ನಿಮ್ಮ ಸೀನಿಯರ್ ಸಂಬಳ ಕೇಳಿ ಹೊಟ್ಟೆಕಿಚ್ಚಾಗುತ್ತಿದ್ದರೆ, ಗೆಳೆಯರ ಪ್ಯಾಕೇಜ್ ಕೇಳಿ ಕರುಬುತ್ತಿದ್ರೆ ಇಲ್ಲಿದೆ ನೋಡಿ ಹೊಟ್ಟೆಗಿನ್ನಷ್ಟು ಬಿಸಿ ನೀರೋ ಬೀಳೋ ವಿಷಯ. ಏಕೆಂದರೆ ಈ ಸೆಲೆಬ್ರಿಟಿಗಳ ಡ್ರೈವರ್‌ಗಳು, ಬಾಡಿಗಾರ್ಡ್‌ಗಳು, ನಾನಿಗಳ ಸಂಬಳದ ಮುಂದೆ ನಿಮ್ಮ ಬಾಸ್ ಸಂಬಳವೂ ಜುಜುಬಿ ಎನಿಸಬಹುದು! ಯಾವುದಕ್ಕೂ ಒಂದು ಲೋಟ ಮಜ್ಜಿಗೆಯನ್ನು ಎದುರಿಗಿಟ್ಟುಕೊಂಡು ಓದಿ. 

ಕ್ವಾಲಿಫಿಕೇಶನ್ ಕಡಿಮೆಯೇ ಇರಬಹುದು. ಆದರೆ, ಪ್ರೈವೇಟ್ ಬದುಕೇ ಇಲ್ಲದ ಸೆಲೆಬ್ರಿಟಿಗಳನ್ನು ಕ್ಷಣಕ್ಷಣವೂ ನೋಡಿಕೊಳ್ಳಬೇಕು, ರಕ್ಷಣೆ ಒದಗಿಸಬೇಕು. ಕಾರು ಓಡಿಸಬೇಕು ಎಂಬುದೆಲ್ಲ ಕಡಿಮೆ ಕೆಲಸವಲ್ಲ. ಅದೆಲ್ಲ ಅರ್ಥವಾದರೂ ಇವರು ತೆಗೆದುಕೊಳ್ಳೋ ಸಂಬಳ ಹುಬ್ಬೇರಿಸುವಂತೆ ಮಾಡುತ್ತೆ. ಹಾಗಿದ್ದರೆ ಯಾರೆಲ್ಲ ಎಷ್ಟೆಷ್ಟು ಸಂಬಳ ತೆಗೆದುಕೊಳ್ತಾರೆ ನೋಡೋಣ ಬನ್ನಿ.

ಬ್ಯಾನರ್ ಗಳನ್ನು ಹಾಕದಂತೆ ಸೂರ್ಯ ಮನವಿ; ಹೆಲ್ಮೇಟ್ ಕೊಡಲು ಅಭಿಮಾನಿಗಳ ನಿರ್ಧಾರ!

ರುಖ್ ಖಾನ್ ಬಾಡಿಗಾರ್ಡ್

ಶಾರುಖ್ ಖಾನ್ ಬಾಡಿಗಾರ್ಡ್ ರವಿಸಿಂಗ್ ಈ ಬಾಲಿವುಡ್ ಬಾದ್‌ಶಾನನ್ನು ಸುರಕ್ಷಿತವಾಗಿರಿಸುವುದಕ್ಕೆ ವರ್ಷಕ್ಕೆ ಬರೋಬ್ಬರಿ 2.5 ಕೋಟಿ ರುಪಾಯಿಗಳನ್ನು ತೆಗೆದುಕೊಳ್ಳುತ್ತಾನೆ. ಎಲ್ಲಾದ್ರೂ ತಪ್ಪು ಓದಿದ್ನಾ ಎಂದು ಎರಡನೇ ಬಾರಿ ಓದ್ತಾ ಇದೀರಾ? ಎಷ್ಟು ಬಾರಿ ಓದಿದ್ರೂ ಅಷ್ಟೇ, ಎರಡೂವರೆ ಕೋಟಿನೇ.

