ಸ್ಕೂಟಿಯಲ್ಲಿ ಹೋಗುವಾಗ ಬ್ಯಾನರ್ ಬಿದ್ದು ಟೆಕ್ಕಿ ಶುಭಶ್ರೀ ದಾರುಣ ಸಾವನ್ನಪ್ಪಿದ ನಂತರ ಸಾರ್ವಜನಿಕರಲ್ಲಿ ಫ್ಲೆಕ್ಸ್ ಗಳನ್ನು ತೆಗೆಯಬೇಕೆಂಬ ಜಾಗೃತಿ ಹೆಚ್ಚಾಗುತ್ತಿದೆ. 

ಮತ್ತೆ ಮದುವೆಯಾಗ್ತಾರಂತೆ ಕಿಚ್ಚ ಸುದೀಪ್ ಪತ್ನಿ!

ತಮಿಳು ನಟ ಸೂರ್ಯ ತಮ್ಮ ಬ್ಯಾನರ್ ಗಳನ್ನು / ಕಟೌಟ್ ಗಳನ್ನು ರಸ್ತೆಯಲ್ಲಿ ಹಾಕದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅದೇ ಹಣವನ್ನು ಶಾಲೆಗಳಿಗೆ ದೇಣಿಗೆ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ. 
ಸ್ವಿಮ್ ಸೂಟ್‌ನಲ್ಲಿ ತಮನ್ನಾ ವಾಕ್... ಅಲ್ಲ ಅವರಲ್ಲ ಬಿಡಿ, ಮತ್ಯಾರು?

ಸೂರ್ಯ ನಟನೆಯ ಕಪ್ಪನ್ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ರಿಲೀಸ್ ದಿನ ಬ್ಯಾನರ್, ಕಟೌಟ್ ಹಾಕುವ ಬದಲು 200 ಹೆಲ್ಮೇಟ್ ಗಳನ್ನು ಕೊಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಕಪ್ಪನ್ ಸಿನಿಮಾವನ್ನು ಕೆ ವಿ ಆನಂದ್ ನಿರ್ದೇಶಿಸಿದ್ದು ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಮನ್ ಇರಾನಿ, ಸೈಯೇಶಾ ಸೈಗಲ್ ಹಾಗೂ ಆರ್ಯ ಈ ಸಿನಿಮಾದಲ್ಲಿ ನಟಿಸಿದ್ದಾರೆ.