ಕೇಸ್ ಸ್ಕ್ವಾಷ್ ಆಗುತ್ತೆ ಎಂದು ಅವರೇ ನನಗೆ ಹೇಳ್ತಾರೆ. ಪೊಲೀಸರು ಕಂಪ್ಲೇಂಟ್ ಕಾಫಿ ವೀಕ್ ಮಾಡಿದ್ಕೆ ನನಗೆ ಅನ್ಯಾಯವಾಗಿದೆ. ಏನ್ ಮಾಡಬೇಕು ಎನ್ನೊದು ಗೊತ್ತಾಗ್ತಿಲ್ಲ. ಶಿಕ್ಷೆ ಆಗಲೇ ಬೇಕು ಎನ್ನೊದು ನನ್ನ ಉದ್ದೇಶ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಮೇಲೆ ನಂಬಿಕೆ ಇಲ್ಲ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನು ಮಡೆನೂರ್ (Madenur Manu) ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದು, ಅವರು ಪೊಲೀಸ್ ಕಸ್ಟಡಿಯಲ್ಲಿದ್ದು ಬಳಿಕ ಬೇಲ್ ಮೇಲೆ ಹೊರಗೆ ಬಂದಿದ್ದು ಬಹುತೇಕ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಇದೀಗ, ಸಂತ್ರಸ್ಥೆ ಎನ್ನಲಾಗಿರುವ ಮಿಂಚು 'ಪೊಲೀಸರು ಕೇಸ್ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ' ಎನ್ನುವ ಕುರಿತಾಗಿ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಮಡೆನೂರ್ ಮನು ಜಾಮೀನು ಪಡೆದು ಜೈಲಿಂದ ರಿಲೀಸ್ ಆಗಿದ್ದಾರೆ. ಕೇಸ್ ಡೀಟೇಲ್ಸ್ ಕುರಿತು ಸಂತ್ರಸ್ಥೆ ಮಾತನಾಡುವ ಸಾಧ್ಯತೆ
ಪ್ರೆಸ್ ಕ್ಲಬ್ ನಲಿ ಸುದ್ದಿ ಘೋಷ್ಠಿ ಕರೆದ ಸಂತ್ರಸ್ಥೆ. 'ನನಗೆ ನ್ಯಾಯ ಸಿಗುತಿಲ್ಲ, ಮನು ದೌರ್ಜನ್ಯ ಮಾಡಿರೋ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟೆ. ಅವರು ನಾಳೆ ಬನ್ನಿ ಅಂತ ವಾಪಾಸ್ ಕಳಿಸ್ತಾರೆ. ಮಹದೇವ್ ಅನ್ನೋರಿಗೆ ದೂರು ಕೊಟ್ಟೆ. ಆದರೆ ಅವ್ರಿಗೆ ಹೇಗೆ ಬೇಕೋ ಹಾಗೆ ದೂರು ಬರೆದುಕೊಂಡಿದಾರೆ.
ನಾನು ಪೊಲೀಸ್ ಅವರನ್ನ ನಂಬಿ ಹೋದೆ. ಆದರೆ ನನಗೆ FIRf ಸಿಗಲಿಲ್ಲ. ನಾನು ಪೊಲೀಸ್ ನವರು ಹೇಳಿದ ಹಾಗೆ ಕೇಳಿದ್ದೇನೆ. ನನ್ನ ಕಡೆಯ ಸಾಕ್ಷಿಗಳನ್ನ ಹೆದರಿಸುತಿದ್ದಾರೆ. ಪೊಲೀಸ್ ಅದ ಮಹಾದೇವ ಅವರಿಂದ ನನಗೆ ಮೋಸ ಆಗಿದೆ. ನಾನು ಕೊಟ್ಟ ದೂರನ್ನ ತುಂಬಾ ವೀಕ್ ಮಾಡಿದಾರೆ. ಹಾಗಾಗಿ ಮನುಗೆ ಬೀಲ್ ಸಿಕ್ಕಿದೆ. ಮನು ದೌರ್ಜನ್ಯದ ವಿರುದ್ದ 20 ನೇ ತಾರೀಖು ದೂರು ಕೊಡಲು ಹೋಗಿದ್ದೆ.