ತೈಮೂರ್‌ನ ನಾನಿ

ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್‌ನ ಮುದ್ದಿನ ಮಗ ತೈಮೂರ್ ಅಲಿ ಖಾನ್ ಹುಟ್ಟಿದಾಗಿನಿಂದಲೇ ಸೆಲೆಬ್ರಿಟಿ. ಮಾಧ್ಯಮಗಳು ಆತನ ಒಂದೊಂದು ಚಟುವಟಿಕೆಯನ್ನೂ ದೊಡ್ಡದು ಮಾಡಿ ತೋರಿಸುತ್ತವೆ. ಈತನನ್ನು ನೋಡಿಕೊಳ್ಳುವ ನ್ಯಾನಿಗೆ ಕೊಡುವ ಸಂಬಳವನ್ನು ಸ್ವತಃ ಕರೀನಾ ಕಪೂರ್ ಹೇಳಿಕೊಂಡಿದ್ದಾಳೆ. ಈಕೆಗೆ ತಿಂಗಳಿಗೆ ಒಂದೂವರೆ ಲಕ್ಷ ನೀಡುತ್ತಾಳಂತೆ. ಓವರ್‌ಟೈಂ ಡ್ಯೂಟಿ ಮಾಡಿದ ತಿಂಗಳಲ್ಲಿ 1.75 ಲಕ್ಷ ರುಪಾಯಿಗಳನ್ನು ನೀಡುತ್ತಾಳಂತೆ. ಮಗನ ಖುಷಿಗಿಂತ ಈ ಹಣವೇನು ಹೆಚ್ಚಲ್ಲ ಅಂತಾಳೆ ಕರೀನಾ. 

ಸಲ್ಮಾನ್ ಖಾನ್ ಬಾಡಿಗಾರ್ಡ್

ಸಲ್ಮಾನ್‌ಖಾನ್‌ ತನ್ನ ಬಾಡಿಗಾರ್ಡ್ ಚಿತ್ರಕ್ಕೆ ಅದೆಷ್ಟು ಕೋಟಿಗಳನ್ನೋ ಬಾಚಿದನೋ ಗೊತ್ತಿಲ್ಲ, ಆದರೆ, ಸಲ್ಮಾನ್ ಖಾನ್‌ನ ಬಾಡಿಗಾರ್ಡ್ ಮಾತ್ರ ವರ್ಷಕ್ಕೆ 2 ಕೋಟಿ ತಗೋತಾನೆ. ಈ ಶೇರಾ ಕಳೆದ 20 ವರ್ಷಗಳಿಂದ ಆತನ ಬೆಸ್ಟ್ ಫ್ರೆಂಡ್ ಕೂಡಾ.

ರಾನು ಮಂದಾಲ್ ಗೆ 55 ಲಕ್ಷದ ಐಷಾರಾಮಿ ಮನೆ ಗಿಫ್ಟ್ ಕೊಟ್ರಾ ಸಲ್ಲುಭಾಯ್?

ದೀಪಿಕಾ ಪಡುಕೋಣೆಯ ಬಾಡಿಗಾರ್ಡ್

ದೀಪಿಕಾ ಪಡುಕೋಣೆ ತನ್ನ ಬಾಡಿಗಾರ್ಡನ್ನು ಸ್ವಂತ ಅಣ್ಣನಂತೆ ನೋಡುತ್ತಾಳೆ. ಅಷ್ಟೇ ಅಲ್ಲ, ಪ್ರತಿ ವರ್ಷ ಆತನಿಗೆ ರಾಖಿ ಕಟ್ಟುತ್ತಾಳೆ. ಈತನ ಹೆಸರು ಜಲಾಲ್. ಯಾವಾಗಲೂ ದೀಪಿಕಾಳ ನೆರಳಂತಿರುವ ಈತನ ವಾರ್ಷಿಕ ಸಂಬಳ 80 ಲಕ್ಷ ರುಪಾಯಿ. 

