ನವದೆಹಲಿ (ಆ. 06): ಹೃತಿಕ್ ರೋಷನ್ ಸೂಪರ್ 30 ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾಗಿ ತಿಂಗಳಿಗೆ ಹತ್ತಿರವಾಗುತ್ತಾ ಬಂದರೂ ಸ್ವಲ್ಪವೂ ಚಾರ್ಮ್ ಕುಂದಿಲ್ಲ. ಕಳೆದ 24 ದಿನಗಳಲ್ಲಿ 137. 93 ಕೋಟಿ ಗಳಿಕೆ ಕಂಡಿದೆ. 

‘ಸೂಪರ್ 30’ ಗೆ 3 ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ

ರಣವೀರ್ ಸಿಂಗ್ ಅಲಿಯಾ ಭಟ್ ಗುಲ್ಲಿ ಬಾಯ್ ಸಿನಿಮಾ 140.25 ಕೋಟಿ ಗಳಿಕೆ ಕಂಡಿತ್ತು. ಈ ದಾಖಲೆಯನ್ನು ಸೂಪರ್ 30 ಮುರಿದಿದೆ. 

ವಿಶ್ಲೇಷಣೆಕಾರ ತರುಣ್ ಆದರ್ಶ ಪ್ರಕಾರ ಸೂಪರ್ 30 2019 ನೇ ಸಾಲಿನ ಅತೀ ಹೆಚ್ಚು ಗಳಿಕೆ ಕಂಡ 6 ನೇ ಚಿತ್ರವಾಗಿರಲಿದೆ. 

 

ಬಿಹಾರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಸರ್ಕಾರ ಸೂಪರ್ 30 ಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಮೊದಲು ಬಿಹಾರ ಹಾಗೂ ರಾಜಸ್ಥಾನದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು. ಆನಂತರ ಉತ್ತರ ಪ್ರದೇಶದಲ್ಲಿಯೂ ನೀಡಲಾಯಿತು.