ಅದರಲ್ಲೂ ಸಲ್ಮಾನ್‌ ಖಾನ್‌ ‘ನಾವು ಆರಂಭಿಸಿದ್ದನ್ನು ನೀವು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಪೈಲ್ವಾನ್‌ಗೆ ಅಭಿನಂದನೆ’ ಎಂದು ಬರೆದು ಟ್ವೀಟ್‌ ಮಾಡಿದ್ದಾರೆ. ಅದನ್ನು ರೀಟ್ವೀಟ್‌ ಮಾಡಿರುವ ಕಿಚ್ಚ, ‘ಈ ಟ್ವೀಟ್‌ ಕನಸಿನಂತೆ ಭಾಸವಾಗುತ್ತಿದೆ. ನೀವು ನನ್ನ ದಿನವನ್ನು ಸಂಪನ್ನಗೊಳಿಸಿದ್ದೀರಿ. ನಿಮಗೆ ಪ್ರೀತಿಯ ಅಪ್ಪುಗೆ’ ಎಂದಿದ್ದಾರೆ. ಸಲ್ಮಾನ್‌ ಖಾನ್‌ ಕುಸ್ತಿ ಕತೆಯುಳ್ಳ ‘ಸುಲ್ತಾನ್‌’ ಚಿತ್ರದಲ್ಲಿ ಅಭಿನಯಿಸಿದ್ದರು.

ಸಲ್ಮಾನ್‌ ಖಾನ್‌ ಸೇರಿದಂತೆ ಇಡೀ ದೇಶದ ಚಿತ್ರರಂಗದ ಮಂದಿ ಟೀಸರ್‌ ಮೆಚ್ಚಿ ಟ್ವೀಟ್‌ ಮಾಡಿದ್ದಾರೆ. ಪ್ರಭುದೇವ, ರಾಮ್‌ಗೋಪಾಲ್‌ ವರ್ಮಾ, ಟಾಲಿವುಡ್‌ ನಿರ್ದೇಶಕ ಪುರಿ ಜಗನ್ನಾಥ್‌, ಬಾಲಿವುಡ್‌ ಲೆಕ್ಕಾಚಾರ ಪಂಡಿತ ತರಣ್‌ ಆದಶ್‌ರ್‍ ಟೀಸರ್‌ ಮೆಚ್ಚಿಕೊಂಡಿದ್ದಾರೆ. ರಾಮ್‌ಗೋಪಾಲ್‌ ವರ್ಮಾರಿಗೆ ಪ್ರತಿಕ್ರಿಯಿಸಿದ ಸುದೀಪ್‌, ನೀವು ನನ್ನನ್ನು ಇಡೀ ದೇಶಕ್ಕೆ ಪರಿಚಯಿಸಿದವರು. ನಿಮ್ಮನ್ನು ಯಾವತ್ತೂ ಮರೆಯಲಾರೆ ಎಂದರು. ಆದರೆ ಆರ್‌ಜಿವಿ, ನಿಮ್ಮಂತಹ ಅದ್ಭುತ ಪ್ರತಿಭಾವಂತರನ್ನು ಹುಡುಕಿದ್ದೇ ನನ್ನ ಅದೃಷ್ಟಎಂದಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕರು ಟೀಸರ್‌ ಮೆಚ್ಚಿ ಟ್ವೀಟ್‌ ಮಾಡಿದ್ದಾರೆ.