ಬಾಲಿವುಡ್ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮೊದಲ ಮಗುವಿನ ಕೈಯಲ್ಲಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯ ಹರಿದು ಬರುತ್ತಿವೆ.

ಮಗಳ ಮೂಲಕ ಗುಡ್‌ನ್ಯೂಸ್ ಕೊಟ್ಟ ದೀಪಿಕಾ ರಣವೀರ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ತಮ್ಮ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಪೋಸ್ಟ್ ಹಾಕಿದ್ದು, ತಮ್ಮ ಪುಟ್ಟ ಮಗುವಿನ ಕೈಯಲ್ಲಿ ಗುಡ್‌ನ್ಯೂಸ್ ತಿಳಿಸುವ ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದ್ದು, ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ದುವಾ ಕೈಯಲ್ಲಿ ಗರ್ಭಧಾರಣೆ ಕಿಟ್ ನೀಡಿ ಪೋಷಕರಾಗುತ್ತಿರುವ ವಿಚಾರ ತಿಳಿಸಿದ ಜೋಡಿ:

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೋಡಿಗೆ ಸೆಪ್ಟೆಂಬರ್ 2024 ರಲ್ಲಿ ಮೊದಲ ಮಗುವಾಗಿ ಹೆಣ್ಣು ಮಗು ದುವಾ ಜನಿಸಿದ್ದಳು. ಈಗ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿ ಜಂಟಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ಜೋಡಿಯ ಮೊದಲ ಮಗಳು ದುವಾ, ಪಾಸಿಟಿವ್ ಗರ್ಭಧಾರಣೆಯ ಪರೀಕ್ಷಾ ಕಿಟ್ ಹಿಡಿದು ನನ್ನ ಅಪ್ಪ ಅಮ್ಮ ಮತ್ತೆ ಪೋಷಕರಾಗ್ತಿದ್ದಾರೆ ಎಂಬುದನ್ನು ಘೋಷಿಸುತ್ತಿರುವಂತೆ ತೋರಿಸಲಾಗಿದೆ.

ಇದನ್ನೂ ಓದಿ: ಸಿಕ್ಕಿಂ ಟೆಮಿ ಚಹಾ ಪುಡಿ ದಾಖಲೆಯ ಬೆಲೆಗೆ ಸೇಲ್: 1 ಕೇಜಿಗೆ ಬರೋಬ್ಬರಿ 27,000 ರೂ.ಗೆ ಸೇಲ್

ದೀಪಿಕಾ ಮತ್ತು ರಣವೀರ್ ಸಿಂಗ್ 2018 ರ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು. ದೀಪಿಕಾ ಅವರ ಕೊಂಕಣಿ ಪರಂಪರೆ ಮತ್ತು ರಣವೀರ್ ಅವರ ಸಿಂಧಿ ಪರಂಪರೆ ಹೀಗೆ ಎರಡು ಸಂಪ್ರದಾಯಗಳಲ್ಲಿ ಅವರು ಮದುವೆಯಾಗಿದ್ದರು.

2013ರಲ್ಲಿ ಗೋಲಿಯೋಂ ಕಿ ರಾಸಲೀಲಾ ರಾಮ್-ಲೀಲಾ ಸಿನಿಮಾದ ಸೆಟ್‌ನಲ್ಲಿ ಇಬ್ಬರಿಗೂ ಪರಸ್ಪರ ಪ್ರೀತಿಯಾಗಿದ್ದು, ನಂತರ ಹಲವು ವರ್ಷಗಳ ಡೇಟಿಂಗ್ ನಂತರ 2015 ರಲ್ಲಿ ಈ ಜೋಡಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು 2018 ರಲ್ಲಿ ತಮ್ಮ ಮದುವೆಯನ್ನು ಸಾರ್ವಜನಿಕಗೊಳಿಸಿದರು. ದೀಪಿಕಾ ಮತ್ತು ರಣವೀರ್ ಸೆಪ್ಟೆಂಬರ್ 8, 2024 ರಂದು ತಮ್ಮ ಮೊದಲ ಮಗು ದುವಾ ಅವರನ್ನು ಸ್ವಾಗತಿಸಿದರು.

ಇದನ್ನೂ ಓದಿ: ವಿದೇಶಿ ದೇಣಿಗೆಗೆ ಕಡಿವಾಣಕ್ಕೆ ಫಾದರ್ ಕಿಡಿ: ದೇಗುಲದ ಚಿನ್ನ ಸಮಾಜ ಸೇವೆಗೆ ಬಳಸಲಿ ಎಂದ ಫಾದರ್ ಪೌಲ್

View post on Instagram


View post on Instagram