ತಮ್ಮ ಬಳಿ ಅನೇಕ ಕಾರುಗಳನ್ನು ಇಟ್ಟುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರು ರೇಸ್ ಕ್ರೇಜ್ ಸಹ ಇದೆ. ಇತ್ತೀಚೆಗೆ ಸ್ವತಃ ಕಾರು ಡ್ರೈವ್ ಮಾಡಿ ಸುದ್ದಿಯಾಗಿದ್ದ ದರ್ಶನ್ ಇದೀಗ ಮೈಸೂರು ಮೋಟೋ ಕಾರು ರೇಸಿನಲ್ಲಿ ಪಾಲ್ಗೊಳ್ಳುತ್ತಾರಂತೆ.

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಮೋಟೋ ಕ್ರಾಸ್‌ರೇಸ್ ಆಯೋಜಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ನಗರದ ಲಲಿತಮಹಲ್ ಸಮೀಪದ ಮೈದಾನದಲ್ಲಿ ದಸರಾ ಕ್ರಾಸ್ ಫೆಸ್ಟ್ ಹೆಸರಿನಲ್ಲಿ ಅ.7ರಂದು ಆಯೋಜಿಸುತ್ತಿರುವ ಮೋಟೋ ಕ್ರಾಸ್ ರೇಸ್‌ನಲ್ಲಿ ದೇಶದ ವಿವಿಧೆಡೆಯಿಂದ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Add Asianetnews Kannada as a Preferred SourcegooglePreferred

ಪ್ರವಾಸೋದ್ಯಮ ಇಲಾಖೆ ಮತ್ತು ಅಟೋಮೋಟಿವ್ ಕ್ಲಬ್‌ನಿಂದ ಆಯೋಜಿಸುತ್ತಿರುವ ಈ ಸ್ಪರ್ಧೆಯನ್ನು ನಟ ದರ್ಶನ್ ಉದ್ಘಾಟಿಸಲಿದ್ದಾರೆ, ಅವರೂ ಈ ಸ್ಪರ್ಧೆಯಲ್ಲಿ
ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. 

ಕಾರು ರೇಸ್ ಮಾಡಿದ ದರ್ಶನ್