ಹೃತಿಕ್ ರೋಷನ್ ಅಭಿನಯದ ಸೂಪರ್ 30 ಸಿನಿಮಾ ಭರ್ಜರಿ ಯಶಸ್ಸಿನೊಂದಿಗೆ ಬಾಕ್ಸಾಫೀಸ್ ನಲ್ಲು ಮುನ್ನುಗ್ಗುತ್ತಿದೆ. ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಈಗ ಈ ಸಿನಿಮಾಗೆ ದೊಡ್ಡ ಬೆಂಬಲ ಸಿಕ್ಕಿದೆ. 

ಬಿಹಾರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಸರ್ಕಾರ ಸೂಪರ್ 30 ಗೆ ತೆರಿಗೆ ವಿನಾಯಿತಿ ನೀಡಿದೆ. ಮೊದಲು ಬಿಹಾರ ಹಾಗೂ ರಾಜಸ್ಥಾನದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು. ಈಗ ಉತ್ತರ ಪ್ರದೇಶದಲ್ಲಿಯೂ ಟ್ಯಾಕ್ಸ್ ಫ್ರೀ ನೀಡಲಾಗಿದೆ. ಇದಕ್ಕೆ ಹೃತಿಕ್ ರೋಷನ್ ಯೋಗಿ ಆದಿತ್ಯನಾಥ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

 

ಖ್ಯಾತ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಜೀವನಾಧಾರಿತ ಸಿನಿಮಾ. ಐಐಟಿಯಲ್ಲಿ ಓದುವ ಕನಸು ಹೊತ್ತ ವಿದ್ಯಾರ್ಥಿಗಳಿಗಾಗಿ ಆನಂದ್ ಕುಮಾರ್ ಎಜುಕೇಶನಲ್ ಕ್ಲಾಸ್ ನಡೆಸುತ್ತಾರೆ. ದುರಂತ ಎಂದರೆ ಆನಂದ್ ಕುಮಾರ್ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ವಿಕಾಸ್ ಬಹ್ಲ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.