- Home
- Entertainment
- TV Talk
- ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್ ಬಿಚ್ಚಿಟ್ಟ ಸತ್ಯ ಏನು?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್ ಬಿಚ್ಚಿಟ್ಟ ಸತ್ಯ ಏನು?
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಸೋಮಣ್ಣ ಅವರು ಹೇಗೆ ಉಳಿದುಕೊಂಡಿದ್ದಾರೆ ಎಂದು ಕೆಲ ಸ್ಪರ್ಧಿಗಳು ಹೇಳಿದ್ದೂ ಇದೆ. ಈಗ ವೀಕ್ಷಕರು ಕೂಡ ಇದೇ ಅಭಿಪ್ರಾಯಪಟ್ಟಿದ್ದರು. ಕಿಚ್ಚ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಸೌಂಡ್ ಮಾಡಿರಲಿಲ್ಲ
ಸ್ಪಂದನಾ ಸೋಮಣ್ಣ ಅವರು ಟಾಸ್ಕ್‌ನ್ನು ಕೂಡ ಚೆನ್ನಾಗಿ ಆಡೋದಿಲ್ಲ. ಅಂದಹಾಗೆ ಧ್ರುವಂತ್ ಬಿಟ್ಟರೆ ಉಳಿದವರ ಜೊತೆ ಕೂಡ ಅವರು ಜಗಳ ಆಡಿರಲಿಲ್ಲ, ಸೌಂಡ್ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಎಲ್ಲ ವಿಚಾರದಲ್ಲಿಯೂ ಅವರು ಕಾಣಿಸಿಕೊಳ್ಳೋದು ಬಹಳ ಕಡಿಮೆ ಎನ್ನಬಹುದು.
ಇವರ ಬದಲು ಯಾರು ಹೋಗಬೇಕಿತ್ತು?
ಇವರಿಗೆ ಹೋಲಿಕೆ ಮಾಡಿದರೆ ರಿಷಾ ಗೌಡ, ಜಾಹ್ನವಿ, ಮಂಜು ಭಾಷಿಣಿ ಅವರೇ ದೊಡ್ಮನೆಯಲ್ಲಿ ಜಾಸ್ತಿ ಕಾಣಿಸಿಕೊಂಡಿದ್ದರು. ಆದರೆ ಸ್ಪಂದನಾ ಮಾತ್ರ ಹಾಗೆ ದೊಡ್ಮನೆಯಲ್ಲಿ ಉಳಿದುಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಜಾಹ್ನವಿ ಮಾತನಾಡಿ ಸಮಸ್ಯೆ ಮಾಡಿಕೊಂಡಿದ್ದೂ ಇದೆ.
ಸ್ಪಂದನಾ ಕಾಲಿಗೆ ಗಾಯ
ಈ ವಾರ ಆಟವೊಂದರಲ್ಲಿ ಸ್ಪಂದನಾ ಸೋಮಣ್ಣ ಅವರು ಕಾಲಿಗೆ ಗಾಯ ಮಾಡಿಕೊಂಡರು. ಇವರು ಕ್ಯಾಪ್ಟನ್ಸಿ ಟಾಸ್ಕ್ ಆಡಬೇಕಿತ್ತು. ಹೀಗಾಗಿ ಇವರ ಬದಲು ಚೈತ್ರಾ ಕುಂದಾಪುರ ಅವರು ಆಟ ಆಡಿದರು. ಆಮೇಲೆ ಆಟವನ್ನು ಕೂಡ ಗೆದ್ದರು.
ಸ್ಪಂದನಾ ಸೋಮಣ್ಣ ಕ್ಯಾಪ್ಟನ್ ಆದರು
ಸ್ಪಂದನಾ ಸೋಮಣ್ಣ ಹಾಗೂ ಅಭಿಷೇಕ್ ಶ್ರೀಕಾಂತ್ ಅವರು ಆಟ ಆಡಬೇಕಿತ್ತು. ಇದರ ಬದಲಿಗೆ ಚೈತ್ರಾ, ಅಭಿಷೇಕ್ ಆಟ ಆಡಿದರು. ಆಟವನ್ನು ಗೆದ್ದು ಕ್ಯಾಪ್ಟನ್ ಆದರು, ಅಷ್ಟೇ ಅಲ್ಲದೆ ಒಂದು ವಾರ ಇಮ್ಯುನಿಟಿ ಪಡೆದರು. ಗಿಲ್ಲಿ ನಟ ಅವರು ಸ್ಪಂದನಾ ಅಷ್ಟು ಕಾಣಿಸಿಕೊಂಡಿಲ್ಲ, ಲಕ್ ವರ್ಕ್ ಆಗಿದೆ ಎಂದು ಹೇಳಿದ್ದರು.
ಕಿಚ್ಚ ಸುದೀಪ್ ನೀಡಿದ ಕಾರಣ ಏನು?
ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, “ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡಿದರೂ, ಜಾಸ್ತಿ ಕಾಣಿಸಿಕೊಂಡರೂ ಕೂಡ ಕೆಲವೊಮ್ಮೆ ಲಕ್ ಬೇಕಾಗುತ್ತದೆ. ಸ್ಪಂದನಾ ಬದಲು ಗಿಲ್ಲಿ ನಟ ಏನಾದರೂ ಕಾಲಿಗೆ ಏಟು ಮಾಡಿಕೊಂಡಿದ್ದರೆ, ಚೈತ್ರಾ ಆಡಿ ಕ್ಯಾಪ್ಟನ್ ಆದರೆ ಇಡೀ ಮನೆ ಏನು ಹೇಳಬಹುದಿತ್ತು?” ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

