ನಾಳೆ ಹಸೆಮಣೆ ಏರಲಿದ್ದಾರೆ ಡಿಪ್ಪಿ-ವೀರ್ ಜೋಡಿ | ಮದುವೆಗೆ ಸಾಕ್ಷಿಯಾಗಲಿದೆ ಇಟಲಿ | ಕನ್ನಡದ ಏಕೈಕ ನಿರ್ದೇಶಕರೊಬ್ಬರಿಗೆ ಮದುವೆಗೆ ಆಹ್ವಾನ 

ಮುಂಬೈ (ನ. 13):  ಬಿ- ಟೌನ್ ತಾರಾಜೋಡಿ ದೀಪಿಕಾ- ರಣವೀರ್ ನವೆಂಬರ್​ 14ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಮದುವೆಗೆ ಸ್ಯಾಂಡಲ್​ವುಡ್​ ನಿರ್ದೇಶಕರೊಬ್ಬರಿಗೆ ಆಹ್ವಾನ ಬಂದಿದೆ ಎನ್ನಲಾಗಿದೆ. 

ಬಲು ಚಂದ ಈ ಗುಳಿಕೆನ್ನೆ ಹುಡುಗಿ; ನಗುವಲ್ಲೇ ಮಾಡ್ತಾಳೆ ಮೋಡಿ..!

ನವೆಂಬರ್​ 14ರಂದು ಇಟಲಿಯಲ್ಲಿ ನಡೆಯಲಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಮದುವೆಗೆ ಆಯ್ಕೆ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿದೆ. ಅದರಂತೆ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಇಂದ್ರಜಿತ್​ ಲಂಕೇಶ್ ​ಗೆ ಆಮಂತ್ರಣ ನೀಡಲಾಗಿದೆಯಂತೆ. ಆದರೆ ಇಂದ್ರಜಿತ್​ಗೆ ಮದುವೆ ಆಮಂತ್ರಣ ಕೇವಲ ವಾಟ್ಸ್​ಪ್​ ಮೂಲಕ ಬಂದಿರುವುದರಿಂದ ಮದುವೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ರೆಸ್ಲಿಂಗ್ ಸ್ಟಾರ್ ಜೊತೆ ಫೈಟ್ ಮಾಡಿ ಆಸ್ಪತ್ರೆ ಸೇರಿದ ರಾಖಿ!

2006ರ ಇಂದ್ರಜಿತ್​ ಲಂಕೇಶ್​ ನಿರ್ದೇಶನದ ಐಶ್ವರ್ಯ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಉಪೇಂದ್ರ ಜೊತೆ ನಟಿಸುವುದರ ಮೂಲಕ ನಟಿ ದೀಪಿಕಾ ಪಡುಕೋಣೆ ಮೊಟ್ಟಮೊದಲ ಬಾರಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ ದೀಪಿಕಾಗೆ ಯಶಸ್ಸು ತಂದು ಕೊಟ್ಟಿತ್ತು.