Youtube LIVE : ಜೀವರಕ್ಷಕರ ಹೃದಯಕ್ಕೆ ಎದೆತುಂಬಿದ ಹಾಡು
* ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಸ್ವರ - ನಮನ
* 'ಭರವಸೆಯ ಒಂದು ಬೆಳಕು' ಹಾಡಿನ ಮೂಲಕ ಧನ್ಯವಾದ
* ಮೇ 29 ರಂದು ಸಂಜೆ 6ಕ್ಕೆ ಹಾಡು ಯುಟ್ಯೂಬಿನಲ್ಲಿ ಲೋಕಾರ್ಪಣೆ
* ಇದು ಮಿಡಿಯುವ ಮನಗಳ ಕನ್ನಡ ಗೀತಮಾಲಾ
ಬೆಂಗಳೂರು(ಮೇ 28) : ತಮ್ಮ ಎಲ್ಲ ಕಷ್ಟ-ನಷ್ಟಗಳನ್ನು ಬದಿಗಿಟ್ಟು, ಉಸಿರು ಬಿಗಿ ಹಿಡಿದು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಗೆ ಪ್ರತಿ ಕ್ಷಣ ನಾವೆಲ್ಲರೂ ಧನ್ಯವಾದ ಹೇಳಲೇಬೇಕು. ಈ ಉದ್ದೇಶದಿಂದ ಕೊರೋನಾ ವಾರಿಯರ್ಸ್ ಗೆ ಗೌರವ ಸೂಚಿಸಲು ಹಾಡೊಂದನ್ನು ಅರ್ಪಿಸಲಾಗುತ್ತಿದೆ.
ಸುಶೀಲ್ ಸಾಗರ್ ಕನ್ನಡ ಟಿವಿ ಮಾಧ್ಯಮದಲ್ಲಿ ಬಹಳ ಕೇಳಿ ಬರುತ್ತಿರುವ ಈವೆಂಟ್ ಮ್ಯಾನೇಜರ್ ಹಾಗೂ ಚಲನಚಿತ್ರ ನಿರ್ಮಾಣ ವ್ಯವಸ್ಥಾಪಕರ ಹೆಸರು. ಅವರು ಸ್ವತಂತ್ರವಾಗಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬಂದಿದ್ದು ಈಗ ವಾರಿಯರ್ಸ್‌ಗಾಗಿ ಹಾಡೊಂದನ್ನು ಅರ್ಪಿಸಲಿದ್ದಾರೆ.
ಕೊರೋನಾ ವಾರಿಯರ್ಸ್ ಗೆ ನಟ ಚರಣ್ ರಾಜ್ ನೆರವು
ಕೊರೋನಾ ಹೋರಾಟದಲ್ಲಿ ವೈದ್ಯರು, ಬಿಬಿಎಂಪಿ ನೌಕರರು, ಪೊಲೀಸರು, ಮಾಧ್ಯಮದವರು, ಪೌರ ಕಾರ್ಮಿಕರು, ದಾದಿಯರು ಸೇರಿದಂತೆ ಅನೇಕ ವರ್ಗದವರು ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರೇ ಮತ್ತು ಕಾಣದ ಆ ಕೈಗಳಿಗೆ ಸಂಗೀತ ಅಭಿನಂದನೆ. ಕೊರೋನಾ ವಾರಿಯರ್ಸ್ ಸೇವೆಗೆ ಗೌರವ ಸೂಚಿಸಲು ಹಾಡೊಂದನ್ನು ಅರ್ಪಿಸಲು ಮುಂದಾಗಿದ್ದು ತಮ್ಮ ಬಳಗದೊಂದಿಗೆ ಸೋಶಿಯಲ್ ಮೀಡಿಯಾ ಮೂಲಕ ಮುಂದೆ ಬರಲಿದೆ ಸುಶೀಲ್ ಸಾಗರ್ ಮತ್ತು ಅವರ ತಂಡ.
ಈ ಹಾಡಿಗೆ ಸಾಹಿತ್ಯವನ್ನು ಎಸ್. ರಂಜನಿ ನೀಡಿದ್ದಾರೆ. ಸಂಗೀತ ಆಕಾಶ್ ಪರ್ವ ಅವರದ್ದು. ಹಿನ್ನಲೆ ಗಾಯನದಲ್ಲಿ ಅಶ್ವಿನ್ ಶರ್ಮ, ಐಶ್ವರ್ಯ ರಂಗರಾಜನ್ ಹಾಗೂ ಆಶಾ ಭಟ್ ಇದ್ದಾರೆ. ಸ್ಕ್ರಿಪ್ಟ್ ಜವಾಬ್ದಾರಿಯನ್ನು ರಕ್ಷಿತ್ ವಹಿಸಿಕೊಂಡಿದ್ದರೆ ಡಿ.ಒ.ಪಿ. ಪುನೀತ್ ಅವರದ್ದು.
ವಿಡಿಯೋ ಅಲ್ಬಂ ನಲ್ಲಿ ನಟ ವಸಿಷ್ಟ ಸಿಂಹ, ನಿರೂಪಕಿ ಅನುಪಮ ಗೌಡ, ನಟ-ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ಕಲಾವಿದ ರಘು ಗೌಡ, ನಟಿ ಹಿತಾ ಚಂದ್ರಶೇಖರ್, ನಟ ಕಿರಣ್ ಶ್ರೀನಿವಾಸ್ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ ನಟಿಸಿದ್ದಾರೆ. ಭರವಸೆಯ ಒಂದು ಬೆಳಕು ಈ ಹಾಡು ದಿನಾಂಕ 29 ಮೇ 2021 ರಂದು ಸುಶೀಲ್ ಸಾಗರ್ ಅವರ ಕಲ್ಪನೆ ಹಾಗೂ ನಿರ್ದೇಶನದಲ್ಲಿ ಮೂಡಿಬರಲಿದೆ. 'ಸಿಟಿ ಸವಾರಿ' ಯೂಟ್ಯೂಬ್ ವಾಹಿನಿಯಲ್ಲಿ ಸಂಜೆ 6ಕ್ಕೆ ಬಿಡುಗಡೆಯಾಗುತ್ತಿದೆ. . ಸಿಟಿ ಸವಾರಿ ಹಾಗೂ ಕ್ರೀಯೇಟಿವ್ ಐ ಕ್ರಿಯೇಷನ್ಸ್ ಸಹಯೋಗ ಇದೆ.
ನೀವೂ ಇರಿ, ನಾವೂ ಇರುತ್ತೇವೆ - ನಮಸ್ಕಾರ
ಹಾಡು : ಭರವಸೆಯ ಒಂದು ಬೆಳಕು
ಎಲ್ಲಿ: "ಸಿಟಿ ಸವಾರಿ" ಯೂಟ್ಯೂಬ್ ವಾಹಿನಿಯಲ್ಲಿ
ಯಾವಾಗ : 29 ಮೇ 2021 ಸಂಜೆ 6ಕ್ಕೆ
"