Asianet Suvarna News Asianet Suvarna News

ಗುರುತೇ ಸಿಗದಷ್ಟು ಬದಲಾದ ಹುಚ್ಚ ನಟಿ ರೇಖಾ: ಏನಾಯ್ತು ಜಿಂಕೆ ಮರಿಗೆ? ಅಭಿಮಾನಿಗಳಲ್ಲಿ ಆತಂಕ!

ಸ್ಯಾಂಡಲ್ವುಡ್‌ನ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡ ನಟಿ. ಗೋಲ್ಡನ್ ಸ್ಟಾರ್ ಗಣೇಶ್, ಕಿಚ್ಚ ಸುದೀಪ್ ರಂತಹ ಟಾಫ್ ಸ್ಟಾರ್ಗಳ ನಾಯಕಿ ಚಿತ್ರ, ಹುಚ್ಚ, ಚೆಲ್ಲಾಟ, ಹುಡುಗಾಟದಂತಹ ಬಿಗ್ಗೆಸ್ಟ್ ಹಿಟ್ ಕೊಟ್ಟ ನಟಿ,   14 ವರ್ಷ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆದಾಕೆ 2014ರಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು.

huchcha actress rekha vedavyas new look leaves fans shocked gvd
Author
First Published Sep 17, 2023, 9:23 PM IST

ಸ್ಯಾಂಡಲ್ವುಡ್‌ನ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡ ನಟಿ. ಗೋಲ್ಡನ್ ಸ್ಟಾರ್ ಗಣೇಶ್, ಕಿಚ್ಚ ಸುದೀಪ್ ರಂತಹ ಟಾಫ್ ಸ್ಟಾರ್ಗಳ ನಾಯಕಿ ಚಿತ್ರ, ಹುಚ್ಚ, ಚೆಲ್ಲಾಟ, ಹುಡುಗಾಟದಂತಹ ಬಿಗ್ಗೆಸ್ಟ್ ಹಿಟ್ ಕೊಟ್ಟ ನಟಿ,   14 ವರ್ಷ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆದಾಕೆ 2014ರಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು. ಇದೀಗ ಮತ್ತೆ ರೇಖಾ ಬಂದಿದ್ದಾರೆ. ಆದರೆ ಬದಲಾದ ಲುಕ್ನಲ್ಲಿ ರೇಖಾರನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.. ಏನಾಯ್ತು ರೇಖಾಗೆ ..? ಇಷ್ಟು ದಿನ ಎಲ್ಲಿದ್ರು..? ಹೇಗಿದ್ದರು..? ಈಗ ಯಾಕೆ ಹೀಗಾಗಿದ್ದಾರೆಂದು ಪ್ರಶ್ನಿಸುತ್ತಿದ್ದಾರೆ. ಜಿಂಕೆಮರಿ ರೇಖಾ ಅಂದ್ರೆ ಆ ಕಾಲಕ್ಕೆ ಅದೆಷ್ಟು ಕ್ರೇಜ್.ಈ ಸುಂದರಿಯ ಕಣ್ಣುಗಳಿಗೆ ಹುಡುಗರು ಅದೆಷ್ಟು ಫಿದಾ ಆಗಿಬಿಟ್ಟಿದ್ದರು. 

ಸುಂದರ ಹುಡುಗಿ ಕಂಡ್ರೆ ಸಾಕು.. ಜಿಂಕೆಮರಿ ಓಡ್ತಾ ಐತೆ ನೋಡ್ಲಾ ಮಗಾ ಎನ್ನುತ್ತಿದ್ದರು ಅಷ್ಟು ಹುಚ್ಚೆಬ್ಬಿಸಿದ್ದ ನಟಿ ಚಿತ್ರ ರೇಖಾ. ಹಾಗೆ ನೋಡಿದ್ರೆ ರೇಖಾ ಬೆಂಗಳೂರಿನವರೆ ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾರಂಗಕ್ಕೆ ಬಂದವರು. ಮೊದಲ ಕನ್ನಡ ಚಿತ್ರವೇ ಸುದೀಪ್ ಜೊತೆಗಿನ ಹುಚ್ಚ.. ಸ್ಯಾಂಡಲ್ವುಡ್ನ ಟಾಪ್ ಸ್ಟಾರ್ ಕಿಚ್ಚ ಸುದೀಪ್ ಜೊತೆಗೆ ನಟಿಸೊ ಅದೃಷ್ಟ ಈಕೆಯದ್ದಾಗಿತ್ತು. ಸುದೀಪ್ ಜೋಡಿಯಾಗಿ ನಟಿಸಿದ್ದ ಹುಚ್ಚ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ಟಾಗಿತ್ತು. ರೇಖಾ ಯುವ ಹೃದಯಗಳ ಡ್ರೀಮ್ ಗರ್ಲ್ ಆಗಿಬಿಟ್ಟರು. ಸಕ್ಸಸ್ ಅನ್ನೋದು ಹಾಗೆ ಒಮ್ಮೆ ಬೆನ್ನತ್ತಿದ್ರೆ ಅದು ಸಾಕು ಅನ್ನುವಷ್ಟರ ಮಟ್ಟಿಗೆ ಬೆನ್ನತ್ತುತ್ತೆ. ಬಹುಷಃ ರೇಖಾ ವಿಚಾರದಲ್ಲೂ ಅದೇ ಆಗಿತ್ತು. ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದರು. 

‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ಹುಡುಗಾಟ, ‘ಚೆಲ್ಲಾಟ’ ‘ಪರಿಚಯ’, ‘ಬಾಸ್’, ‘ಬೆಂಕಿ ಬಿರುಗಾಳಿ’, ‘ಲೂಸ್ಗಳು’, ‘ಪರಮಶಿವ’ ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ನಟಿಸಿ ಮೋಡಿ ಮಾಡಿದರು. ಇಷ್ಟೆಲ್ಲ ಯಶಸ್ಸಿನ ತುದಿಯಲ್ಲಿದ್ದ ಚೆಲುವೆ ರೇಖಾ ವೇದವ್ಯಾಸ್ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಮಾಯವಾಗಿಬಿಟ್ಟರು.ಕಳೆದ 9 ವರ್ಷಗಳಿಂದ ರೇಖಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಮೊನ್ನೆ ಇದ್ದಕ್ಕಿದ್ದಂತೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ರೇಖಾ ವೇದವ್ಯಾಸ್ ಪ್ರತ್ಯಕ್ಷ ಆಗಿದ್ದಾರೆ. ಪ್ರೋಮೊ ರಿಲೀಸ್ ಆಗಿದೆ. ಆದರೆ ಆಕೆಯನ್ನು ನೋಡಿದ ಕೆಲವರು ಶಾಕ್ ಆಗಿದ್ದಾರೆ. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅಭಿಮಾನಿಗಳಂತೂ ‘ಹುಚ್ಚ’ ನಟಿ ರೇಖಾಗೆ ಏನಾಯ್ತು ? ಯಾಕೆ ಹೀಗಿದ್ದಾರೆ..? ಬಹಳ ಸೊರಗಿದ್ದಾರೆ..? ತೆಳಗಾಗಿದ್ದಾರೆ ಇಷ್ಟೊಂದು ವೀಕ್ ಆಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 

ಒಂದೇ ತರ ಇದೆ ಶಾರುಖ್-ಯಶ್ ಲೈಫ್ ಜರ್ನಿ: ಇವರಿಬ್ಬರಿಗೆ ಲೈಫ್ ಕೊಟ್ಟಿದ್ದೇ ಸ್ಮಾಲ್ ಸ್ಕ್ರೀನ್!

ರೇಖಾ ನಿಜವಾಗಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರಾ..? ಮಾನಸಿಕ ಖಿನ್ನತೆಗೆ ಒಳಗಾಗಿದ್ದರಾ..?  ಇನ್ನೂ ಮದುವೆ ಯಾಕೆ ಆಗಿಲ್ಲ..? ಜೀವನದಲ್ಲಿ ಯಾರು ಇವರನ್ನು ಅಷ್ಟೊಂದು ಕಾಡಿತ್ತು.. ? ನೋಯಿಸಿದ್ದು..? ಯಾರಿಂದಲಾದರೂ ಮೋಸಕ್ಕೆ ಒಳಗಾದರಾ..? ನಿಜ್ಜಕ್ಕೂ ನಮ್ಮೆಲ್ಲರ ಫೇವರಿಟ್ ರೇಖಾಗೆ ಏನಾಗಿದೆ ಎಂದು ಅವರ ಅಭಿಮಾಣಿಗಳು ಕೇಳುತ್ತಿದ್ದಾರೆ. ರೇಖಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಕೆಲ ತಿಂಗಳ ಹಿಂದಿನಿಂದಲೂ ಆಕ್ಟೀವ್ ಆಗಿದ್ದರು. ಅಲ್ಲಿ ರೀಲ್ಸ್ ಮಾಡುತ್ತ ಮತ್ತೆ ಅಭಿಮಾನಿಗಳಿಗೆ ಹತ್ತಿರವಾಗಿದ್ದರು ಆದ್ರೆ ಚಿತ್ರರಂಗದಿಂದ ದೂರವಿದ್ದ 9 ವರ್ಷಗಳು ಏನು ಮಾಡಿದರು ..? ಅನ್ನೋ ಪ್ರಶ್ನೆ ಹಾಗೆ ಉಳಿದಿದ್ದು ಈ ತೆಲುಗಿನ ಕಾರ್ಯಕ್ರಮ ಭಾನುವಾರ ಪ್ರಸಾರವಾಗಲಿದ್ದು ಬಹುಷಃ ಈ ಎಲ್ಲ ಪ್ರಶ್ನೆಗಳಿಗೆ ಅಂದೆ ಉತ್ತರ ಸಿಗಲಿದೆ.

Follow Us:
Download App:
  • android
  • ios