ಬಹು ನಿರೀಕ್ಷಿತ ಬಾಲಿವುಡ್ ಚಿತ್ರ 'ಧಡಕ್' ಟ್ರೈಲರ್ ಬಿಡುಗಡೆಗೆ ಗೈರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದ ಅರ್ಜುನ್ ಕಪೂರ್ ಇದೀಗ ಮತ್ತೆ ಸಹೋದರಿಯ ಬಗ್ಗೆ ತಮ್ಮ ಮನದಾಳವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಅರ್ಜುನ್ ಕಪೂರ್ ಸಹೋದರಿ ಜಾಹ್ನವಿ ಕಪೂರ್ ಅಭಿನಯಕ್ಕೆ ಏನು ಹೇಳಿದ್ದಾರೆ? ಮುಂದೆ ಓದಿ...
ಮುಂಬೈ: ಬಹು ನಿರೀಕ್ಷಿತ ಬಾಲಿವುಡ್ ಚಿತ್ರ 'ಧಡಕ್' ಟ್ರೈಲರ್ ಬಿಡುಗಡೆಗೆ ಗೈರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದ ಅರ್ಜುನ್ ಕಪೂರ್ ಇದೀಗ ಮತ್ತೆ ಸಹೋದರಿ ಜಾಹ್ನವಿ ಕಪೂರ್ ಬಗ್ಗೆ ತಮ್ಮ ಮನದಾಳವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಅರ್ಜುನ್ ಕಪೂರ್ ಸಹೋದರಿಯ ಅಭಿನಯಕ್ಕೆ ಏನು ಹೇಳಿದ್ದಾರೆ? ಎಂಬ ಕುತೂಹಲ ನಿಮ್ಮನ್ನು ಕಾಡುತ್ತಿರಬಹುದು
ದುರಂತ ಸಾವಿಗೀಡಾದ ಬಹುಭಾಷಾ ತಾರೆ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಅಭಿನಯದ 'ಧಡಕ್' ಚಿತ್ರದ ಟ್ರೈಲರ್ ಸೋಮವಾರ ಬಿಡುಗಡೆಗೆಯಾಗಿದೆ. ಈಶಾನ್ ಖಟ್ಟರ್ ಮತ್ತು ಜಾಹ್ನವಿ ಕಪೂರ್ ಅಭಿನಯದ ಟ್ರೈಲರ್ ಗೆ ಪ್ರೇಕ್ಷಕ ಮಹಾಪ್ರಭುವಿನಿಂದ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ
ಸಹೋದರಿ ಬಳಿ ಕ್ಷಮೆ ಕೇಳಿದ ಅರ್ಜುನ್ ಕಪೂರ್
ಈಗ ಇಸ್ಟ್ರಾಗ್ರಾಮ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅರ್ಜುನ್ ಕಪೂರ್ ಸಹೋದರಿಯನ್ನು ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ. ನೀನು ಹೊಸ ಸುಂದರವಾದ ಪ್ರಯಾಣವನ್ನು ಆರಂಭಿಸಿದ್ದೀಯ. ನೀನು ಮತ್ತು ಇಶಾನ್ ಅಭಿನಯ ಅದ್ಭುತವಾಗಿದ್ದು ಬಾಲಿವುಡ್ ನಲ್ಲಿ ಮ್ಯಾಜಿಕ್ ಮಾಡಲಿದ್ದೀರ.. ಇಬ್ಬರಿಗೂ ನನ್ನ ಕಡೆಯಿಂದ ಶುಭ ಹಾರೈಕೆ ಎಂದು ಸಹೋದರಿಯನ್ನು ಉದ್ದೇಶಿಸಿ ಹೇಳಿದ್ದಾರೆ.
