'ಪ್ರಕರಣ ನ್ಯಾಯಾಲದಲ್ಲಿರುವಾಗ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ರಮ್ಯಾ ಪೋಸ್ಟ್ ಮಾಡಿದ್ದು ಸರಿಯಲ್ಲ. ಕೇಸ್ ಕಾನೂನು ರೀತಿಯಲ್ಲಿ ಬೆಳವಣಿಗೆ ಆಗುತ್ತಿರುವಾಗ ರಮ್ಯಾ ಏಕಪಕ್ಷೀಯ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದು ಯಾಕೆ ಎಂಬುದು ವಿಜಯಲಕ್ಷ್ಮೀ ಪ್ರಶ್ನೆ..!
ನಟ ದರ್ಶನ್ (Darshan Thoogudeepa) ಕೇಸ್ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಮರುಜೀವ ಪಡೆದುಕೊಳ್ಳುತ್ತಿರುವುದು ಗೊತ್ತೇ ಇದೆ. ಹೈಕೋರ್ಟ್ ದರ್ಶನ್ ಕೇಸಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಷ್ಟೊಂದು ಸಮಾಧಾನ ಇಲ್ಲ ಎಂಬುದು ಇತ್ತೀಚೆಗೆ ಸುಪ್ರೀಂನಲ್ಲಿ ನಡೆದ ಚರ್ಚೆಯ ವೇಳೆ ಬೆಳಕಿಗೆ ಬಂದಿದೆ. ಸುಪ್ರೀಂ ಹೇಳಿಕೆಗೆ ನಟಿ ರಮ್ಯಾ ಅವರು ಸಹಮತ ವ್ಯಕ್ತಪಡಿಸಿ, 'ಭಾರತದ ಶ್ರೀಸಾಮಾನ್ಯರಿಗೂ ನ್ಯಾಯ ಸಿಗುವ ಭರವಸೆ ಕಾಣಿಸುತ್ತಿದೆ. ಸುಪ್ರೀಂ ಕೋರ್ಟ್ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅನ್ನೋ ಭರವಸೆ ಇದೆ' ಎಂದು ಪೋಸ್ಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ದರ್ಶನ್ ಫ್ಯಾನ್ಸ್ ನಟಿ ರಮ್ಯಾ (Ramya) ವಿರುದ್ಧ ತಿರುಗಿ ಬಿದ್ದಿದ್ದರು.
ರಮ್ಯಾ ಮಾತ್ರವಲ್ಲ, ನಟ ಪ್ರಥಮ್ ಕೂಡ ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದು, ಈ ಸಂಬಂಧ
ನಟಿ ರಮ್ಯಾ ಪರವಾಗಿ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಮೀ (Vijayalakshmi) ಅವರು 'ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ರಮ್ಯಾ ಪೋಸ್ಟ್ ಮಾಡಿದ್ದು ಸರಿಯಲ್ಲ. ಪ್ರಕರಣ ನ್ಯಾಯಾಲದಲ್ಲಿರುವಾಗ ಏಕಪಕ್ಷೀಯ ಅಭಿಪ್ರಾಯ ಸರಿಯಲ್ಲ. ಆ ಬಗ್ಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಅಗತ್ಯವಾದರೂ ಏನಿತ್ತು?
ಕಾನೂನಿಗೆ ಸಂಬಂಧಪಟ್ಟ ವಿಷಯದಲ್ಲಿ, ರಮ್ಯಾ ಹಾಕಿರುವ ಪೋಸ್ಟ್ ಹೈಕೋರ್ಟ್ ನಿರ್ಧಾರವನ್ನು ಟೀಕಿಸಿದಂತೆ ಆಗುವುದಿಲ್ಲವೇ? ನಟಿ ರಮ್ಯಾ ಪೋಸ್ಟ್ ಮಾಡುವ ಅಗತ್ಯವೇ ಇರಲಿಲ್ಲ. ಹೀಗಾಗಿ ವಿಜಯಲಕ್ಷ್ಮೀ ದೂರು ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟಿ ರಮ್ಯಾ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ವಿಜಯಲಕ್ಷ್ಮೀ ಮುಂದಾಗಿದ್ದಾರೆ' ಎನ್ನಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ನಟಿ ರಮ್ಯಾ ಪೋಸ್ಟ್ ಮಾಡಿದ್ದೇ ತಪ್ಪು. ಆ ತಪ್ಪಿಗೆ ದರ್ಶನ್ ಫ್ಯಾನ್ಸ್ ರೊಚ್ಚಿಗೆದ್ದಿದ್ದು ಮತ್ತೊಂದು ತಪ್ಪು. ಇದೀಗ ತಪ್ಪಿಗೆ ತಪ್ಪು ಸೇರಿ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ಮಧ್ಯೆ ಪೋಸ್ಟ್ ವಾರ್ ಶುರುವಾಗಿದೆ.
ಇದೀಗ, ಅಚ್ಚರಿ ಬೆಳವಣಿಗೆ ನಡೆದಿದ್ದು, ನಟ ದರ್ಶನ್ ಫ್ಯಾನ್ಸ್ ಪೇಜ್‌ನಲ್ಲಿ 'ಯಾವುದೇ ವಿವಾದಕ್ಕೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಸ್ವತಃ ದರ್ಶನ್ ಅಭಿಮಾನಿಗಳೇ ಮನವಿ ಮಾಡಿದ್ದಾರೆ. 'ಡಿ ಫ್ಯಾನ್ಸ್' ಆಫೀಶಿಯಲ್ ಪೇಜ್‌ನಲ್ಲಿ ಮನವಿ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ 'ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ. ಯಾರಿಗೂ ತೊಂದರೆ ಮಾಡ್ಬೇಡಿ.. ಯಾವುದಕ್ಕೂ ತಲೆ ಕೆಡಿಸ್ಕೊಳ್ಳಬೇಡಿ' ಅಂತ ಪೋಸ್ಟ್ ಮಾಡಲಾಗಿದೆ. ಅಭಿಮಾನಿಗಳ ಆಕ್ರೋಶದಿಂದ ದರ್ಶನ್ ಬೇಲ್ ಪಡೆಯಲು ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಈ ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ, ಅತ್ತ ನಟ ದರ್ಶನ್ ಕೇಸ್ ನ್ಯಾಯಾಲಯದಲ್ಲಿ ಅದೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದರೆ, ಇತ್ತ ನಟಿ ರಮ್ಯಾ ಮಾಡಿರೋ ಪೋಸ್ಟ್ ನಟ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಅದಕ್ಕೆ ರಿಯಾಕ್ಟ್ ಮಾಡುವ ಭರದಲ್ಲಿ ದರ್ಶನ್ ಫ್ಯಾನ್ಸ್ ನಟಿ ರಮ್ಯಾ ವಿರುದ್ಧ ಕೆಟ್ಟ ಕಾಮೆಂಟ್ ಮಾಡಿ ಈಗ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತಿದೆ. ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಎಂಟ್ರಿ ಕೊಟ್ಟಿದ್ದು ಇದೀಗ ಈ ಸಮಸ್ಯೆ ಎಲ್ಲಿಗೆ ತಲುಪಬಹುದು ಎಂಬ ತೀವ್ರ ಕುತೂಹಲಕ್ಕೆ ಮನೆಮಾಡಿದೆ. ಈ ಸೋಷಿಯಲ್ ಮೀಡಿಯಾ ವಾರ್ ಮುಂದೆ ಕಾನೂನು ಸಮರಕ್ಕೆ ದಾರಿ ಮಾಡಿಕೊಡಲಿರುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.
