ನಟಿ ನಟಿ ಸೋನಲ್ ಮೊಂಥೆರೋ ಅವರಿಗೆ ದೊಡ್ಡ ನಟನೊಬ್ಬ ಕಾಟ ಕಾಡುತ್ತಿದ್ದ ವಿಷಯವನ್ನು ನಿರ್ದೇಶಕ ಯೋಗರಾಜ್​ ಭಟ್​ ಅವರು ತಮ್ಮದೇ ಹಾಸ್ಯ ರೀತಿಯಲ್ಲಿ ಹೇಳಿದ್ದು ಹೇಗೆ ನೋಡಿ!

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್​ 11ರಂದು ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದೀಗ ಅವರು ಮದುವೆಯ ಬಳಿಕ ಮಾದೇವ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿ ಅದು ಬಿಡುಗಡೆಯಾಗಲಿದೆ. ನವೀನ್ ರೆಡ್ಡಿ ಬಿ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರವು ಮೇ 30 ರಂದು ತೆರೆಕಂಡಿದೆ. ಆ್ಯಕ್ಷನ್ ಪ್ರಧಾನ ಪಾತ್ರಗಳಿಂದ ಹೃದಯ ಗೆದ್ದಿರುವ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಅಷ್ಟಕ್ಕೂ ನಟಿ ಸೋನಲ್​ ಸುರಸುಂದರಿ. ಇದೇ ಕಾರಣಕ್ಕೆ ಸಹಜವಾಗಿ ಆಕೆಯ ಹಿಂದೆ ಸ್ಟಾರ್​ ನಟರು ಸೇರಿದಂತೆ ಹಲವರು ಬಿದ್ದಿದ್ದರು. ಈ ಬಗೆಗಿನ ಗುಟ್ಟೊಂದನ್ನು ನಿರ್ದೇಶಕ ಯೋಗರಾಜ್​ ಭಟ್​ ಮಜಾ ಟಾಕೀಸ್​ನಲ್ಲಿ ರಿವೀಲ್​ ಮಾಡಿದ್ದರು. ಅದರ ವಿಡಿಯೋ ಪುನಃ ಈಗ ವೈರಲ್​ ಆಗ್ತಿದೆ. ಸೋನಲ್​ ಅವರು ತರುಣ್​ ಅವರನ್ನು ಮದುವೆಯಾಗುವುದಕ್ಕಿಂತ ಮುಂಚಿನ ಕಥೆ ಇದು. ಆ ಸಮದಯಲ್ಲಿ ಸೋನಲ್​ ಅವರ ಹಿಂದೆ ಯಾರೋ ದೊಡ್ಡವರು ಬಿದ್ದಿದ್ದರು ಎನ್ನುತ್ತಲೇ ಅವರ ಹೆಸರನ್ನು ಭಟ್ಟರು ಹೇಳಲಿಲ್ಲ. ಆದರೆ ತಮ್ಮದೇ ಆದ ಲಘು ಹಾಸ್ಯದ ಧಾಟಿಯಲ್ಲಿ ಅವರು ಹೇಳಿದ್ದಾರೆ. ಇದಕ್ಕೆ ಸೋನಲ್​ ಅವರು ಹೇಳುವುದು ಬೇಡ ಎನ್ನುವಂತೆ ಆ್ಯಕ್ಷನ್​ ಮಾಡಿದರೂ ಭಟ್ಟರು ಹೇಳಿಯೇ ಬಿಟ್ಟರು. 'ಸೋನಲ್​ ಹಿಂದೆ ಮಂಗಳೂರಿನ ಅರ್ಧ ಮಂದಿ ಬಿದ್ದಿದ್ರು. ಏಕೆಂದ್ರೆ ಆಗಲೇ ಸೋನಲ್ ಕರ್ನಾಟಕದ ಬೆಸ್ಟ್‌ ಕ್ಯೂಟಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದರು. ನನಗೆ ಒಂದು ದಿನ ಒಬ್ಬರು ದೊಡ್ಡವರು ಫೋನ್​ ಮಾಡಿದ್ರು. ಅವರು ಸೋನಲ್‌ಗೂ ಬೆಸ್ಟ್‌ ಫ್ರೆಂಡ್ ಹಾಗೂ ನನಗೂ ಬೆಸ್ಟ್‌ ಫ್ರೆಂಡ್ ಹೀಗಾಗಿ ಹೆಸರು ಹೇಳುವುದಿಲ್ಲ. ಸೋನಲ್‌ಗೆ ಒಬ್ಬರು ಕಾಟ ಕೊಡುತ್ತಿದ್ದಾರೆ ಆದರೆ ನಾನು ಊರಿನಲ್ಲಿ ಇಲ್ಲ ಅಂತಾರೆ. ಏನ್ ಆಯ್ತು ಅಂತ ಕೇಳ್ದೆ. ಒಂಥರಾ ಕಾಟ ಕೊಡುತ್ತಿದ್ದಾರೆ ನೀವು ಮಾತನಾಡಿ ಸರಿ ಮಾಡಬೇಕು ಅಂದ್ರು. ಸೋನಲ್ ಕರಾವಳಿ ಹುಡುಗಿ ಇಂಡಸ್ಟ್ರಿಗೆ ನಾವೇ ತಂದವರು ಅವರಿಗೆ ಒಂದಾದ ಮೇಲೊಂದು ಸಿನಿಮಾ ಕೊಟ್ಟವರು ನಾವು. ನಾನು ಫೋನ್ ಮಾಡಿದೆ ಆದರೆ ಕಾಟ ಕೊಟ್ಟ ವ್ಯಕ್ತಿ ತೆಗೆಯಲಿಲ್ಲ. ಪಾಪ ಅವರು ಕೂಡ ಒಳ್ಳೆಯ ವ್ಯಕ್ತಿನೇ. ಅದಾದ ಮೇಲೆ ಇನ್ನೂ ದೊಡ್ಡ ವ್ಯಕ್ತಿ ಫೋನ್ ಮಾಡಿದ್ದರು ಆಗ ಕೂಡ ತೆಗೆಯಲಿಲ್ಲ. ಯಾರೂ ಫೋನ್ ತೆಗೆಯದೆ ತೆಗೆಯದೆ ಕೊನೆಯಲ್ಲಿ ತರುಣ್‌ಗೆ ಫೋನ್ ಮಾಡಿದೆ. ಆಗ ತುರಣ್ ಮತ್ತು ಸೋನಲ್ ನಡುವೆ ಏನ್ ಇತ್ತು ಗೊತ್ತಿಲ್ಲ ಆದರೆ ಓನ್‌ ವೇ ದಾರಿಯಲ್ಲಿ 5ನೇ ಗೇರ್ ಹಾಕೊಂಡು ತರುಣ್ ಓಡ್ತಿದ್ದಾನೆ. ಬೇರೆ ಯಾರಿಗೂ ಹೇಳಲು ಹೋಗಬೇಡಿ ನಾನು ಇದ್ದೀನಿ ಎಂದು ಮಿಸ್ಟ್ರಿ ಆಫೀಸರ್ ತರ ಹೇಳಿದ. ಮಾಸ್ ಸಿನಿಮಾ ಹೀರೋ ರೀತಿಯಲ್ಲಿ ಬೆಳಗ್ಗೆ ಅಷ್ಟರಲ್ಲಿ ಸಂಪೂರ್ಣವಾಗಿ ಸರಿ ಮಾಡಿಬಿಟ್ಟ' ಎಂದಿದ್ದಾರೆ.

