ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಅವರು ತಮ್ಮ ಫೇಸ್‌ಬುಕ್‌ ನೇರ ಪ್ರಸಾರದಲ್ಲಿ 'ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ' ಎನ್ನುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. 

ಬೆಂಗಳೂರು (ಆ.13): ಸ್ಯಾಂಡಲ್‌ವುಡ್‌ ನಟ ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಸ್ಥಾಪಿಸಿದ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಲಹೆ ನೀಡುವವರ ಆಯ್ಕೆ ಕುರಿತು ಮಾನಾಡುವಾಗ 'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಹೊಲೆಗೇರಿಯಲ್ಲಿ ಇರುವವರೆಲ್ಲರೂ ಕೆಟ್ಟವರೆಂದು ಬಿಂಬಿಸಿದ್ದಾರೆ, ಕೆಳವರ್ಗದವನ್ನು ಅವಮಾನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಉಪೇಂದ್ರ ಮಾತನಾಡಿದ ವೀಡಿಯೋದಲ್ಲೇನಿದೆ? 
"ಇನ್ನೋಸೆಂಟ್‌ ಹೃದಯಗಳಿಂದಲೇ ನಿಜವಾದ ಬದಲಾವಣೆ ಸಾಧ್ಯ. ಇನ್ನೋಸೆಂಟ್‌ ಅಂದರೆ ಮುಗ್ಧತೆ ಇದೆಯಲ್ಲಾ ಅದೇ ಸತ್ಯದ ಮನಸ್ಸು. ಇನ್ನೋಸೆಂಟ್‌ ಮನಸ್ಸುಗಳು ಇಲ್ಲಿ ಜಾಯಿನ್‌ ಆಗಲಿ ಮಾತನಾಡಲಿ, ಹೇಳುವುದಕ್ಕೆ ಇಷ್ಟಪಡ್ತೀನಿ. ಅವರಿಂದ ನಮಗೆ ತುಂಬಾ ಬೆನಿಫಿಟ್‌ ಇದೆ, ಸಜೆಷನ್‌ ಕೂಡ ಉತ್ತಮವಾಗಿರುತ್ತದೆ. ಏನೋ ಒಂದು ಕೇರ್‌ಲೆಸ್‌ ಆಗಿ ಏನೋ ಒಂದು ಸಜೆಸ್ಟ್‌ ಮಾಡೋಣ, ಕೇರ್‌ಲೆಸ್‌ ಆಗಿ ಅವಹೇಳನ ಮಾಡುವುದಾಗಲಿ, ಏನೋ ನಾವು ಮಾತನಾಡಬೇಕು ಟೈಮ್‌ ಇದೆ ಎಂದು ಬಾಯಿಗೆ ಬಂದಂತೆ ಕಮೆಂಟ್‌ ಮಾಡೋಣ ಎನ್ನುವವರೂ ಇದ್ದಾರೆ. ಅಂತಹವರನ್ನ ಬಿಡಿ, ಅವರನ್ನು ಏನೂ ಮಾಡೋಕೆ ಆಗಲ್ಲ. 'ಊರು ಎಂದಮೇಲೆ ಹೊಲೆಗೇರಿ ಇರುತ್ತೆ', ಆ ತರಹ ಇಂಥವರೂ ಇರುತ್ತಾರೆ ಜಗತ್ತಲ್ಲಿ ಏನೂ ಮಾಡೋಕಾಗಲ್ಲ. ಅವರನ್ನೆಲ್ಲಾ ಬಿಟ್ಟಾಕೋಣ ಅದನ್ನು ಓದೋದು ಬೇಡ ನಾವು. ಸ್ವಲ್ಪ ನಾವು ಹೇಳ್ತಿರೋದು ಇಂಥ ಒಂದು ಪ್ಯೂರ್‌ ಜನರನ್ನ ಪ್ರೀತಿಸೋವಂಥದ್ದು, ಜನರನ್ನು ಪ್ರೀತಿಸುವುದೇ ಜನಾರ್ಧನನ ಪೂಜೆ ಎನ್ನುತ್ತಾರೆ. ಜನರನ್ನು ಪ್ರೀತಿಸುವುದೇ ದೇಶಪ್ರೇಮ ಎನ್ನುತ್ತಾರೆ" ಎಂದು ಮಾತನಾಡಿದ್ದಾರೆ.

Bharjari Bachelors ಫ್ಯಾಮಿಲಿ ರೌಂಡ್‌: ಬ್ಯಾಚುಲರ್‌ಗಳ ಅಪ್ಪ- ಅಮ್ಮ ಹೇಗಿದ್ದಾರೆ ಗೊತ್ತಾ? ಇಲ್ಲಿ ನೋಡಿ..