ನಾಳೆ ಬನ್ನಿ ಎಂದು ಪೊಲೀಸರು ಹೇಳಿದ್ರು. ಸಬ್ ಇನ್ಸ್ಪೆಕ್ಟರ್ ಗೆ ಕಂಪ್ಲೇಂಟ್ ಕೊಟ್ಟಿದ್ದೆ. ಆದರೆ ಅವರು ನಾಳೆ ಬನ್ನಿ ಎನ್ನುತ್ತಾರೆ. ಮಹಾದೇವ್ ಎನ್ನುವವರು ಕಂಪ್ಲೇಂಟ್ ಕಾಫಿ ಟೈಪ್ ಮಾಡ್ತಾರೆ. ಅವರಿಗೆ ಬೇಕಾದಹಾಗೆ ಟೈಪ್ ಮಾಡ್ತಾರೆ. 2022ರಲ್ಲಿ ನಡೆದ ಘಟನೆ ಬಗ್ಗೆ ಮಾತ್ರ ಉಲ್ಲೇಖ ಮಾಡ್ತಾರೆ. ಖಾಲಿ ಪೇಪರ್‌ನಲ್ಲಿ ಸಹಿ ಮಾಡಿಸ್ಕೊತ್ತಾರೆ. ಕರೆಂಟ್ ಇಲ್ಲ ಆಮೇಲ್ ಟೈಪ್ ಮಾಡ್ತೇವೆ ಎನ್ನುತ್ತಾರೆ.
ಮಾರನೆ ದಿನ ನನಗೆ FIR ಕಾಪಿ ಕೊಡ್ತಾರೆ. ನನಗೆ ಕಾನೂನಿನ ಬಗ್ಗೆ ಜ್ಞಾನ ಇಲ್ಲ. ಕಂಪ್ಲೇಂಟ್ ಕಾಪಿಯನ್ನು ವೀಕ್ ಮಾಡಿದ್ದಾರೆ. ಅದರಿಂದಲೇ ಅವನಿಗೆ ಬೇಲ್ ಸಿಕ್ಕಿದೆ. ಅದರಿಂದಲೇ ಅವನು ಸ್ಕ್ವಾಷ್ ಗೆ ಹಾಕೊಂಡಿದ್ದಾನೆ. ಪ್ರಕರಣ ಸಂಬಂಧ ಎರಡು ಬಾರಿ FIR ಹಾಕಿದ್ದಾರೆ. ಸ್ಪರ್ಮ ಇರೋ ಟವಲ್ ಇದೆ ಎಂದೆ. ಅದನ್ನ ತಂದು ಕೊಟ್ಟೆ ಆದರೆ ಅದು ನನ್ನದೆಂದು ಬರೆದಿದ್ದಾರೆ. ಪೊಲೀಸರು ದಾರಿ ತಪ್ಪಿಸಿದ್ರು. ಸಾಕ್ಷಿದಾರರಿಗೂ ಪೊಲೀಸರು ಹೆದರಿಸಿದ್ದಾರೆ. ಹೀಗಾಗಿ ಯಾರೂ ಸಾಕ್ಷಿ ಹೇಳೋಕೆ ಬರೋದಿಲ್ಲ. 164ಹೇಳಿಕೆ ಮೇಲೆ ಪ್ರಕರಣ ನಿಲ್ಲುತ್ತೆ ಎಂದು ಮಿಸ್ ಲೀಡ್ ಮಾಡ್ತಾರೆ. ಮಹಾದೇವ್ ಅವರು ಮಿಸ್ ಲೀಡ್ ಮಾಡಿದ್ದಾರೆ. ಮಹಜರು ಮಾಡಿದ್ದಾಗ ಮಾತ್ರ ಇನ್ಸ್ಪೆಕ್ಟರ್‌ನ ಭೇಟಿ ಮಾಡಿದ್ದು.
ಕೇಸ್ 100ಸ್ಕ್ವಾಷ್ ಆಗುತ್ತೆ ಎಂದು ಅವರೇ ನನಗೆ ಹೇಳ್ತಾರೆ. ಪೊಲೀಸರು ಕಂಪ್ಲೇಂಟ್ ಕಾಫಿ ವೀಕ್ ಮಾಡಿದ್ಕೆ ನನಗೆ ಅನ್ಯಾಯವಾಗಿದೆ. ಏನ್ ಮಾಡಬೇಕು ಎನ್ನೊದು ಗೊತ್ತಾಗ್ತಿಲ್ಲ. ಶಿಕ್ಷೆ ಆಗಲೇ ಬೇಕು ಎನ್ನೊದು ನನ್ನ ಉದ್ದೇಶ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಮೇಲೆ ನಂಬಿಕೆ ಇಲ್ಲ. ನನ್ನ ಪ್ರಕರಣ ತನಿಖೆಗೆ ಠಾಣೆ ಬದಲಾಯಿಸಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ನನಗೆ ನ್ಯಾಯ ಸಿಗಬೇಕು' ಎಂದು ಸಂತ್ರಸ್ಥೆ ಎನ್ನಲಾದ ಮಿಂಚು ಹೇಳಿಕೆ ನೀಡಿದ್ದಾರೆ.
