ಬೆಂಗಳೂರು (ಡಿ. 10): ಕೆಜಿಎಫ್ ಸಿನಿಮಾ ಭಾರೀ ಹವಾ ಎಬ್ಬಿಸಿದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾ ಮಂದಿಯೆಲ್ಲಾ ಸ್ಯಾಂಡಲ್ ವುಡ್ ಕಡೆ ಮುಖ ಮಾಡುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಕೂಡಾ ಸದ್ದು ಮಾಡುತ್ತಿದ್ದಾರೆ. ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. 

ರಾಮಚಾರಿ ಜೋಡಿ 2ನೇ ಮದುವೆ ವಾರ್ಷಿಕೋತ್ಸವ!

ಕೆಜಿಎಫ್ ಪ್ರಿ- ರಿಲೀಸ್ ಈವೆಂಟನ್ನು ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಖ್ಯಾತ ನಿರ್ದೇಶಕ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕೆಜೆಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮಾತನಾಡುವ ವೇಳೆ, ‘ಯಶ್ ಯಶಸ್ಸಿನ ಬಗ್ಗೆ ಹೆಮ್ಮೆ ಪಡುತ್ತೇನೆ. ಯಶ್ ಇಲ್ಲಿಯವರೆಗೆ ನಡೆದುಬಂದ ಹಾದಿಯ ಬಗ್ಗೆ ನೆನೆಸಿಕೊಳ್ಳುತ್ತಾ, ಬಸ್ ಡ್ರೈವರ್ ಮಗನೊಬ್ಬ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದಾರೆ. ನಿಜಕ್ಕೂ ಯಶ್ ಬೆಳೆದ ಬಂದ ಹಾದಿಯನ್ನು ನೋಡಿದ್ರೆ ಹೆಮ್ಮೆ ಎನಿಸುತ್ತದೆ‘ ಎಂದು ರಾಜಮೌಳಿ ಹೇಳಿದ್ದಾರೆ. 

ಯಶ್ ಇನ್‌ಸ್ಟಾಗ್ರಾಮ್‌ಗೆ ಶೇರ್ ಮಾಡಿದ ಮೊದಲ ಫೋಟೋ ನೋಡಿದ್ರಾ?