ನವದೆಹಲಿ (ಜು. 21): ವಿವಾದಾತ್ಮಕ ನಿರ್ದೇಶಕ ಲುವ್‌ ರಂಜನ್‌ರ ಮುಂದಿನ ಸಿನಿಮಾದಲ್ಲಿ ನಟಿಸಲು ನಟಿ ದೀಪಿಕಾ ಪಡುಕೋಣೆ ಚರ್ಚಿಸಿದ ಬೆನ್ನಲ್ಲೇ ದೀಪಿಕಾ ವಿರುದ್ಧ ಆಕ್ರೋಶಗೊಂಡ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ನಾಟ್‌ ಮೈ ದೀಪಿಕಾ’ ಅಭಿಯಾನ ಆರಂಭಿಸಿದ್ದಾರೆ. 

ಕಿರುತೆರೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ವಿನೋದ್ ರಾಜ್ ರನ್ನು ಕಡೆಗಣಿಸುತ್ತಿದ್ದಾರಾ?

ನಿರ್ದೇಶಕ ರಂಜನ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪವಿದೆ. ಅಲ್ಲದೇ ಕೋಮುವಾದಿ ಮತ್ತು ಪುರುಷ ಪ್ರಧಾನ ಸಿನಿಮಾಗಳನ್ನೇ ನಿರ್ದೇಶಿಸುತ್ತಾರೆ. ಅವರ ಸಿನಿಮಾದಲ್ಲಿ ಮಹಿಳೆಯರನ್ನು ತುಚ್ಛವಾಗಿ ಚಿತ್ರಿಸಲಾಗುತ್ತದೆ ಎಂಬ ಆಪಾದನೆ ಇದೆ.

ಕಣ್ಣಲ್ಲೇ ರೇಪ್: ನಟಿ ಇಶಾ ಗುಪ್ತಾ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಉದ್ಯಮಿ!

ಹೀಗಾಗಿ ರಂಜನ್‌ರ ನಿರ್ದೇಶನದ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಬಾರದು, ಅಂತಹ ನಿರ್ದೇಶಕರ ಜತೆ ಸಿನಿಮಾ ಮಾಡಿದರೆ ನೀವೂ ‘ಕಪಟಿಗಳು’ ಎಂದು ಸಾಬೀತಾಗುತ್ತದೆ ಎಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.