ಇಂಥ ದರ್ಶನ್ ಅಭಿಮಾನಿಗಳಿಂದ ಸಮಾಜಕ್ಕೆ ಎಂಥ ಮೆಸೇಜ್ ಹೋಗುತ್ತಿದೆ. ನನ್ನಂಥ ಸಾಮಾಜಿಕ ಜೀವನದಲ್ಲಿ ಇರೋರಿಗೇ ಇವರು ಹೀಗೆ ಮೆಸೇಜ್ ಮಾಡ್ತಾರೆ ಅಂದ್ರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಗತಿಯೇನು? ಅವರು ಹೆದರಿಕೊಂಡು ಸುಮ್ಮನೇ ಇರುತ್ತಾರೆ. ನಾನು ಯಾವತ್ತೂ ಸುಮ್ಮನೇ ಇರೋದಿಲ್ಲ..
ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ನಟ ದರ್ಶನ್ (Darshan Fans) ಫ್ಯಾನ್ಸ್ ಬಗ್ಗೆ 'ಏಷ್ಯಾನೆಟ್ ಸುವರ್ಣ ನ್ಯೂಸ್'ನಲ್ಲಿ ಮಾತನ್ನಾಡಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ ಮಾಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ರೊಚ್ಚಿಗೆದ್ದಿದ್ದ ನಟ ದರ್ಶನ್ (Darshan Thoogudeepa) ಫ್ಯಾನ್ಸ್, ನಟಿ ರಮ್ಯಾ ವಿರುದ್ಧ ಕೆಟ್ಟ-ಕೊಳಕು ಪದಗಳಲ್ಲಿ ನಿಂದಿಸಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ನಟಿ ರಮ್ಯಾ ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಏಷ್ಯಾನೆಟ್ ಸುವರ್ಣ ಜೊತೆ ಈ ಬಗ್ಗೆ ಮಾತನ್ನಾಡಿರುವ ರಮ್ಯಾ 'ಸ್ವತಃ ನಟ ದರ್ಶನ್ ಇಂಥ ಫ್ಯಾನ್ಸ್‌ಗಳನ್ನು ಎನ್‌ಕರೇಜ್ ಮಾಡುತ್ತಿದ್ದಾರೆ' ಎಂದು ನೇರವಾಗಿಯೇ ಹೇಳಿದ್ದಾರೆ.
ಈ ಬಗ್ಗೆ ಮಾತನ್ನಾಡಿರೋ ರಮ್ಯಾ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ರಮ್ಯಾ 'ಹೌದು, ನಟ ದರ್ಶನ್ ಅವರಿಗೆ ಏನು ನಡಿತಾ ಇದೆ ಅನ್ನೋದರ ಬಗ್ಗೆ ಸಂಪೂರ್ಣ ಅರಿವು ಇರುತ್ತೆ. ಆದ್ರೂ ಕೂಡ ಅವ್ರು ಈ ಬಗ್ಗೆ ಮಾತನ್ನಾಡೋದಿಲ್ಲ. ಅಂದ್ರೆ.. ಅವರು ಸ್ವತಃ ತಮ್ಮ ಇಂಥ ಅಭಿಮಾನಿಗಳನ್ನು ಎನ್‌ಕರೇಜ್ ಮಾಡ್ತಾರೆ. ಅಂಥ ಅಭಿಮಾನಿಗಳು ಮಾಡೋ ಕೆಟ್ಟ ಹಾಗೂ ಕೊಳಕು ಮೆಸೇಜ್‌ಗೂ ರೇಣುಕಾಸ್ವಾಮಿ ಮೆಸೇಜ್‌ಗೂ ಏನು ವ್ಯತ್ಯಾಸ ಇದೆ? ಇಂಥ ಕೆಟ್ಟ ಮನಸ್ಥಿತಿ ಇರೋ ಜನರಿಂದಲೇ ಇವತ್ತು ಸಮಾಜದಲ್ಲಿ ಹೆಣ್ಣುಮಕ್ಕಳು ಅಪಾಯ ಎದುರಿಸುವಂತಾಗಿದೆ.
