ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಇನ್ನೇನು ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಫೆ.23ರಂದು ಚಿತ್ರದ ಟೀಸರನ್ನು ರಿಲೀಸ್ ಮಾಡುತ್ತಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಇನ್ನೇನು ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಫೆ.23ರಂದು ಚಿತ್ರದ ಟೀಸರನ್ನು ರಿಲೀಸ್ ಮಾಡುತ್ತಿದೆ. ಹೀಗಾಗಿ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಮಾರ್ಟಿನ್ ತಂಡದಿಂದ ಸುದ್ದಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು. ಸಿನಿಮಾದ ಟೀಸರ್ ರಿಲೀಸ್‌ಗೆ ಧ್ರುವ ಸರ್ಜಾ ಬರ್ತಾರೆ. ಫೆ. 23ಕ್ಕೆ ವೀರೇಶ್ ಚಿತ್ರಮಂದಿರದಲ್ಲಿ ಟೀಸರ್ ಲಾಂಚ್ ಆಗ್ತಿದ್ದು, ಕಾರ್ಯಕ್ರಮಕ್ಕೆ ಪ್ಯಾನ್ ಇಂಡಿಯಾ ಮಾಧ್ಯಮಗಳು ಬರ್ತಾರೆ ಎಂದು ಮಾರ್ಟಿನ್ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್ ತಿಳಿಸಿದ್ದಾರೆ.
ಟೀಸರ್ ರಿಲೀಸ್ ಪ್ರೆಸ್‌ಮೀಟ್ ದಿನ ಬರೋ ಗೆಸ್ಟ್‌ಗಳನ್ನ ಸರ್ ಪ್ರೈಸ್ ಆಗಿ ಇಟ್ಟಿದ್ದೇವೆ. ಸಿನಿಮಾದ ಶೂಟಿಂಗ್ ತುಂಬಾ ಚೆನ್ನಾಗಿ ಆಗಿದೆ. ಮಾರ್ಟಿನ್ ಸಿನಿಮಾ ಕಂಟೆಂಟ್ ತುಂಬಾ ಚನ್ನಾಗಿದೆ. ಮಾರ್ಟಿನ್ ಅನ್ನೋ ಹೆಸರು ಒಂದು ವ್ಯಕ್ತಿತ್ವ. ಮಾರ್ಟಿನ್ ಆ್ಯಕ್ಷನ್ ಪ್ರ್ಯಾಕ್ಡ್ ಸಿನಿಮಾ, ಬ್ಯೂಟಿಫುಲ್ ಕಂಟೆಂಟ್ ಇದೆ. ಆಸ್ಟ್ರೇಲಿಯಾ , ಮತ್ತು ಸೌತ್ ಅಮೇರಿಕಾದ ಆರ್ಟಿಸ್ಟ್ ಇದ್ದಾರೆ. ಕ್ಲೈಮ್ಯಾಕ್ಸ್ ಶೂಟಿಂಗ್ ಅನ್ನ 52 ದಿನ ಶೂಟಿಂಗ್ ಮಾಡಿದ್ದೇವೆ. ಕ್ಲೈಮ್ಯಾಕ್ಸ್‌ನ ದಿನ ಒಂದಕ್ಕೆ ಎರಡು ಮೂರು ದೃಶ್ಯ ಮಾತ್ರ ಮಾಡುತ್ತಿದ್ವಿ. ಮಾರ್ಟಿನ್ ಸಿನಿಮಾದ ಸಿಜಿ ಕೆಲಸವನ್ನ 10 ಕಂಪೆನಿಗಳು ಮಾಡ್ತಿದ್ದಾರೆ. ಮಾರ್ಚ್, ಏಪ್ರಿಲ್, ಮೇನಲ್ಲಿ ಮೂರು ಯುದ್ಧ ನಡೆಯುತ್ತಿದೆ. ಆ ಯುದ್ಧಗಳು ಮುಗಿದ ಬಳಿಕ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡ್ತೀವಿ ಎಂದು ಎ.ಪಿ.ಅರ್ಜುನ್ ಹೇಳಿದ್ದಾರೆ.