ಇದಕ್ಕೆ ಬ್ರೇಕ್​ ಹಾಕಿದ ಸೋನಲ್​, ಆಗ ನನ್ನ ಮತ್ತು ಅವರ ನಡುವೆ ಏನೂ ಇರಲಿಲ್ಲ ಎಂದಿದ್ದಾರೆ. ಆದರೂ ಮಾತು ಮುಂದುವರೆಸಿದ ಭಟ್ಟರು, ಈ ಘಟನೆ ಆದ್ಮೇಲೆ ತರುಣ್ ನನಗೆ ಮೆಸೇಜ್ ಮಾಡಿದ್ದರು. ಒಂದು ದಿನ ಶೂಟಿಂಗ್ ಮುಗಿಸಿಕೊಂಡು ಯೋಗರಾಜ್‌ ಭಟ್‌ ಸರ್ ಜೊತೆ ಮಾತನಾಡಿದ್ದೀನಿ ಇಲ್ಲ ಸರ್ ನಾನು ಮದುವೆ ಮಾಡಿಕೊಳ್ಳುವುದಿಲ್ಲ ಅಂತ. ಅಂದ್ರೆ ಜಸ್ಟ್‌ 6 ತಿಂಗಳು ಮುನ್ನ ಹೇಳಿದ್ದೆ ಅಷ್ಟೇ' ಎಂದು ಸೋನಲ್ ಹೇಳಿದರು. ಒಟ್ಟಿನಲ್ಲಿ ಅವರಿಬ್ಬರ ನಡುವೆ ಏನಿತ್ತೋ ಇಲ್ವೋ ಗೊತ್ತಿಲ್ಲ. ಆ ಕಾಟ ಕೊಟ್ಟಿದ್ದು ಯಾಕೆ ಎಂದೂ ತಿಳಿದಿಲ್ಲ ಎಂದಿದ್ದಾರೆ ಯೋಗರಾಜ ಭಟ್ಟರು.

ಈ ಹಿಂದಿನ ಸಂದರ್ಶನದಲ್ಲಿ ನಟಿ, ತಮ್ಮ ವೈಯಕ್ತಿಯ ಲೈಫ್​ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದರು. ಮದುವೆಯಾದ ಮೇಲೆ ಹೇಗಿರುತ್ತೋ ಎನ್ನುವ ಭಯವಿತ್ತು. ಆದರೆ ಅದೆಲ್ಲಾ ನಮ್ಮ ಮೈಂಡ್​ಸೆಟ್​ನಲ್ಲಿ ಇರುತ್ತೆ ಅಷ್ಟೇ. ನನ್ನ ವಿಚಾರದಲ್ಲಂತೂ ತುಂಬಾ ಲಕ್ಕಿ. ನನಗೆ ಮದುವೆ ಆಗಿದೆ ಎಂದೇ ಅನ್ನಿಸ್ತಿಲ್ಲ. ಮೊದಲು ಲೈಫ್​ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದಿದ್ದಾರೆ. ನಾವು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗಬೇಕು ಅಷ್ಟೇ. ಹಾಗಿದ್ರೆ ಜನ ನಮ್ಮ ಕೈಹಿಡಿಯುತ್ತಾರೆ. ಪತಿ ತರುಣ್​ ಅವರೂ ಸಿನಿಮಾದವರೇ ಆಗಿರುವುದರಿಂದ ತುಂಬಾ ಸಪೋರ್ಟಿವ್​ ಆಗಿದ್ದಾರೆ. ಈ ಚಿತ್ರಕ್ಕೆ ನನಗಿಂತ ಹೆಚ್ಚಿಗೆ ಅವರೇ ಪ್ರೊಮೋಷನ್​ ಮಾಡುತ್ತಿದ್ದಾರೆ. ನಿಜ ಹೇಳಬೇಕು ಎಂದ್ರೆ ಅವರು ನಿಜ ಜೀವನದಲ್ಲಿ ಡೈರೆಕ್ಟರ್​ ಆಗಿದ್ರೂ, ಫ್ಯಾಮಿಲಿ ವಿಷ್ಯಕ್ಕೆ ಬಂದ್ರೆ ನಾನೇ ಅವರಿಗೆ ಡೈರೆಕ್ಟರ್​ ಎಂದು ತಮಾಷೆ ಮಾಡಿದ್ದರು.

View post on Instagram