Asianet Suvarna News Asianet Suvarna News

ಜಾಹಿರಾತುಗಳಲ್ಲಿ ದಿಕ್ಕು ತಪ್ಪಿಸುವ ಸೆಲಬ್ರಿಟಿಗೆ ದಂಡ-ಜೈಲು!

ಜಾಹಿರಾತುಗಳಲ್ಲಿ ಮೋಸ ಮಾಡುವ ಸೆಲಬ್ರಿಟಿಗಳು, ಕಂಪನಿಗಳಿಗೆ ಕಾದಿದೆ ದಂಡ | ತಪ್ಪು ಗಮನಕ್ಕೆ ಬಂದರೆ ಜೈಲಿಗೂ ಹೋಗಬಹುದು | ಲೋಕಸಭೆಯಲ್ಲಿ ಗ್ರಾಹಕ ರಕ್ಷಣಾ ಮಸೂದೆ 2019 ಅಂಗೀಕಾರ 

consumer protection bill 2019 Hefty fines for celebrities who mislead on advertisement
Author
Bengaluru, First Published Aug 8, 2019, 3:43 PM IST
  • Facebook
  • Twitter
  • Whatsapp

ಜನರನ್ನು ಮರುಳು ಮಾಡಿ ದಾರಿ ತಪ್ಪಿಸುವುದಕ್ಕೆ ಕಡಿವಾಣ ಹಾಕಲು ರಾಜ್ಯಸಭೆಯಲ್ಲಿ ಗ್ರಾಹಕ ರಕ್ಷಣಾ ಮಸೂದೆ 2019 ನ್ನು ಲೋಕಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. 

ಪ್ರಗ್ನೆನ್ಸಿಯಲ್ಲಿ ಇವೆಲ್ಲಾ ಕಾಮನ್; ಟಾಪ್‌ಲೆಸ್ ಆಗಿ ನಿಂತ ಹೆಬ್ಬುಲಿ ನಟಿ!

ಸೆಲೆಬ್ರಿಟಿಗಳು, ಜಾಹಿರಾತು ಕಂಪನಿಗಳು ಇನ್ನು ಮುಂದೆ ಜನರನ್ನು ದಾರಿ ತಪ್ಪಿಸುವಂತಿಲ್ಲ. ದಾರಿ ತಪ್ಪಿದ್ದು ಗಮನಕ್ಕೆ ಬಂದರೆ ಈ ಮಸೂದೆ ಪ್ರಕಾರ ಅನುಮೋದಕರು ಹಾಗೂ ತಯಾರಿಕರಿಗೆ 5 ವರ್ಷ ಜೈಲು ಶಿಕ್ಷೆಯಾಗಬಹುದು. 10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ತಪ್ಪು ಪದೇ ಪದೇ ಪುನಾರಾವರ್ತಿಸಿದರೆ 50 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಹಾಗಾಗಿ ಜಾಹಿರಾತು ಕಂಪನಿಗಳು ಹಾಗೂ ಸೆಲಬ್ರಿಟಿಗಳು ಎಚ್ಚರ ವಹಿಸಬೇಕಾಗಿದೆ. 

ಟಿವಿ, ರೇಡಿಯೋ, ಮುದ್ರಣ, ಹೊರಗಿನ ಜಾಹಿರಾತು, ಈ -ಕಾಮರ್ಸ್, ಹೊರಗಿನ ಜಾಹಿರಾತು ಹೀಗೆ ಎಲ್ಲಿಯೂ ಕೂಡಾ ತಪ್ಪಿ ತಪ್ಪು ಜಾಹಿರಾತು ನೀಡಿ ಜನರನ್ನು ಮೋಸ ಮಾಡುವಂತಿಲ್ಲ.  

'ರಶ್ಮಿಕಾ'ನ ನೀವೇ ಇಟ್ಕೋಳಿ ' ಕಾಶ್ಮೀರ' ನಮ್ಗೆ ಕೊಡಿ!

ಸಿನಿಮಾ ಸೆಲಬ್ರಿಟಿಗಳು ಜಾಹಿರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಆದಾಯ ಜಾಹಿರಾತುಗಳಿಂದಲೇ ಹೆಚ್ಚು ಬರುತ್ತದೆ. ಇನ್ನು ಮುಂದೆ ಇವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

ನಾನಾ ತರದ ಜಾಹಿರಾತುಗಳು, ನಟ-ನಟಿಯರ ಥಳಕು ಬಳಕು ನೋಡಿ ಜನರು ಆ ಉತ್ಪನ್ನಗಳನ್ನು ತೆಗೆದುಕೊಂಡು ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಹಕರ ಹಕ್ಕನ್ನು ರಕ್ಷಿಸಲು, ಮೋಸ ಹೋಗುವುದನ್ನು ತಡೆಗಟ್ಟಲು ಈ ಮಸೂದೆಯನ್ನು ಜಾರಿಗೊಳಿಸಲಾಗಿದೆ. 

 

Follow Us:
Download App:
  • android
  • ios