ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾದಲ್ಲಿ ಪಾತ್ರಧಾರಿಗಳು ಧರಿಸಿದ್ದ ರಕ್ಷಾ ಕವಚವನ್ನು ಅಸ್ಸಾಂನ ಕರಕುಶಲಕರ್ಮಿ ಜಯನಾಲ್ ಅಬ್ದಿನ್ ತಯಾರಿಸಿದ್ದಾರೆ. ಮೂರುವರೆ ವರ್ಷಗಳ ಕಾಲ ಶ್ರಮಿಸಿ, ಬೆತ್ತ ಮತ್ತು ರಬ್ಬರ್ ಬಳಸಿ ಈ ರಕ್ಷಾ ಕವಚಗಳನ್ನು ವಿನ್ಯಾಸಗೊಳಿಸಿದ ಕಥೆ ರೋಚಕವಾಗಿದೆ.
ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾವು ಭರ್ಜರಿ ಸಕ್ಸಸ್ ಕಾಣ್ತಿದೆ. ಕೇವಲ ರಾಜ್ಯ ಮತ್ತು ದೇಶಗಳಲ್ಲಿ ಮಾತ್ರವಲ್ಲ. ವಿದೇಶಗಳಲ್ಲೂ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ರಾಮಾಯಣ ಎಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆಯೇ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಜಾನಿಯ ಬಂಗ್ಲಿಪುರ ಗ್ರಾಮದ ಕರಕುಶಲಕರ್ಮಿ ಜಯನಾಲ್ ಅಬ್ದಿನ್ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅದಕ್ಕೆ ಕಾರಣ ಇಷ್ಟೇ, ಚಿತ್ರದಲ್ಲಿ ಪಾತ್ರಧಾರಿಗಳು ಧರಿಸಿದ್ದ ರಕ್ಷಾ ಕವಚ ತಯಾರಿಸಿದ್ದು ಇವರೇ.
ರಕ್ಷಾ ಕವಚದ ರೋಚಕ ಸ್ಟೋರಿ
ಈ ಬಗ್ಗೆ ಮಾತನ್ನಾಡಿರುವ ಜಯನಾಲ್ ಅಬ್ದಿನ್, ಕಳೆದ ಮೂರುವರೆ ವರ್ಷಗಳ ಹಿಂದೆ ಜಾನಿಯಾದ ಸ್ಥಳೀಯ ಸಂಘಟನೆ ನಮ್ಮನ್ನು ಸಂಪರ್ಕಿಸಿತ್ತು. ಸಿನಿಮಾ ತಂಡ ನಮ್ಮಮ್ಮನು ನೇರವಾಗಿ ಸಂಪರ್ಕಿಸಲಿಲ್ಲ. ಬದಲಾಗಿ, ಸ್ಥಳೀಯ ಸಂಘಟನೆ ಮೂಲಕ ನಮ್ಮನ್ನು ಸಂಪರ್ಕಿಸಿದರು. ಆ ಸಂಘಟನೆಯ ಪ್ರಮುಖ ಅಬ್ದುಲ್ ಅನ್ನೋರು ನನಗೆ ನೇರವಾಗಿ ಕರೆ ಮಾಡಿದರು. ಒಂದಷ್ಟು ರೇಖಾಚಿತ್ರ ಮತ್ತು ವಿನ್ಯಾಸಗಳನ್ನು ಹೊಂದಿರುವ ಫೈಲ್ಗಳನ್ನು ತೋರಿಸಿದರು. ಅದನ್ನು ನೋಡಿದ ನಂತರ ನಾನು ಮಾಡಬಹುದು ಎಂದೆ. ನಂತರ ನಾವಿದ್ದಲ್ಲಿಗೆ ಮೇಲ್ವಿಚಾರಣೆ ಮಾಡಲು ಐವರು ಸದಸ್ಯರು ಇಲ್ಲಿಗೆ ಬಂದರು.
ನಂತರ ಅವರು ನಮ್ಮ ಬಳಿ ಸಿನಿಮಾಗಳಿಗೆ ಬಳಸಿಕೊಳ್ಳಲಾಗುತ್ತಿದೆ. ನೀವು ತಯಾರಿಸುತ್ತಿರೋದು ರಕ್ಷಾ ಕವಚ. ಫೈಟಿಂಗ್ ಸೀನ್ಗಳು ಇರೋದ್ರಿಂದ ಅದನ್ನ ಗಟ್ಟಿಮುಟ್ಟಾಗಿ ಮಾಡಬೇಕು ಎಂದು ನಮ್ಮ ಬಳಿ ಕೇಳಿಕೊಂಡರು. ನಾವು cane and rubber ಮತ್ತು ಬೆತ್ತದಿಂದ ಮಾಡಿದೇವು. ಅದನ್ನು ತೊಟ್ಟಾಗ ಹಗುರವಾಗಿತ್ತು. ಮತ್ತು ಓಡಾಡಲು ಆರಾಮಾದಾಯಕವಾಗಿತ್ತು. ಜೊತೆಗೆ ಬಿಗಿಯಾಗಿತ್ತು.
