'ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್ ಗು ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದ್ರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದ್ರು. ಅದಕ್ಕು ಮೊದಲು ರೇಪ್ ಕೇಸ್ ನಲ್ಲಿ..

ಮಡೆನೂರು ಮನು ಜೈಲಿನಿಂದ ರಿಲೀಸ್ ಆಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಮನು ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ. ಆ ಬಳಿಕ ಮಡೆನೂರ್ ಮನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಡೆನೂರ್ ಮನು ಹೇಳಿರೋದು ಏನು? ಇಲ್ಲಿದೆ ಮಾಹಿತಿ ನೋಡಿ..

'ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಆಡಿಯೋ ನನ್ನದಲ್ಲ, ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ, ನಾನು ಮೊದಲು ದೊಡ್ಡವರು (ಶಿವಣ್ಣ) ಭೇಟಿ ಮಾಡಿ ಸತ್ಯವನ್ನು ಅವರಿಗೆ ವಿವರಿಸಿ ಕ್ಷಮೆ ಕೇಳುತ್ತೇನೆ. ನನ್ನ ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದ್ರು. ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನ ಮುಗಿಸಿದ್ರು. ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಯ್ತು.' ಎಂದಿದ್ದಾರೆ.

'ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್ ಗು ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದ್ರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದ್ರು. ಅದಕ್ಕು ಮೊದಲು ರೇಪ್ ಕೇಸ್ ನಲ್ಲಿ ತಪ್ಪಿಸಿಕೊಂಡ್ರು. 50 ಸಾವಿರ ಖರ್ವು ಮಾಡಿ ಆಡಿಯೋ ರೆಡಿ ಮಾಡಿದ್ದು. ನಿನ್ನ ಕಥೆ ಮುಗಿಸುವುದಾಗಿ ಧಮ್ಕಿ ಹಾಕಿದ್ರು..' ಎಂದರು.

ಜೊತೆಗೆ, ಸಾಮಾನ್ಯ ಹಳ್ಳಿಹೈದ ಮೂರು ವರ್ಷ ಹಗಲಿರುಳು ಕಷ್ಟಪಟ್ಟಿದ್ದೆ. ಆದ್ರೆ ಎಲ್ಲವನ್ನೂ ಮುಗಿಸಿದ್ರು. ಆದ್ರೆ ಕಲೆ ತಾಯಿ ಶಾರದೆ ಕೈ ಬಿಡುವುದಿಲ್ಲ. ಆದ್ರೆ ನಾನು ಬಡವ ಆಡಿಯೋ ನನ್ನದಲ್ಲ ಎಂದು ಚಾಲೆಂಜ್‌ ಮಾಡಲು ಆಗಲ್ಲ. ಉಳಿದಂತೆ ಅತ್ಯಾಚಾರ ಕೇಸ್ ಕಾನೂನು ಹೋರಾಟ ಮಾಡುತ್ತೆನೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.. 'ಎಂದಿದ್ದಾರೆ. ಸದ್ಯ ಇವಿಷ್ಟು ಮಾಹಿತಿ ಲಭ್ಯವಾಗಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.

ಇಷ್ಟೇ ಅಲ್ಲ, ಮನು ಮಡೆನೂರ್ ಅವರು ‘ ನಾನು ಶಿವಣ್ಣ ಹಾಗೂ ದರ್ಶನ್ ಬಗ್ಗೆ ಏನೂ ಮಾತಾಡಿಲ್ಲ. ಆ ಆಡಿಯೋ ಕೇಳಿದ್ರೆ ಅದ್ರಲ್ಲೇ ಗೊತ್ತಾಗುತ್ತೆ, ಮಧ್ಯೆ ಮಧ್ಯೆ ಕಟ್ ಮಾಡಿ ಜೋಡಿಸಿ ಏನೇನೋ ಮಾಡಿದಾರೆ. ಟೈಂ ಬಂದಾಗ ಎಲ್ಲಾ ನಿಜನೂ ಹೊರಗೆ ತರ್ತೀನಿ. ಈಗ ಸದ್ಯ ನನಗೆ ಊರಿಗೆ ಹೋಗಿ ನನ್ನ ಅಮ್ಮ ಹಾಗೂ ಅಜ್ಜಿನ ನೋಡ್ಬೇಕು. ಯಾಕಂದ್ರೆ, ಅವ್ರಿಗೆ ಅದೇನೋ ಗದ್ದ ಊದಿಕೊಂಡಿದೆಯಂತೆ, ಹುಶಾರು ಇಲ್ವಂತೆ. ಈ ವಿಷ್ಯದ ಬಗ್ಗೆ ಆಮೇಲೆ ನೋಡ್ಕೋತೀನಿ’ ಎಂದಿದ್ದಾರೆ ಮಡೆನೂರ್ ಮನು.