ಕಿರುತೆರೆ ಡ್ಯಾನ್ಸ್‌ ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್‌ಗೆ ಜಡ್ಜ್‌ ಆಗಿ ಅವಕಾಶ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ವೀಕೆಂಡ್ ಬಂದ್ರೆ ಸಾಕು ಸಂಜೆ ಟಿವಿ ಮುಂದೆ ಕೂತು ವಾಹಿನಿಗಳಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋಗಳನ್ನು ಮಿಸ್ ಮಾಡದೇ ನೋಡುವ ಮಂದಿಯೇ ಹೆಚ್ಚು. ಬಟ್ ಕಾರ್ಯಕ್ರಮ ನೋಡುವ ಅಭಿಮಾನಿಗಳಿಗೆ ಏನೋ ಕೊರತೆ ಇದೆ ಎಂದೆನಿಸುತ್ತದೆ. ಇದರ ಬಗ್ಗೆ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ನಟ ವಿನೋದ್ ರಾಜ್‌ ಡ್ಯಾನ್ಸ್‌ ಮಾಡೋದ್ರಲ್ಲಿ ಎತ್ತಿದ ಕೈ. ಆದರೆ ಯಾಕೋ ಏನೋ ಗೊತ್ತಿಲ್ಲ ಕೆಲವೊಂದು ವಾಹಿನಿಗಳಿಗೆ ಇವರು ಪ್ರತಿಭೆ ಕಾಣಿಸಿದಂತೆ ಕಾಣಿಸುವುದಿಲ್ಲ. ಜಡ್ಜ್‌ ಆಗಿ ಕಾರ್ಯ ನಿರ್ವಹಿಸುವ ಎಲ್ಲಾ ಅರ್ಹತೆ ಇದ್ದರೂ ಇವರನ್ನು ವಾಹಿನಿಗಳು ಗುರುತಿಸುತ್ತಿಲ್ಲವೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಇಂದು ಶುರುವಾದ ಮಾತಲ್ಲ ಎಷ್ಟೋ ದಿನಗಳಿಂದ ಪ್ರೇಕ್ಷಕರು ಆಡುತ್ತಿರುವ ಮಾತು.

View post on Instagram

ನಿರ್ದೇಶಕ ಹಾಗೂ ನಟ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ವಿನೋದ್ ರಾಜ್‌ನನ್ನು ಪರಿಚಯಿಸಿದರು. ಅವರು ಒಟ್ಟು 27 ಸಿನಿಮಾಗಳಲ್ಲಿ ನಟಿಸಿ, ರಾಕ್ ಆ್ಯಂಡ್ ರೋಲ್ ಕಾರ್ಯಕ್ರಮಗಳಿಗೆ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಡ್ಯಾನ್ಸ್‌ ರಾಜ ಡ್ಯಾನ್ಸ್‌ ಚಿತ್ರದಲ್ಲಿ ವಿನೋದ್ ರಾಜ್‌ ಡ್ಯಾನ್ಸ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು.