ಕಪ್ಪು-ಬಿಳುಪು ಚಿತ್ರವಾಗಿ ಮೂಡಿಬಂದಿರುವ ಕಸ್ತೂರಿ ನಿವಾಸ, ಸಮಾಜಕ್ಕೆ ಕೊಡುಗೈ ದಾನಿಯೊಬ್ಬರ ಪಾತ್ರದ ಮೂಲಕ ಉತ್ತಮ ಸಂದೇಶ ನೀಡಿದೆ. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಅಭಿನಯಿಸಿರುವ ಪಾತ್ರವು, ಸರಳ ಹಾಗೂ ಸಂಸ್ಕಾರವಂತ ಪಾತ್ರವಾಗಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಅಷ್ಟೇ ಅಲ್ಲ..

ಡಾ ರಾಜ್‌ಕುಮಾರ್ (Dr Rajkumar) ಅಂದ್ರೆ ಕನ್ನಡದ ಆಸ್ತಿ, ಅಣ್ಣಾವ್ರು ಅಂದ್ರೆ ಕನ್ನಡಿಗರ ಆರಾಧ್ಯ ದೈವ ಎಂಬುದು ಬಹುತೇಕರಿಗೆ ಗೊತ್ತು. ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ಕೂಡ ಬಹಳಷ್ಟು ಯೋಗ್ಯ ವ್ಯಕ್ತಿಯಂತೆ ಬದುಕಿದ್ದಾರೆ. ಜನರ ಎದುರು ಹೇಗಿರಬೇಕು? ಯಾವುದನ್ನು ಜನರು ಎದುರು ಇದ್ದಾಗ ಮಾಡಬಾರದು ಎಂಬುದನ್ನು ಚೆನ್ನಾಗಿ ತಿಳಿದಿದ್ದರು. ಜನರು ಸಿನಿಮಾ ನಟರನ್ನು ಆರಾಧಿಸುವುದು ಮಾತ್ರವಲ್ಲ, ಅನುಸರಿಸುತ್ತಾರೆ ಕೂಡ ಎಂಬುದನ್ನು ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ ಡಾ ರಾಜ್‌ಕುಮಾರ್ ಅವರು ಮನುಷ್ಯ ಸಹಜವಾದ ಕೆಲವು ಕೆಲಸಗಳನ್ನು ಕೂಡ ಸಮಾಜದ ಎದುರು ಮಾಡುತ್ತಿರಲಿಲ್ಲ.

ಸಿನಿಮಾದಲ್ಲಿ ಪಾತ್ರರ ಮಾಡುವದು ಅವರ ವೃತ್ತಿ. ಆದರೆ, ನಿಜ ಜೀವನದಲ್ಲಿ ಹೇಗೆ ಬೇಕಾದರೂ ಇರಬಹುದು ಎಂಬುದು ಡಾ ರಾಜ್‌ಕುಮಾರ್ ಅವರ ಮನೋಭಾವನೆ ಆಗಿರಲಿಲ್ಲ. ನಿಜ ಜೀವನದಲ್ಲಿ ಶಿಸ್ತು, ಸಂಯಮ, ಸರಳತೆಗಳನ್ನು ಮೈಗೂಡಿಸಿಕೊಂಡಿದ್ದ ರಾಜ್‌ಕುಮಾರ್ ಅವರು ಯಾವತ್ತೂ ಕೂಡ ಆಡಂಬರದ ಜೀವನ ನಡೆಸುತ್ತಿರಲಿಲ್ಲ. ಆದರೆ, ತಾವೂ ಚೆನ್ನಾಗಿ ಊಟ ಮಾಡುತ್ತಿದ್ದರು, ಬೇರೆಯವರಿಗೂ ಅದನ್ನು ಕೊಡುತ್ತಿದ್ದರು ಹಾಗೂ ಹೊಟ್ಟೆತುಂಬಾ ಉಟ ಮಾಡಲಿ ಎಂದು ಬಯಸುತ್ತಿದ್ದರು. ನಿಜ ಹೇಳಬೇಕು ಎಂದರೆ, ಅವರು 'ಕಸ್ತೂರಿ ನಿವಾಸ'ದ ಪಾತ್ರದಂತೆ ನಿಜವಾಗಿಯೂ ಬದುಕಲು ಪ್ರಯತ್ನಿಸಿದ್ದರು.