ಅಕ್ಷಯ್ ಕುಮಾರ್ ಬಾಡಿಗಾರ್ಡ್

ಅಕ್ಷಯ್‌ಕುಮಾರ್ ಬಾಲಿವುಡ್‌ನ ಫಿಟ್ಟೆಸ್ಟ್ ನಟ ಅಷ್ಟೇ ಅಲ್ಲ, ಕಳೆದ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದ ನಟ ಕೂಡಾ. ವರ್ಷಕ್ಕೆ 450 ಕೋಟಿ ರೂಪಾಯಿಯನ್ನು ಅಕ್ಷಯ್ ದುಡಿವಾಗ ಈತನ ಬಾಡಿಗಾರ್ಡ್ ಶ್ರೇಯಸ್‌ಗೆ ಅದರಲ್ಲಿ 1.2 ಕೋಟಿ ಕೊಡುವುದರಲ್ಲಿ ಅಂಥ ಆಶ್ಚರ್ಯವೇನೂ ಇಲ್ಲ ಬಿಡಿ. 

ಆಮಿರ್ ಖಾನ್ ಬಾಡಿಗಾರ್ಡ್

ಬಿ ಟೌನ್‌ನ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ತನ್ನ ಬಾಡಿಗಾರ್ಡ್ ಯುವರಾಜ್ ಘೋರ್ಪಡೆಗೆ 2 ಕೋಟಿ ರುಪಾಯಿಗಳನ್ನು ನೀಡುತ್ತಾನೆ. 

ನೀತಾ ಅಂಬಾನಿಯ ಚಾಲಕ

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿಯ ಲೈಫ್‌ಸ್ಟೈಲ್ ಬಹಳ ಲಕ್ಷುರಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಈಗ ಅಂಬಾನಿಯ ಮನೆಗೆ ಝೆಡ್ ಸೆಕ್ಯೂರಿಟಿಯೂ ಇದೆ. ಇವರ ಚಾಲಕನಾಗುವವನಿಗೆ ಕಂಪನಿಯೇ ತರಬೇತಿ ನೀಡಿ ಹಲವಾರು ಪರೀಕ್ಷೆಗಳನ್ನು ನಡೆಸುತ್ತದೆ. ಅವುಗಳಲ್ಲಿ ಪಾಸ್ ಆದ ಚಾಲಕನ ಆರಂಭಿಕ ಸಂಬಳವೇ ಮಾಸಿಕ 2 ಲಕ್ಷ. ಇದರೊಂದಿಗೆ ಊಟ ವಸತಿ ಫ್ರೀ. ಸಧ್ಯಕ್ಕೆ ನೀತಾರ ಚಾಲಕನ ವಾರ್ಷಿಕ ಸಂಬಳ 24 ಲಕ್ಷಗಳು.

ನೀತಾ ಅಂಬಾನಿ ಬ್ಯಾಗ್‌ ರೇಟ್‌ ಕೇಳಿದ್ರೆ ಸಾಲ ಮನ್ನಾನೇ ಮಾಡ್ಬೋದಿತ್ತು!

ಬಾಲಿವುಡ್ ನಟರ ಪಿಎಗಳ ಸರಾಸರಿ ಸಂಬಳ

ಇನ್ನು ಬಾಲಿವುಡ್ ನಟರ ಪಿಎಗಳೆಂದರೆ ಬ್ರಾಂಡ್ ಎಂಡೋರ್ಸ್‌ಮೆಂಟ್ ಶೂಟ್ ನಿಭಾಯಿಸುವುದರಿಂದ ಹಿಡಿದು, ಅವರಿಗೆ ಶೂಟಿಂಗ್ ಸಮಯದಲ್ಲಿ ಛತ್ರಿ ಹಿಡಿವ ತನಕ ಎಲ್ಲವನ್ನೂ ಮಾಡುತ್ತಾರೆ. ಇವರಂತೂ ಪೂರ್ತಿ ರೈಟ್ ಹ್ಯಾಂಡ್ ತರ. ಈ ಪಿಎಗಳಿಲ್ಲದೆ ನಟರಿಗೆ ಕೈಕಾಲಾಡದು. ಸಾಮಾನ್ಯವಾಗಿ ಬಹುತೇಕ ದೊಡ್ಡ ನಟರ ಪಿಎಗಳು ದಿನವೊಂದಕ್ಕೆ 5000 ರೂ. ಪಡೆಯುತ್ತಾರೆ. ಅಂದರೆ ವಾರ್ಷಿಕ 18 ಲಕ್ಷ ರುಪಾಯಿಗಳು. 

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!