Director Teja: ನಿತ್ಯಾನಂದ ಸ್ವಾಮಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಸ್ವಾಮೀಜಿಯಾಗಿ ಈತ ಅನೇಕ ಭಕ್ತರನ್ನು ಹೊಂದಿದ್ದ. ಆದರೆ, ನಿತ್ಯಾನಂದನ ಚಕ್ಕಂದಗಳು ಬಯಲಾಗುತ್ತಿದ್ದಂತೆ ಭಕ್ತರು ಇಟ್ಟಿದ್ದ ನಂಬಿಕೆ ಹುಸಿಯಾಯಿತು.
ಟಾಲಿವುಡ್ ನಿರ್ದೇಶಕ ತೇಜ, ವಿವಾದಿತ ಸ್ವಾಮಿ ನಿತ್ಯಾನಂದನ ಜೊತೆಗಿನ ತಮ್ಮ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ತಾನು ನಿತ್ಯಾನಂದನಿಗೆ 1 ಲಕ್ಷ ರೂಪಾಯಿ ಹೇಗೆ ಪಂಗನಾಮ ಹಾಕಿದೆ ಅನ್ನೋದನ್ನು ವಿವರಿಸಿದ್ದಾರೆ. ನಿತ್ಯಾನಂದ ಸ್ವಾಮಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಸ್ವಾಮೀಜಿಯಾಗಿ ಈತ ಅನೇಕ ಭಕ್ತರನ್ನು ಹೊಂದಿದ್ದ. ಆದರೆ, ನಿತ್ಯಾನಂದನ ಚಕ್ಕಂದಗಳು ಬಯಲಾಗುತ್ತಿದ್ದಂತೆ ಭಕ್ತರು ಇಟ್ಟಿದ್ದ ನಂಬಿಕೆ ಹುಸಿಯಾಯಿತು. ಕೊನೆಗೆ ಜನರು ಛೀ ಥೂ ಎನ್ನುವಷ್ಟರ ಮಟ್ಟಿಗೆ ಈತ ಕೆಳಗೆ ಬಿದ್ದು, ಅರೆಸ್ಟ್ ಕೂಡ ಆಗಿದ್ದ.
ನಟಿ ರಂಜಿತಾ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ನಿತ್ಯಾನಂದನ ವಿಡಿಯೋ ಲೀಕ್ ಆಗಿ, ಆತನ ಸಂಪೂರ್ಣ ಬಣ್ಣ ಬಯಲಾಗಿತ್ತು. ಈ ಘಟನೆ ನಂತರ, ಆಶ್ರಮದಲ್ಲಿದ್ದ ಇತರ ಮಹಿಳೆಯರೂ ನಿತ್ಯಾನಂದನ ಲೈಂಗಿಕ ಕಿರುಕುಳದ ಬಗ್ಗೆ ಬಾಯಿ ಬಿಟ್ಟರು. ಇದರಿಂದ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ, ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವಾಗಲೇ ನಿತ್ಯಾನಂದ ದೇಶ ಬಿಟ್ಟು ಪರಾರಿಯಾದ. ಟಾಲಿವುಡ್‌ನ ಖ್ಯಾತ ನಿರ್ದೇಶಕ ತೇಜ, ನಿತ್ಯಾನಂದನ ಜೊತೆಗಿನ ಒಂದು ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡಿದ್ದಾರೆ.
'ನನ್ನ ಮಗನಿಗೆ ಆರೋಗ್ಯ ಸರಿ ಇರಲಿಲ್ಲ. ನಿತ್ಯಾನಂದ ಸ್ವಾಮಿ ಹೀಲಿಂಗ್ ಮಾಡ್ತಾರೆ, ಅವರು ಬಂದರೆ ನಿಮ್ಮ ಮಗನ ಆರೋಗ್ಯ ಸುಧಾರಿಸುತ್ತೆ ಅಂದರು. ಮಗನ ಆರೋಗ್ಯದ ವಿಷಯವಾದ್ದರಿಂದ ನಾನೂ ಸರಿ ಅಂದೆ. ಆದರೆ, ಸ್ವಾಮಿ ಬರಬೇಕಾದರೆ ಆಶ್ರಮಕ್ಕೆ 1 ಲಕ್ಷ ರೂ. ಡೊನೇಷನ್ ಕೊಡಬೇಕು ಅಂದರು. ಸರಿ ಅಂತ 1 ಲಕ್ಷದ ಚೆಕ್ ಕೊಟ್ಟೆ. ನಿತ್ಯಾನಂದ ಮನೆಗೆ ಬಂದ. ಮನೆಯಲ್ಲಿದ್ದ ಕೆಲಸದವರು, ನನ್ನ ಹೆಂಡತಿ ಎಲ್ಲರೂ ಆತನ ಕಾಲಿಗೆ ಬಿದ್ದರು. ಆದರೆ ನಾನು ಮಾತ್ರ ದೂರ ನಿಂತು ನೋಡುತ್ತಿದ್ದೆ' ಎಂದು ತೇಜ ವಿವರಿಸಿದ್ದಾರೆ.
