ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಜಾಹ್ನವಿ ಕಪೂರ್ ಬಳಿ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳುವುದು ಮಾತ್ರವಲ್ಲದೇ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಅರ್ಜುನ್ ಕಪೂರ್ ಕ್ಷಮೆ ಕೇಳಲು ಕಾರಣ ಏನು?  ಇಲ್ಲಿದೆ ಉತ್ತರ.

ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಜಾಹ್ನವಿ ಕಪೂರ್ ಬಳಿ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳುವುದು ಮಾತ್ರವಲ್ಲದೇ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಅರ್ಜುನ್ ಕಪೂರ್ ಕ್ಷಮೆ ಕೇಳಲು ಕಾರಣ ಏನು? ಇಲ್ಲಿದೆ ಉತ್ತರ.

ದುರಂತ ಸಾವಿಗೀಡಾದ ಬಹುಭಾಷಾ ತಾರೆ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಅಭಿನಯದ 'ಧಡಕ್' ಚಿತ್ರದ ಟ್ರೈಲರ್ ಗೆ ಬಿಡುಗಡೆಗೆ ಸಿದ್ಧವಾಗಿದೆ. ಈಶಾನ್ ಖಟ್ಟರ್ ಮತ್ತು ಜಾಹ್ನವಿ ಕಪೂರ್ ಅಭಿನಯದ ಚಿತ್ರದ ಪೋಸ್ಟರ್ ಗಳು ಈಗಾಗಲೇ ಸದ್ದು ಮಾಡುತ್ತಿದೆ. ಆದರೆ ಸಹೋದರಿಯ ಮೊದಲ ಚಿತ್ರದ ಟ್ರೈಲರ್ ಬಿಡುಗಡೆಯನ್ನು ಅರ್ಜುನ್ ಕಪೂರ್ ತಪ್ಪಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಅವರು ಸಹೋದರಿಯ ಕ್ಷಮೆ ಕೇಳಿದ್ದಾರೆ.

Scroll to load tweet…

ಮುಂಬೈನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಆಗ್ತಾ ಇದ್ರೆ ಅತ್ತ ಅರ್ಜುನ್ ಕಪೂರ್ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಅವರು ಭಾರತದಲ್ಲಿ ಇದ್ದರೆ ಲಾಂಚ್ ತಪ್ಪಿಸಿಕೊಳ್ತಾ ಇರಲಿಲ್ಲ. ಆದರೆ ಅರ್ಜುನ್ ಲಂಡನ್ ನಲ್ಲಿ ಚಿತ್ರವೊಂದರ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

Scroll to load tweet…

ಸಹೋದರಿ ಮತ್ತು ಕುಟುಂಬದೊಂದಿಗೆ ಇರುವ ಫೋಟೋದೊಂದಿಗೆ ಟ್ವೀಟ್ ಮಾಡಿರುವ ಅರ್ಜುನ್ ,ನೀನು ಮುಂದಿನ ದಿನಗಳಲ್ಲಿ ಪ್ರೇಕ್ಷಕ ಪ್ರಭುವಿನ ಮನಸ್ಸಿನಲ್ಲಿ ನೆಲೆಸುತ್ತೀಯಾ..ಮೊದಲಿಗೆ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತಿದ್ದೇನೆ. ನಾನು ಮುಂಬೈನಲ್ಲಿಲ್ಲ. ಆದರೆ ಚಿಂತೆ ಮಾಡಬೇಡ ನಾನು ಸದಾ ನಿನ್ನೊಂದಿಗೆ ಇರುತ್ತೇನೆ ಎಂದು ಟ್ವೀಟ್ ಮಾಡಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.