ನವದೆಹಲಿ (ಡಿ. 17): ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನ ಫೇವರೇಟ್ ಕಪಲ್ ಗಳಾಗಿದ್ದಾರೆ. 

'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್‌ಫುಲ್ ಫೋಟೋ ಆಲ್ಬಂ

ದೀಪಿಕಾ -ರಣವೀರ್ ಕಳೆದ 6 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ರಣವೀರ್ ಗೆ ದೀಪಿಕಾ ಸದಾ ಬೆಂಬಲವಾಗಿ ನಿಂತಿದ್ದಾರೆ. ಇಬ್ಬರ ನಡುವಿನ ಸಂಬಂಧ ತುಂಬಾ ಅನ್ಯೋನ್ಯವಾಗಿದೆ. ರಣವೀರ್ ನೆನೆದು ದೀಪಿಕಾ ಆಗಾಗ ಭಾವುಕರಾಗುತ್ತಿರುತ್ತಾರೆ. ಇದಕ್ಕೆ ನಿನ್ನೆ ನಡೆದ ಅವಾರ್ಡ್ ಕಾರ್ಯಕ್ರಮವೇ ಸಾಕ್ಷಿ. ಪದ್ಮಾವತ್ ಚಿತ್ರಕ್ಕಾಗಿ ರಣವೀರ್ ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಾಗ ದೀಪಿಕಾ ಕಣ್ಣಾಲಿಗಳು ತುಂಬಿದ್ದವು. ಈ ಫೋಟೋ ವೈರಲ್ ಆಗುತ್ತಿದೆ.

ದೀಪಿಕಾಗೆ ಸೀರೆ ಉಡೊಸಬೇಕೆಂದು ರಣ್ವೀರ್ ಮೊದಲೇ ಡಿಸೈಡ್ ಮಾಡಿದ್ರಂತೆ!

ಪ್ರಶಸ್ತಿ ಸ್ವೀಕರಿಸಿದ ರಣವೀರ್ ಭಾವುಕರಾಗಿ ಮಾತನಾಡುತ್ತಾ, " ಪದ್ಮಾವತ್ ಚಿತ್ರದಲ್ಲಿ ನನಗೆ ರಾಣಿ ಸಿಗಲಿಲ್ಲ. ಆದರೆ ನಿಜ ಜೀವನದಲ್ಲಿ ರಾಣಿ ಸಿಕ್ಕಿದ್ದಾಳೆ. ಈ ಆರು ವರ್ಷಗಳಲ್ಲಿ ನಾನೇನಾದ್ರೂ ಸಾಧಿಸಿದ್ದರೆ ಅದು ದೀಪಿಕಾಳಿಂದ. ಥ್ಯಾಂಕ್ಯೂ ಸೋ ಮಚ್. ಲವ್ ಯೂ ಬೇಬಿ " ಎಂದು ಹೆಂಡತಿ ಕಡೆ ನೋಡಿದ್ದಾರೆ. 

ದೀಪಿಕಾ ರಣವೀರ್ ಮದುವೆಯಲ್ಲಿ ಪಾಲ್ಗೊಂಡವರಿಗೆ ಸಿಕ್ತು ಈ ಗಿಫ್ಟ್!

ಈಗ ತಾನೇ ಮದುವೆಯಾಗಿದ್ದರಿಂದ ಭಾರೀ ಸಂಭ್ರಮದಲ್ಲಿದ್ದಾರೆ. ಮದುವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  "ಮದುವೆ ಅನ್ನೋದು ಒಳ್ಳೆಯ ಸಂಗತಿ. ಮದುವೆಯಾದ ಮೇಲೆ ಮ್ಯಾಜಿಕ್ ಆಗಿದೆ. ಒಂದು ರೀತಿ ಪವರ್ ಬಂದಂತಾಗಿದೆ. ಮದುವೆ ನನಗೆ ಎಲ್ಲವನ್ನೂ ಕೊಟ್ಟಿದೆ"  ಎಂದು ರಣವೀರ್ ಸಿಂಗ್ ಹೇಳಿದ್ದಾರೆ.