ಸ್ವಾಮಿ ಹೋದ ಕೆಲವು ದಿನಗಳ ನಂತರ ನಾನು ಕೊಟ್ಟ ಚೆಕ್ ಬೌನ್ಸ್ ಆಯ್ತು. 'ಯಾಕ್ ಹೀಗೆ ಮಾಡ್ದೆ, ಯಾಕೆ ಚೆಕ್ ಕೊಟ್ಟೆ, ಅದು ಬೌನ್ಸ್ ಆಗಿದೆ' ಅಂತ ನನ್ನ ಹೆಂಡತಿ ಬೈದಳು. ಮತ್ತೆ ಇನ್ನೊಂದು ಚೆಕ್ ಕೊಟ್ಟೆ. ಅದೂ ಬೌನ್ಸ್ ಆಯ್ತು. 'ಮತ್ತೆ ಯಾಕ್ ಹೀಗೆ ಮಾಡ್ದೆ' ಅಂತ ಹೆಂಡತಿ ಬೈಯೋಕೆ ಶುರು ಮಾಡಿದ್ಲು. 'ಕೆಲಸದಲ್ಲಿ ಮರೆತುಬಿಟ್ಟೆ, ಹೋಗಿ ಅಕೌಂಟ್‌ಗೆ ದುಡ್ಡು ಹಾಕ್ತೀನಿ' ಅಂತ ಬ್ಯಾಂಕ್‌ಗೆ ಹೊರಟೆ. ಆಗಲೇ ನಿತ್ಯಾನಂದನ ರಾಸಲೀಲೆ ಸುದ್ದಿ ಟಿವಿಯಲ್ಲಿ ಬಂತು. ಹುಡುಗಿಯರ ಜೊತೆ ಸಿಕ್ಕಿಬಿದ್ದ, ಅರೆಸ್ಟ್ ಆದ ಅಂತ ಸುದ್ದಿ ಬರ್ತಿತ್ತು. ಅಷ್ಟೇ, ನಾನು ಅಕೌಂಟ್‌ಗೆ ಹಣ ಹಾಕುವುದನ್ನು ನಿಲ್ಲಿಸಿದೆ. ನಮ್ಮ ಹಣ ತುಂಬಾ ಸ್ಟ್ರಾಂಗ್ ಅನ್ನಿಸ್ತು' ಎಂದು ತೇಜ ಹೇಳಿದ್ದಾರೆ.
ನಿತ್ಯಾನಂದನಿಗೇ ಪಂಗನಾಮ
ಈ ಮೂಲಕ ನಿರ್ದೇಶಕ ತೇಜ, ನಿತ್ಯಾನಂದನಿಗೇ ಪಂಗನಾಮ ಹಾಕಿದ್ದರು. ಈ ಘಟನೆಯಿಂದ ನನಗೊಂದು ವಿಷಯ ಅರ್ಥವಾಯಿತು. ಕೆಲವು ಕಷ್ಟಗಳು ಬಂದಾಗ ಪರಿಸ್ಥಿತಿ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ನಾವು ಏನು ಬೇಕಾದರೂ ಮಾಡಲು ಸಿದ್ಧರಾಗಿಬಿಡುತ್ತೇವೆ. ವಸುದೇವನೇ ಕತ್ತೆಯ ಕಾಲು ಹಿಡಿದ ಹಾಗೆ, ನಾನೂ ಕೂಡ ನಿತ್ಯಾನಂದನನ್ನು ನಂಬಿಬಿಟ್ಟೆ. ನಮಗೆ ಬರುವ ಸಮಸ್ಯೆಗಳಿಗೆ ತಕ್ಕಂತೆ ನಾವು ಧರ್ಮ ಬದಲಾಯಿಸುತ್ತೇವೆ, ದೇವರುಗಳನ್ನು ಬದಲಾಯಿಸುತ್ತೇವೆ, ಏನು ಬೇಕಾದರೂ ಮಾಡಲು ಸಿದ್ಧರಾಗುತ್ತೇವೆ' ಎಂದು ತೇಜ ಹೇಳಿದ್ದಾರೆ.