ಹೌದು, ಡಾ ರಾಜ್‌ಕುಮಾರ್ ಅವರು 200 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅದರಲ್ಲಿ ಕೆಲವು ಚಿತ್ರಗಳಲ್ಲಿನ ಅವರ ಪಾತ್ರಗಳು ಅಂದು ಹಾಗೂ ಇಂದಿಗೂ ಜನರು ಸ್ಮರಿಸಿಕೊಳ್ಳುವಂತೆ ಮಾಡಿವೆ. ಅದು ಬಂಗಾರದ ಮನುಷ್ಯ ಸೇರದಂತೆ ಹತ್ತು ಹಲವು ಪಾತ್ರಗಳಿವೆ. ಅದರಲ್ಲೊಂದು ಪಾತ್ರ ಕಸ್ತೂರಿ ನಿವಾಸದ ರವಿ ಪಾತ್ರ. ರಾಣಿ ಎಂಬ ಪಾರಿವಾಳ ಹಾಗೂ ರವಿ ಪಾತ್ರದ ಸುತ್ತ ಸುತ್ತಿರುವ ಈ ಕಥೆ, ಅಂದು ತೆರೆಗೆ ಬಂದಾಗ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಅಷ್ಟೇ ಅಲ್ಲ, ಇಂದಿಗೂ ಕೂಡ ಈ ಪಾತ್ರವನ್ನು ಜನರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಸೋಷಿಯಲ್ ಮೀಡಯಾಗಳಲ್ಲಿ ಈ ಚಿತ್ರದ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದೆ.

ಅದರಲ್ಲಿ, ರವಿ ಎಂಬ ಪಾತ್ರ ಮಾಡಿರುವ ರಾಜ್‌ಕುಮಾರ್ ಅವರು, ಆ ಪಾತ್ರವನ್ನು ನಟನೆ ಮಾಡಲಿಲ್ಲ ಬದಲಿಗೆ ಜೀವಿಸಿದ್ದಾರೆ ಎನ್ನಬಹುದು. ಕಪ್ಪು-ಬಿಳುಪು ಚಿತ್ರವಾಗಿ ಮೂಡಿಬಂದಿರುವ ಕಸ್ತೂರಿ ನಿವಾಸ, ಸಮಾಜಕ್ಕೆ ಕೊಡುಗೈ ದಾನಿಯೊಬ್ಬರ ಪಾತ್ರದ ಮೂಲಕ ಉತ್ತಮ ಸಂದೇಶ ನೀಡಿದೆ. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಅಭಿನಯಿಸಿರುವ ಪಾತ್ರವು, ಸರಳ ಹಾಗೂ ಸಂಸ್ಕಾರವಂತ ಪಾತ್ರವಾಗಿ ಇಂದಿಗೂ ಜನಮಾಸನದಲ್ಲಿ ಅಚ್ಚಳಿಯದೇ ಉಳಿದಿದೆ. ಅಷ್ಟೇ ಅಲ್ಲ, ಬಹುಶಃ ಡಾ ರಾಜ್‌ಕುಮಾರ್ ಅವರು ಸಿನಿಮಾದಲ್ಲಿ ಸತ್ತಿರುವ ಏಕೈಕ ಪಾತ್ರ ಆಗಿರಬಹುದು. ಯಾವುದೇ ಚಿತ್ರದಲ್ಲಿ ಸಿನಿಮಾದ ಕೊನೆಯಲ್ಲಿ ನಾಯಕ ಸಾಯುವುದು ಕಡಿಮೆ. ಅದರೆ, ಕಸ್ತೂರಿ ನಿವಾಸದಲ್ಲಿ ಡಾ ರಾಜ್‌ಕುಮಾರ್ ನಟಿಸಿರುವ ರವಿ ಪಾತ್ರವು ಸಿನಿಮಾದ ಕೊನೆಗೆ ಸಾವನ್ನಪ್ಪುತ್ತದೆ.

ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಅವರ ಸಿನಿಮಾ ಹಾಗೂ ಸಿನಿಮಾದ ಹಲವು ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾಗಳು ಹಾಗೂ ಯೂಟ್ಯೂಬ್‌ ಮೂಲಕ ಮತ್ತೆ ವೈರಲ್ ಆಗುತ್ತಿವೆ. ಈ ಮೊದಲು ನೋಡಿರುವ ಹಾಗೂ ನೋಡದಿದ್ದರವರು ಅದನ್ನು ನೋಡಿ ಥ್ರಿಲ್ ಅನುಭವ ಪಡೆಯುತ್ತಿದ್ದಾರೆ ಎನ್ನಬಹುದು. ಈ ಸಿನಿಮಾ ಕನ್ನಡ ಚಿತ್ರಜಗತ್ತಿನಲ್ಲಿ ಮೂಡಿಬಂದಿರುವ ಅತ್ಯದ್ಭುತ ಸಿನಿಮಾಗಲ್ಲಿ ಒಂದು ಎಂಬುದು ಹಲವರ ಅಭಿಪ್ರಾಯ. ಡಾ ರಾಜ್‌ಕುಮಾರ್, ಅಶ್ವಥ್ ಹಾಗೂ ಜಯಂತಿ ನಟಿಸಿರುವ ಕಸ್ತೂರಿ ನಿವಾಸ ಸಿನಿಮಾದ ವಿಡಿಯೋವನ್ನು ನೀವೂ ಒಮ್ಮೆ ನೋಡಿ...