ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಸಿನಿಮಾ ಬಿಟ್ಟರೆ ಕಾರು ಮತ್ತು ಪ್ರಾಣಿಗಳೆಂದರೆ ಅಚ್ಚು ಮೆಚ್ಚು. ಇತ್ತ ಸ್ಯಾಂಡಲ್ ವುಡ್ ನ ಇತರೆ ನಟರು ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದರೆ ದರ್ಶನ್ ಕಾರು ಸ್ಪೋರ್ಟ್ಸ್ ಕಾರು ಚಲಾಯಿಸಿದ್ದಾರೆ. ದರ್ಶನ್ ಧೂಳೆಬ್ಬಿಸಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿದೆ. ದರ್ಶನ್ ಕಾರು ಚಲಾಯಿಸುವ ಚಾಕಚಕ್ಯತೆ ನೀವು ಒಮ್ಮೆ ನೋಡಿಕೊಂಡು ಬನ್ನಿ...

ಬೆಂಗಳೂರು(ಸೆ.15) ಇತ್ತೀಚಿಗೆ ಲಂಬೋರ್ಗಿಯ ಕಾರ್ ತಂದು ಸುದ್ದಿ ಮಾಡಿದ್ದ ದರ್ಶನ್ ಇದೀಗ ಸ್ಪೋರ್ಟ್ಸ್ ಕಾರು ಚಲಾಯಿಸಿದ್ದಾರೆ. ಇದು ಯಾವುದೋ ಚಿತ್ರದ ಶೂಟಿಂಗ್ ಗೆ ಎಂದು ಪರಿಭಾವಿಸಿದರೆ ತಪ್ಪು.

Add Asianetnews Kannada as a Preferred SourcegooglePreferred

ಗುರುವಾರ ಮೈಸೂರಿಗೆ ದರ್ಶನ್ ಹೋಗಿದ್ದು, ಅಲ್ಲಿ ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡಿದ್ದಾರೆ. ಪಕ್ಕಾ ಕಾರ್ ರೇಸ್ ನಂತೆ ಕಂಡುಬಂದಿದ್ದು ವೇಗಕ್ಕೆ ಅವರೇ ಸಾಟಿ ಎಂಬಂತಾಗಿದೆ. ಮಣ್ಣಿನ ರಸ್ತೆಯಲ್ಲಿ ದರ್ಶನ್ ರಿಯಲ್ ಸ್ಟಂಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ದರ್ಶನ್ ಬಳಿ ಈಗಾಗಲೇ ಲ್ಯಾಂಬೋರ್ಗಿನಿ, ಮಿನಿ ಕೂಪರ್, ಫಾರ್ಚೂನರ್, ಬೆಂಜ್, ರೇಂಜ್ ರೋವರ್, ಐ-20, ಆಡಿ ಕ್ಯೂ, ಜಾಗ್ವಾರ್, ಸೇರಿದಂತೆ ಹಲವು ಕಾರ್ ಗಳಿವೆ. ಈಗ ‘ಯಜಮಾನ’ ಸಿನಿಮಾದ ಶೂಟಿಂಗ್ ನಲ್ಲಿರುವ ದರ್ಶನ್ ಸಾಹಸ ನೀವು ನೋಡಿಕೊಂಡು ಬನ್ನಿ....

Scroll to load tweet…