ಭಾರೀ ನಿರೀಕ್ಷೆ ಮೂಡಿಸುವ ಮೂಲಕ ಸಿನಿ ಜರ್ನಿ ಶುರು ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ 'ಸಾನ್ವಿ' ಪಾತ್ರದ ಮೂಲಕ ಜನರ ಮನಸ್ಸಲ್ಲಿ ಉಳಿದರು. ಆ ನಂತರ ಗೋಲ್ಡನ್‌ ಹೀರೋ ಜೊತೆ ಅಭಿನಯಿಸಿದ 'ಚಮಕ್' ಚಿತ್ರ ಚಿತ್ರರಂಗದಲ್ಲಿ ದೊಡ್ಡ ಹೆಸರು ತಂದು ಕೊಡುವ ಭರವಸೆ ಮೂಡಿಸಿದರು. ಆದರೆ ಮಾಡಿಕೊಂಡ ಒಂದು ಎಡವಟ್ಟಿನಿಂದ ಚಿತ್ರರಂಗವನ್ನು, ಕನ್ನಡಿಗರನ್ನು ಎದುರು ಹಾಕಿಕೊಂಡರು.

ಖುಷ್ಬು ಆಯ್ತು, ಈಗ ರಶ್ಮಿಕಾ ಮಂದಣ್ಣಗೂ ಬೇಕಂತೆ ಅಭಿಮಾನಿಗಳಿಂದ ದೇವಸ್ಥಾನ!

‘ಕಿರಿಕ್ ಪಾರ್ಟಿ’ ನಂತರ ಟಾಲಿವುಡ್ ಗೆ ಹಾರಿದರು. 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೆಡ್' ಸಿನಿಮಾ ರಶ್ಮಿಕಾ ಪರಭಾಷೆಯಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡಿತು. ಡಿಯರ್ ಕಾಮ್ರೆಡ್ ಪ್ರಮೋಶನ್ ವೇಳೆ ಕನ್ನಡ ನನಗೆ ಕಷ್ಟ ಎಂದಿದ್ದೇ ತಡ ಕನ್ನಡಿಗರು ರೊಚ್ಚಿಗೆದ್ದರು. ಇರುವ ಇಮೇಜನ್ನು ಡ್ಯಾಮೆಜ್ ಮಾಡಿಕೊಂಡರು. ಸಾಮಾಜಿಕ ಜಾಲತಾಣದ ತುಂಬಾ ರಶ್ಮಿಕಾಳ ಟ್ರೋಲ್ ಗಳು ಶುರುವಾಗಿದೆ. ಇತ್ತೀಚಿಗೆ ಮೋದಿ ಸರ್ಕಾರ ಕಾಶ್ಮೀರದಲ್ಲಿ Article 370 ರದ್ದುಗೊಳಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತು. ಟ್ರೋಲ್ ಹೈಕ್ಳ ಕ್ರಿಯೇಟಿವಿಟಿ ನೋಡಿ. ರಶ್ಮಿಕಾಳಿಗೂ ಆರ್ಟಿಕಲ್ 370 ಗೂ ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದಾರೆ.

’ಡಿಯರ್ ಕಾಮ್ರೆಡ್’ ನೋಡಿ ಮಗಳಿಗೆ ಭೇಷ್ ಎಂದ ರಶ್ಮಿಕಾ ತಾಯಿ

ಹೌದು ' ರಶ್ಮಿಕಾ' ಹೆಸರನ್ನು ಉಳ್ಟಾ ಮಾಡಿದ್ರೆ ' ಕಾಶ್ಮೀರ' ಆಗುತ್ತದೆ. ಈ ಕಾರಣದಿಂದ ಟ್ರೋಲಿಗರು ರಶ್ಮಿಕಾಳನ್ನು ನೀವೇ ಇಟ್ಟುಕೊಳ್ಳಿ. ಕಾಶ್ಮೀರ ನಮಗೆ ಕೊಡಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕ್ರಿಯೆಟಿವಿಟಿ ಅಂದ್ರೆ ಇದಪ್ಪಾ!