ಸ್ಯಾಂಡಲ್‌ವುಟ್ ನಟ ಉಪೇಂದ್ರ ನಾಪತ್ತೆ: ಪೊಲೀಸರು ನೋಟಿಸ್ ನೀಡಿದರೂ ವಿಚಾರಣೆಗೆ ಗೈರು
ಸ್ಯಾಂಡಲ್‌ವುಡ್ ನಟ ಉಪೇಂದ್ರ ಮೇಲೆ ಜಾತಿನಿಂದನೆ ಕೇಸ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಪೊಲೀಸ್ ಕೈಗೆ ಸಿಗುತ್ತಿಲ್ಲ.
ಬೆಂಗಳೂರು (ಆ.14): ನಟ, ನಿರ್ದೇಶಕ ಉಪೇಂದ್ರರಿಂದ ಆಪೇಕ್ಷಾರ್ಹ ಪದಬಳಕೆ ವಿಚಾರವಾಗಿ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು (ಸಿಕೆ ಅಚ್ಚುಕಟ್ಟು) ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಜಾತಿನಿಂದನೆ ಮಾಡಲಾಗಿದೆ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದರೂ ನಟ ಉಪೇಂದ್ರ ಪೊಲೀಸರ ಕೈಗೆ ಸಿಗುತ್ತಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಯಾಂಡಲ್‌ವುಟ್ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ಹೇಳಿದ 'ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ' ಎಂಬ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಜಾತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ನಟ ಉಪೇಂದ್ರನ ವಿರುದ್ಧ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಜಾತುನಿಂದನೆ ಮಾಡಲಾಗಿದೆ ಎಫ್ಐಆರ್ ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗದೇ ಗೈರಾಗಿದ್ದಾರೆ. ಜೊತೆಗೆ, ಪೊಲೀಸರ ಸಂಪರ್ಕಕ್ಕೂ ಸಿಗದೇ ಫೋನ್ ಸ್ವಿಷ್ ಆಫ್ ಮಾಡಿಕೊಂಡಿದ್ದಾರೆ.
'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿದ ಬುದ್ಧಿವಂತ ಉಪೇಂದ್ರ
ಪೊಲೀಸರ ಕೈಗೆ ಸಿಗದೇ ಎಲ್ಲಿಗೆ ಹೋದರು ಉಪೇಂದ್ರ..? ನಟ ಉಪೇಂದ್ರ ಅವರು ಬಂಧನ ಭೀತಿಯಲ್ಲಿ ನಟ ಉಪೇಂದ್ರ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬರುತ್ತಿದೆ. ಅವರನ್ನು ಸಂಪರ್ಕ ಮಾಡಲು ಇದ್ದ ಎಲ್ಲಾ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ಉಪೇಂದ್ರ ನಿವಾಸಕ್ಕೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಂದ ಭೌತಿಕವಾಗಿಯೂ ನೋಟೀಸ್ ಜಾರಿ ಮಾಡಲಾಗಿದೆ. ಇನ್ನು ಸ್ವಿಚ್ ಆಫ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ವಾಟ್ಸಾಪ್‌ಮೂಲಕವೂ ಪೊಲೀಸರು ನೋಟೀಸ್ ರವಾನಿಸಿದ್ದಾರೆ. ಇಂದು 10.30 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿದ್ದರು.
ಜಾತಿನಿಂದನೆ (ಅಟ್ರಾಸಿಟಿ) ಕೇಸ್ ದಾಖಲಾಗಿರುವ ಹಿನ್ನೆಲೆ ಹೇಳಿಕೆ ಪಡೆಯಲು ನೋಟೀಸ್ ಕೊಡಲಾಗಿತ್ತು. ಆದರೆ, ನೋಟಿಸ್ ನೀಡಲು ಹೋದ ವೇಳೆಯೇ ನಟ ಉಪೇಂದ್ರ ನಾಪತ್ತೆಯಾಗಿದ್ದರು. ಸದ್ಯ ಎರಡು ನಿವಾಸಕ್ಕೂ ನೊಟೀಸ್ ಕೊಡಲಾಗಿದೆ. ಕತ್ರಿಗುಪ್ಪೆ ಹಾಗೂ ಸದಾಶಿವನಗರದಲ್ಲಿರುವ ನಿವಾಸಕ್ಕೆ ತೆರಳಿ ನೋಟಿಸ್ ಕೊಡಲಾಗಿದ್ದು, ಸದ್ಯ ಸ್ನೇಹಿತರು ಹಾಗೂ ಸಂಬಂಧಿಕರ ಸಂಪರ್ಕದಲ್ಲಿರುವ ಬಗ್ಗೆ ಪೊಲೀಸರಿಂದ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಜಾತಿನಿಂದನೆ ಕೇಸಿನಲ್ಲಿ ಉಪೇಂದ್ರನನ್ನು ಬಂಧನವಾಗಬಹುದೇ?: ನಟ ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಪ್ರಕರಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇಲ್ಲ. ಪೊಲೀಸರು ಮೊದಲಿಗೆ ನಟ ಉಪೇಂದ್ರ ವಿಚಾರಣೆಗೆ ನಡೆಸಲಿದ್ದಾರೆ. ನಂತರ ತಮ್ಮ ಜಾತಿನಿಂದನೆ ಹೇಳಿಕೆ ಯಾವ ಉದ್ದೇಶದಿಂದ ನೀಡಲಾಗಿದೆ? ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ? ಉದ್ದೇಶಪೂರ್ವಕವಾಗಿ ಹೇಳಿಕೆ ಕೊಡಲಾಗಿದೆಯೇ? ಎಲ್ಲವನ್ನು ಪರಿಶೀಲನೆ ಮಾಡಲಿದ್ದಾರೆ. ನಂತರ, ನಟ ಉಪೇಂದ್ರ ನೀಡುವ ಸ್ಟೇಟ್ ಮೆಂಟ್ ನಿಯಮಾವಳಿ ಪುಸ್ತಕದಲ್ಲಿ ಇದೆಯೇ ಎಂದು ಪರಿಶೀಲನೆ ಮಾಡಲಾಗುತ್ತದೆ. ನಂತರ, ಬಂಧಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.
ಬುದ್ಧಿವಂತ ನಟ ಉಪೇಂದ್ರ ಹೊಲೆಗೇರಿ ಹೇಳಿಕೆ: ಎಫ್‌ಐಆರ್ ದಾಖಲಿಸಿದ ಸಮಾಜ ಕಲ್ಯಾಣ ಇಲಾಖೆ
ಹಲಸೂರು ಗೇಟ್ ಠಾಣೆಯಲ್ಲೂ ಕೇಸ್ ದಾಖಲು: ಇನ್ನು ಜಾತಿನಿಂದನೆ ಕುರಿತಂತೆ ನಟ, ನಿರ್ದೇಶಕ ಉಪೇಂದ್ರ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ದೂರು ನೀಡಿದರೆ, ಈಗ ಹಲಸೂರು ಗೇಟ್ ಠಾಣೆಯಲ್ಲಿ ಭೈರಪ್ಪ ಹರೀಶ್ ಎನ್ನುವವರು ನೀಡಿದ ದುರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.