ಬೆಂಗಳೂರು (ಜ. 23):  ಕಿಚ್ಚ ಸುದೀಪ್ ಅಭಿನಯದ ’ಪೈಲ್ವಾನ್’ ಟೀಸರ್ ಸಿಕ್ಕಾಪಟ್ಟೆ ಹಿಟ್ ಆಗಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. 

ಕಿಚ್ಚ ಸುದೀಪ್ ಗೆ ಬೇಷ್ ಎಂದ ಬಾಲಿವುಡ್ ನಟ!

ಸ್ಟಾರ್ ನಟ, ನಟಿಯರು ಎಂದರೆ ಸಾಕು ಅವರನ್ನು ಫಾಲೋ ಮಾಡುವ ಅಭಿಮಾನಿಗಳ ವರ್ಗವೇ ಇರುತ್ತದೆ. ನಟರು ಏನಾದರೂ ಹೊಸ ಸಾಹಸ ಮಾಡಿದರೆ ಅಭಿಮಾನಿಗಳು ಅದನ್ನೇ ಫಾಲೋ ಮಾಡ್ತಾರೆ. ಇಲ್ಲೊಬ್ಬ ಪುಟ್ಟ ಹುಡುಗ ಪೈಲ್ವಾನ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾನೆ. ಸುದೀಪ್ ಸ್ಟೈಲಲ್ಲೇ ಕುಸ್ತಿ ಅಖಾಡಕ್ಕಿಳಿದು ಕಿಚ್ಚನಿಗೆ ಚಾಲೆಂಜ್ ಮಾಡಿದಂಗಿದೆ. ಈ ಫೋಟೋವನ್ನು ಸುದೀಪ್ ಶೇರ್ ಮಾಡಿಕೊಂಡಿದ್ದಾರೆ. 

 

ಈ ಬಾಲಕನ ಹೆಸರು, ಊರು ಯಾವುದೂ ತಿಳಿದು ಬಂದಿಲ್ಲ. 

ಕಿಚ್ಚ ಸುದೀಪ್ ಪೈಲ್ವಾನ್ ಆದ ಕತೆ! ಬಾಡಿ ಬಿಲ್ಡ್ ಮಾಡಿದ್ದು ಹೇಗೆ?

ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಪೈಲ್ವಾನ್ ವರ್ಕೌಟ್ ನೋಡಿ ಅಭಿಮಾನಿಯೊಬ್ಬ ಸ್ಫೂರ್ತಿಗೊಂಡು ಅವರೂ ಕೂಡಾ ದೇಹ ದಂಡಿಸಿ ತೂಕ ಇಳಿಸಿಕೊಂಡಿದ್ದನ್ನು ಇಲ್ಲಿ ನೆನೆಸಿಕೊಳ್ಳಬಹುದು.