ಟ್ವಿಟರ್‌, ಫೇಸ್‌ಬುಕ್‌ನಲ್ಲಿ ತಕ್ಕಮಟ್ಟಿಗೆ ಆ್ಯಕ್ಟಿವ್ ಆಗಿರುವ ರಾಕಿಂಗ್ ಸ್ಟಾರ್ ಯಶ್, ಇನ್‌ಸ್ಟಾಗ್ರಾಮ್‌ಗೆ ಮಾತ್ರ ಕಾಲಿಟ್ಟಿರಲಿಲ್ಲ. ಹಾಗಂಥ ಅವರ ಫ್ಯಾನ್ಸ್ ಮತ್ತು ಪತ್ನಿ ಸಿಕ್ಕಾಪಟ್ಟೆ ಪೋಸ್ಟ್‌ಗಳನ್ನು ಹಾಕುತ್ತಲೇ ಇದ್ದರೆ. ಅಪಾರ ಜನಪ್ರಿಯತೆ ಪಡೆಯುತ್ತಿರುವ ಇನ್‌ಸ್ಟಾಗ್ರಾಮ್‌ಗೂ ಯಶ್ ಎಂಟ್ರಿ ಕೊಟ್ಟಿದ್ದು, ಇನ್ನು ಬಹುಶಃ ಅವರು ಬಂದ ಮೇಲೆ ಅಲ್ಲಿಯೂ ಅವರದ್ದೇ ಹವಾ ಎನಿಸುತ್ತದೆ.

ಇದುವರೆಗೆ ರಾಧಿಕಾ ತಮ್ಮ ವೇರಿಫೈಡ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪರ್ಸನಲ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಿದ್ದರು. ಇನ್ನೂ ಯಶ್ ಕೂಡ ಈ ವೇದಿಕೆಯಲ್ಲಿ ಇನ್ನು ತಮ್ಮ ಅಭಿಮಾನಿಗಳೊಂದಿಗೆ ಸುಖ-ದುಃಖ ಹಂಚಿಕೊಳ್ಳಲ್ಲಿದ್ದಾರೆ. ಫೋಟೋ, ವೀಡಿಯೋ ನೆಟ್‌ವರ್ಕಿಂಗ್ ಸೈಟ್‌ನಲ್ಲಿ ಯಶ್ ಹಾಕಿದ ಮೊದಲ ಪೋಸ್ಟ್ ಯಾವುದು ಗೊತ್ತಾ?

ರಾಧಿಕಾ ಪಂಡಿತ್ ಪ್ರೆಗ್ನೆನ್ಸಿ ಫೋಟೋ ಶೂಟ್‌ಗೆಂದು ಮಾಲ್ಡೀವ್ಸ್‌ಗೆ ತೆರಳಿದಾಗ ಬೆಳೆದಿಂಗಳಲ್ಲಿ ತೆಗೆದ ಫೋಟೋ. ಮದುವೆ ವಾರ್ಷಿಕೋತ್ಸವ ದಿನವೂ ಆದ್ದರಿಂದ ಶುಭಾಶಯವನ್ನೂ ಹೇಳಿದ ಯಶ್, 'ನನ್ನ ಜೀವನದ ಬೆಸ್ಟ್ 2 ವರ್ಷಗಳ ಜರ್ನಿ ಇದಾಗಿದೆ. ಹ್ಯಾಪಿ ಅ್ಯನಿವರ್ಸರಿ ಮೈ ಲವ್. ನೀನು ನನಗೆ ಬೆಸ್ಟ್ ಗಿಫ್ಟ್ ಕೊಟ್ಟಿದ್ದೀಯಾ. ಹೊಸ ಜೀವನ, ಹೊಸ ಜರ್ನಿ!' ಎಂದು ಮಡದಿ ರಾಧಿಕಾರನ್ನು ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ರಾಧಿಕಾ ಕೂಡ ಪ್ರತಿಕ್ರಿಯೆ ನೀಡಿದ್ದು, ತಮ್ಮ ಅಕೌಂಟ್‌ನಲ್ಲಿ ಯಶ್‌ಗೆ ವಿಶ್ ಮಾಡಿ ಇನ್‌ಸ್ಟಾಗ್ರಾಮ್‌ಗೆ ಸ್ವಾಗತಿಸಿದ್ದಾರೆ.