ಇಂಥ ದರ್ಶನ್ ಅಭಿಮಾನಿಗಳಿಂದ ಸಮಾಜಕ್ಕೆ ಎಂಥ ಮೆಸೇಜ್ ಹೋಗುತ್ತಿದೆ. ನನ್ನಂಥ ಸಾಮಾಜಿಕ ಜೀವನದಲ್ಲಿ ಇರೋರಿಗೇ ಇವರು ಹೀಗೆ ಮೆಸೇಜ್ ಮಾಡ್ತಾರೆ ಅಂದ್ರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಗತಿಯೇನು? ಅವರು ಹೆದರಿಕೊಂಡು ಸುಮ್ಮನೇ ಇರುತ್ತಾರೆ. ನಾನು ಯಾವತ್ತೂ ಸುಮ್ಮನೇ ಇರೋದಿಲ್ಲ, ನನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತೇನೆ. ಆದರೆ, ಕೆಲವು ಸೆಲೆಬ್ರಿಟಗಳು ಹೀಗೆ ಹೇಳದೇ ನನಗೆ ಮೆಸೇಜ್ ಮಾಡಿ ನನಗೆ ಸಪೋರ್ಟ್ ಮಾಡುತ್ತಾರೆ. ಯಾಕಂದ್ರೆ, ಅವರೇನಾದ್ರೂ ಹೇಳಿದ್ರೆ ಅಥವಾ ಪೋಸ್ಟ್ ಮಾಡಿದ್ರೆ ದರ್ಶನ್ ಅವರ ಇಂಥ ಅಭಿಮಾನಿಗಳು ಅವರಿಗೆ ಕೆಟ್ಟ ಮೆಸೇಜ್ ಮಾಡುತ್ತಾರೆ. ಜೊತೆಗೆ, ಅವರಿಗೆ ಬೆದರಿಕೆ ಹಾಕ್ತಾರೆ, ಟ್ಯಾಕ್ ಮಾಡ್ತಾರೆ. ಅದ್ರೆ ನಾನು ಯಾವುದಕ್ಕೂ ಹೆದರಿ ಸುಮ್ಮನಿರೋದಿಲ್ಲ' ಎಂದಿದ್ದಾರೆ ನಟಿ ರಮ್ಯಾ.
ಅಷ್ಟೇ ಅಲ್ಲ, ನಟಿ ರಮ್ಯಾ ಅವರು ‘ನನಗೂ ನಟ ದರ್ಶನ್ ಅವರಿಗೂ ಯಾವುದೇ ಸಮಸ್ಯೆ ಇಲ್ಲ. ನಾವಿಬ್ಬರೂ ಒಂದು ಸಿನಿಮಾದಲ್ಲಿ (ದತ್ತ) ಒಟ್ಟಿಗೇ ನಟಿಸಿದ್ದೇವೆ ಕೂಡ. ಆದರೆ, ಅವರ ಅಭಿಮಾನಿಗಳ ಮನಸ್ಥಿತಿ ಸರಿ ಇಲ್ಲ ಅಂತಷ್ಟೇ ಹೇಳ್ತಿರೋದು. ದರ್ಶನ್ ಅವ್ರಿಗೆ ಎಲ್ಲಾನೂ ಗೊತ್ತಿರುತ್ತೆ.. ಆದ್ರೂ ಯಾಕೆ ಸುಮ್ಮನಿದ್ದಾರೆ? ಯಾರಾದ್ರೂ ಮಾತಾಡ್ಲೇಬೇಕು.. ನಾನು ಮಾತಾಡ್ತಾ ಇದೀನಿ.. ಮುಂದೆ ಯಾವತ್ತೂ ನಾವು ಇರೋದಿಲ್ಲ. ಆದ್ರೆ ಮುಂದೆ ಬರೋ ಹೆಣ್ಣುಮಕ್ಕಳ ಗತಿಯೇನು? ಇಂದವ್ರಿಂದ ಹೆಣ್ಣುಮಕ್ಕಳ ರೇಪ್ ಹಾಗೂ ಕೊಲೆ ಆಗ್ತಿವೆ. ಇದಕ್ಕೆಲ್ಲಾ ಕಡಿವಾಣ ಬೀಳಬೇಕು' ಎಂದಿದ್ದಾರೆ ರಮ್ಯಾ.