ಧ್ರುವ ಸರ್ಜಾ ಅಭಿಮಾನಿಗಳಿಗೆ ಭರ್ಜರಿ ಸುದ್ದಿ; 'ಮಾರ್ಟಿನ್' ಟೀಸರ್ ಬಿಡುಗಡೆಗೆ ದಿನಾಂಕ ಬಹಿರಂಗ
ನನಗೆ ಎನರ್ಜಿ ಇರೋದೆ ನನ್ನ ವಿಐಪಿಗಳಿಂದ: ನೀವೆಲ್ಲಾ 23ನೇ ತಾರೀಖು ಕಾಯ್ತಾ ಇದ್ದೀರಾ. ಅವತ್ತು ನಮ್ಮ ಮಾರ್ಟಿನ್ ಟೀಸರ್ ರಿಲೀಸ್ ಆಗ್ತಿದೆ. ಟೀಸರ್ ರಿಲೀಸ್ ಒಂದು ಚಿತ್ರಮಂದಿರದಲ್ಲಿ ಆಗ್ತಿದೆ. ಆದ್ರೆ ಟ್ರೈಲರ್ ಮಾತ್ರ ಎಲ್ಲಾ ಜಿಲ್ಲೆಯಲ್ಲೂ ಮಾಡಲಾಗ್ತಿದೆ. ನನಗೆ ಎನರ್ಜಿ ಇರೋದೆ ನನ್ನ ವಿಐಪಿಗಳಿಂದ ಮಾರ್ಟಿನ್ ಸಿನಿಮಾದಲ್ಲಿ ಸರ್‌ಪ್ರೈಸ್ ಇದೆ. ಹಿಂದಿನ ಸಿನಿಮಾಗಳಲ್ಲಿ ಡೈಲಾಗ್ ಜಾಸ್ತಿ ಇರ್ತಿತ್ತು. ಆದ್ರೆ ಮಾರ್ಟಿನ್‌ನಲ್ಲಿ ಡೈಲಾಗ್‌ಗಿಂತ ಹೆಚ್ಚು ಕಥೆಗೆ ಪ್ರಾಮುಖ್ಯತೆ ಕೊಟ್ಟಿದ್ದೇವೆ ಎಂದು ಸುದ್ದಿಗೋಷ್ಟಿಯಲ್ಲಿ ಚಿತ್ರದ ನಟ ಧ್ರುವ ಸರ್ಜಾ ತಿಳಿಸಿದರು.
‘ಮಾರ್ಟಿನ್’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹೊಸ ರಿಲೀಸ್ ದಿನಾಂಕ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ವೈಭವಿ ಶಾಂಡಿಲ್ಯ ಅವರು ‘ಮಾರ್ಟಿನ್’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈಗಾಗಲೇ ರಿಲೀಸ್ ಆಗಿ ವೈರಲ್ ಆಗಿರುವ ಮಾರ್ಟಿನ್ ಲುಕ್‌ನಲ್ಲಿ ಧ್ರುವ ಮಾಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಗ್ಯಾಂಗ್ ಸ್ಟರ್ ಪಾತ್ರ ಎನ್ನಲಾಗುತ್ತಿದೆ. ಅಲ್ಲದೇ ಈ ಸಿನಿಮಾದಲ್ಲಿ ರೋಚಕ ಆಕ್ಷನ್ ಸನ್ನಿವೇಶಗಳು ಇವೆಯಂತೆ. ಈ ಚಿತ್ರಕ್ಕಾಗಿ ಧ್ರುವ ಭರ್ಜರಿ ತಯಾರಿಯನ್ನೂ ಮಾಡಿಕೊಂಡಿದ್ದರು. ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹ ಹುರಿಗೊಳಿಸಿದ್ದಾರೆ.
Dhruva Sarja: ಕಾಶ್ಮೀರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ 'ಮಾರ್ಟಿನ್' ಚಿತ್ರದ ಶೂಟಿಂಗ್
ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದರೆ ಚಿತ್ರೀಕರಣ ವಿಳಂಬವಾದ ಕಾರಣ ರಿಲೀಸ್ ಮುಂದಕ್ಕೆ ಹೋಗಿದೆ. ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಧ್ರುವ ಕೊನೆಯದಾಗಿ ಪೊಗರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪೊಗರು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಇದೀಗ ಮಾರ್ಟಿನ್ ಹೇಗೆ ಸದ್ದು ಮಾಡಲಿದೆ ಎಂದು ಕಾದುನೋಡಬೇಕಿದೆ.