ಮೊದಲಿಗೆ ಒಂದನ್ನು ಸ್ಯಾಂಪಲ್ ಆಗಿ ಮಾಡಿದಾಗ ಬೆತ್ತದಿಂದ ತಯಾರಿಸಲಾಗಿತ್ತು. ಅದರಲ್ಲಿ ಸ್ವಲ್ಪ ವ್ಯತ್ಯಾಸಗಳು ಆದ ಹಿನ್ನೆಲೆಯಲ್ಲಿ ಈ ಬಗ್ಗೆ ಸಿನಿಮಾದ ವಸ್ತ್ರ ವಿನ್ಯಾಸಕರನ್ನು ಸಂಪರ್ಕಿಸಿದೆ. ಕೊನೆಗೆ ನಾನು ಅರ್ಧ ಬೆತ್ತ ಮತ್ತು ರಬ್ಬರ್ನಿಂದ ಮಾಡಲು ಸೂಚಿಸಿದೆ. ಅದಕ್ಕೆ ಅವರು ಒಪ್ಪಿಕೊಂಡರು. ನಂತರ ಒಂದು ಮಾದರಿಯನ್ನು ಮಾಡಿ ತೋರಿಸುವಂತೆ ಕೇಳಿಕೊಂಡರು. ನಂತರ ಮೂರರಿಂದ ಮೂರವರೆ ವರ್ಷಗಳಲ್ಲಿ ನಾವು ಮಾಡಿ ಮುಗಿಸಿದೇವು. ಸಂಪೂರ್ಣ ರಕ್ಷಾ ಕವಚದ ಜಾಕೆಟ್ ನಿರ್ಮಾಣವಾದ ನಂತರ ಬಾರ್ಪೆಟಾ ವಿಮಾನ ನಿಲ್ದಾಣದಿಂದ ಗುವಾಹಟಿ ವಿಮಾನ ನಿಲ್ದಾಣಕ್ಎಕ ನೇರವಾಗಿ ಸಾಗಿಸಿದೇವು ಎಂದಿದ್ದಾರೆ.
ನಮ್ಮ ಕೆಲಸದಲ್ಲಿ ಕಂಟಿನ್ಯೂಟಿ ಇರಲಿಲ್ಲ. ಅವರು ನಮ್ಮನ್ನ ಆಗಾಗ ಸಂಪರ್ಕಿಸುತ್ತಿದ್ದರು. ಆರು ತಿಂಗಳಿಗೊಮ್ಮೆ ನಮ್ಮನ್ನು ಸಂಪರ್ಕಿಸಿದ್ದೂ ಇದೆ. ಒಮ್ಮೆ ಅವರು ನಮ್ಮನ್ನ ಸಂಪರ್ಕಿಸಿದರೆ 10 ರಿಂದ 15 ಮಾಡೆಲ್ಗಳನ್ನ ತಯಾರಿಸಿಕೊಡುವಂತೆ ಕೇಳುತ್ತಿದ್ದರು. ಕಳೆದ ಮೂರುವರೆ ವರ್ಷಗಳಲ್ಲಿ ಸುಮಾರು 30 ರಿಂದ 35 ಮಾದರಿಗಳನ್ನ ತಯಾರಿಸಿ ಸಿನಿಮಾಗಾಗಿ ನೀಡಿದ್ದೇವೆ ಎಂದಿದ್ದಾರೆ. ಇನ್ನೊಂದು ವಿಚಾರ ಅಂದರೆ ನಮ್ಮನ್ನ ಸಂಪರ್ಕಿಸಿದವರು ರಾಮಾಯಣ ಸಿನಿಮಾಗೆ ಎಂಬ ವಿಚಾರವನ್ನು ಹೇಳಿರಲಿಲ್ಲ. ಆದರೆ ಸಿನಿಮಾ ರಿಲೀಸ್ ಆದ ಬಳಿಕ ನಿಮಗೆ ಮನ್ನಣೆ ಸಿಗಲಿದೆ ಎಂದಷ್ಟೇ ಹೇಳಿದ್ದರು. ನನಗೆ ಸಿನಿಮಾ ಬಗ್ಗೆ ಹೆಮ್ಮೆ ಬಂದಿದೆ. ರಕ್ಷಾ ಕವಚಗಳನ್ನ ನಾನು ಕೈಯಾರೆ ಮಾಡಿರೋದ್ರಿಂದ ಸಿನಿಮಾವನ್ನು ನಾನು ನೋಡುತ್ತೇನೆ. ನನ್ನ ತಂಡ ನನ್ನ ಬಗ್ಗೆ ನನ್ನ ಗ್ರಾಮ ಜಾನಿಯಾ ಬಂಗ್ಲಿಪುರ ಇಡೀ ಬಾರ್ಪೇಟಾ ಜಿಲ್ಲೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ ಎಂದು ಅಬ್ದಿನ್ ಹೇಳಿದ್ದಾರೆ.














