್ಬರ ಸಂಬಂಧವನ್ನು ಮಕ್ಕಳು ಒಪ್ಪಿಕೊಂಡಿದ್ದಾರೆ.