ದೀಪಿಕಾ ಪಡುಕೋಣೆ -ರಣ್ವೀರ್ ಆರತಕ್ಷತೆ ಸಂಭ್ರಮವೂ ಮುಗಿದಿದೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಇದೆಲ್ಲದಕ್ಕಿಂತ ಭಿನ್ನವಾಗಿ ರಿಯಾಕ್ಟ್ ಮಾಡುತ್ತಿದೆ. ಒಂದಕ್ಕಿಂತಒಂದು ಟ್ರೋಲ್ ವಿಚಿತ್ರವಾಗಿದೆ ಜತೆಗೆ ನಿಮ್ಮಲ್ಲಿ ನಗುವಿನ ಬುಗ್ಗೆ ಮೂಡಿಸಬಹುದು.
ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆ ದೊಡ್ಡ ಸುದ್ದಿಯಾಗಿದ್ದು ಮದುವೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳು ಒಂದರ ಹಿಂದೆ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇವೆ. ನಾನು ಒಂದು ಮದುವೆಯಾಗಬೇಕು ..ಹೀಗೆಂದು ಕರಣ್ ಜೋಹರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಹೇಳಿಕೊಂಡಿದ್ದರು.
ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ರಿಸೆಪ್ಷನ್
ದೀಪಿಕಾ ರಣ್ ವೀರ್ ಆರತಕ್ಷತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗೆ ವೈರಲ್ ಆಗಿದ್ದವು. ಟ್ರೋಲಿಗರು ಮಾತ್ರ ಸುಮ್ಮನೆ ಕುಳಿತಿಲ್ಲ. ಒಂದಕ್ಕೊಂದು ವಿಭಿನ್ನ ಟ್ರೋಲ್ ಗಳನ್ನು ನೋಡಿ ನಗುವ ಸರದಿ ನಿಮ್ಮದು. ಎಂಎಸ್ ಧೋನಿ ದೀಪಿಕಾ-ರಣ್ವೀರ್ ನಡುವೆ ಬಂದಿದ್ದಾರೆ.
