ವಿಲನ್ ನಟಿ ಆ್ಯಮಿ ಜಾಕ್ಸನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಿ ಜಾಕ್ಸನ್‌ ಕೆಲವು ದಿನಗಳ ಹಿಂದಷ್ಟೇ ತನ್ನ ಪತಿ ಜಾಜ್‌ರ್‍ ಪನಯೋಟು ಜೊತೆಗಿನ ಚೆಂದದೊಂದು ಫೋಟೋವನ್ನು ಸೋಷಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. 

ರೆಡ್‌ ಕಾರ್ಪೆಟ್‌ ಮೇಲೆ ಗರ್ಭಿಣಿ ಆ್ಯಮಿ ಜಾಕ್ಸನ್‌!

ಸ್ಪೇನ್‌ನಲ್ಲಿ ನಡೆದ ಪ್ರೊನೋವೈಸ್‌ ಫ್ಯಾಷನ್‌ ಶೋನಲ್ಲಿ ಭಾಗವಹಿಸಿ ಗರ್ಭಿಣಿಯಾಗಿದ್ದರೂ ಫ್ಯಾಷನ್‌ ಶೋನಲ್ಲಿ ಭಾಗಿಯಾಗಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಇದೀಗ ಟಾಪ್ ಲೆಸ್ ಫೋಟೋಶೂಟ್ ಮಾಡಿಸಿಕೊಂಡು ಹೊಟ್ಟೆಯನ್ನು ತೋರಿಸುತ್ತಾ ಸ್ಟ್ರೆಚ್ ಮಾರ್ಕ್, ದಪ್ಪಗಾಗೋದೆಲ್ಲಾ ಸಹಜ ಎಂಬಂತೆ ಪೋಸ್ ಕೊಟ್ಟಿದ್ದಾರೆ.