ಪ್ರಜಾಕೀಯ ಎಂದರೆ ಬ್ರಾಹ್ಮಣ್ಯದ ವಿಷ್ಯ: 
ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ: ಉಪೇಂದ್ರ (ಪ್ರಜಾಕೀಯ): ಅಲ್ಲ ಈತನ ಯಾವುದೋ ಒಂದು ಪಕ್ಷದ ಸಿದ್ದಾಂತದ ವಿರುದ್ಧ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರೆ, ಆ ಜನರನ್ನು "ಹೊಲ್ಗೇರಿ"ಗೆ ಹೊಲಿಸೋದು ಎಷ್ಟರ ಮಟ್ಟಕ್ಕೆ ಸರಿ..?? ಹಾಗಾದರೆ ಈ ಮನುಷ್ಯನ ಪ್ರಕಾರ ಹೊಲ್ಗೇರಿಯಲ್ಲಿ ಬದುಕುವ ಜನರೆಲ್ಲರು ಕೆಟ್ಟವರಾ..?? ಇಂತಹ ಕೆಟ್ಟ ಮನಸ್ಥಿತಿಗೆನೇ ನಾವು ಬ್ರಾಹ್ಮಣ್ಯ ಅಂತ ಉಗಿಯೋದು.. ಅಲ್ಲ್ರೀ ಸ್ವಾಮಿ ನಿಮಗೆ ನಿಜವಾಗಿಯೂ ಸಮಾಜದ ಮೇಲೆ ಕಾಳಜಿ ಇದಿದ್ದಿದ್ರೆ ಊರಿನಲ್ಲಿ ಹೊಲ್ಗೇರಿನೆ ಇರಬಾರದು ಅನ್ನೋ ಸಮಾನತೆಯ ಸಮಾಜದ ಬಗ್ಗೆ ಯೋಚನೆ ಮಾಡ್ತಿದ್ರಿ.. ಪ್ರಜಾಕೀಯ ಅನ್ನೋದು "ವಿಷಯ" ಅಲ್ಲ.. ಅದೊಂದು ಬ್ರಾಹ್ಮಣ್ಯದ "ವಿಷ" ಅಷ್ಟೇ.. ಎಂದು ದೀಪುಗೌಡ್ರು ಎನ್ನುವ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಲಿ:
'ಉಪೇಂದ್ರ ತನ್ನ ಹೊಸ ಚಿತ್ರ ಘೋಷಣೆ ವೇಳೆ 'ಬುದ್ದಿವಂತರಿಗೆ ಮಾತ್ರ' ಎಂಬುದಾಗಿ ಟ್ಯಾಗ್ ಲೈನ್ ಹಾಕುತ್ತಾರೆ. ಈ ಪ್ರವೃತ್ತಿ, ಪ್ರೇಕ್ಷಕರಿಗೆ ಜನರಿಗೆ ಮಾಡುವ ಅಪಮಾನ! ಹಿಂದೆ ಅಂಬೇಡ್ಕರ್, ಈಗ ಹೊಲೆಗೇರಿ! ಜನರ ಬುದ್ದಿವಂತಿಕೆ ಟೆಸ್ಟ್ ಮಾಡುವ ಮೊದಲು ಸಾರ್ವಜನಿಕವಾಗಿ ತಮ್ಮ ಬುದ್ದಿವಂತಿಕೆ ಪ್ರದರ್ಶಿಸಲಿ ಎಂಬುದು ಸಲಹೆ' ಎಂದು ದೇವರಾಜ್‌ ಎನ್ನುವವರು ಟೀಕೆ ಮಾಡಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಳ್ಳದೆ ರಾಜಕೀಯ ಮಣಿಪುರ ವಿಚಾರದಲ್ಲಿ ವಿಪಕ್ಷ ಪಲಾಯನವಾದ: ಮೋದಿ ಕಿಡಿ

ಹೊಲಗೇರಿ ಸೃಷ್ಟಿಸಿದವರು ಯಾರೋ ಹುಚ್ಚೇಂದ್ರ: 
ಪ್ರಜ್ವಲ್ ಶಶಿ ತಗಡೂರು ಎನ್ನುವವರು, ''ಊರು ಅಂದ ಮೇಲೆ ಹೊಲಗೇರಿ ಇರುತ್ತದಂತೆ'' ಈ ಹೊಲಗೇರಿ ಸೃಷ್ಠಿಸಿದವರು ಯಾರು ಹೇಳೋ ಹುಚ್ಚೇಂದ್ರ! ಈತನನ್ನು ಕೂಡಲೇ ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗಿ ಮನವಿ.... ಎಂದು ಕಮೆಂಟ್‌ ಮಾಡಿದ್ದಾರೆ. 

ವಿಡಿಯೋ ಡಿಲೀಟ್‌ ಮಾಡಿ ಕ್ಷಮೆಯಾಚಿಸಿದ ಉಪೇಂದ್ರ: 
ವಿವಾದಾತ್ಮಕ ಹೇಳಿಕೆ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಉಪೇಂದ್ರ, "ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ...🙏🙏" ಎಂದು ಬರೆದುಕೊಂಡಿದ್ದಾರೆ.