ಎಲ್ಲಿ ನೋಡಿದರೂ ಕ್ಯಾಮೆರಾ. ಆಡಿದ್ದು, ಮಾಡಿದ್ದೆಲ್ಲವೂ ಸೆರೆಯಾಗುತ್ತವೆ. ಆದರೂ ಗೆಲ್ಲುವ ಉತ್ಸಾಹದಿಂದ ಯಾರೂ ಹಿಂದೆ ಸರಿಯೋಲ್ಲ. ಹೇಳಿದ ಟಾಸ್ಕ್ ಎಲ್ಲವನ್ನೂ ಪೂರೈಸುತ್ತಾರೆ. ಗೆಲುವು ಮಾತ್ರ ಎಲ್ಲರಿಗೂ ಸಿಗೋಲ್ಲ ಅಲ್ಲವೇ? ಟೈಂ ಬಂದಾಗ ಮನೆಯಿಂದ ಹೊರ ಬರಲೇ ಬೇಕು. ಈಗಾಗಲೇ ಕೆಲ ದಿನಗಳನ್ನು ಮಾತ್ರ ಪೂರೈಸಿ ಹೊರ ಬಂದ ಸ್ಪರ್ಧಿಗಳೆಲ್ಲರೂ ಸೇರಿ ಏನು ಮಾಡುತ್ತಿದ್ದಾರೆ?

ಮನೆಯಿಂದ ಹೊರ ಬಂದ Bigg Boss ಸ್ಪರ್ಧಿಗಳು ಬಸ್ ಕಂಡಕ್ಟರ್ ಆನಂದ್ ಮನೆಯಲ್ಲಿ ಸೇರಿದ್ದಾರೆ. ಮೊದಲ ವಾರದಲ್ಲಿಯೇ ಹೊರ ಬಂದರೂ ರಕ್ಷಿತಾ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ. ಸಾಫ್ಟ್‌ವೇರ್ ಎಂಜಿನೀಯರ್ ರೀಮಾ, ಡ್ರ್ಯಾಗ್ ಕ್ವೀನ್ ಆದಂ ಪಾಶಾ ಎಲ್ಲರೂ ಮನೆಯೊಳಗಿದ್ದಾಗ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಮನೆಯಿಂದ ಹೊರ ಬಂದು ಒಟ್ಟಾಗಿ ಸೇರಿ ಊಟ ಮಾಡಿದ್ದಾರೆ.

ಆಡಂ ಪಾಶ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಗೆಟ್ ಟುಗೆದರ್ ಫೋಟೋ ಶೇರ್ ಮಾಡಿಕೊಂಡು, 'ಆನಂದ್ ಮನೆಯಲ್ಲಿ ಕಳೆದ ವಂಡರ್‌ಫುಲ್ ಟೈಂ.. ex-BiGGBOSSSITES!ಆನಂದ್‌ ಮನೆಯೊಳಗೆ ಊಟಕ್ಕೆ ಸೇರುವುದಾಗಿ ಪ್ರಾಮಿಸ್ ಮಾಡಿದ್ವಿ. ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ,' ಎಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.