Asianet Suvarna News Asianet Suvarna News

ಮಕ್ಕಳ ವಿಷಯಕ್ಕೆ ಡಿವೋರ್ಸ್ ಆಯ್ತಾ? ಚಂದನ್ ಕೊಟ್ಟ ಸ್ಪಷ್ಟನೆ ಹೀಗಿತ್ತು

ಕೆಲವರು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕುರಿತ ಕೆಲವು ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನೆಲೆ ಇಂದು ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಲವು ವಿಷಯಗಳನ್ನು ಹಂಚಿಕೊಂಡರು. 

Chandan Shetty and niveditha gowda given clarification about rumors mrq
Author
First Published Jun 10, 2024, 4:19 PM IST

ಬೆಂಗಳೂರು: ಸ್ಯಾಂಡಲ್‌ವುಡ್ ಕ್ಯೂಟಿ ಜೋಡಿ ಎಂದೇ ಫೇಮಸ್ ಆಗಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಡಿವೋರ್ಸ್ ಪಡೆದುಕೊಂಡಿದ್ದಾರೆ. ಡಿವೋರ್ಸ್ (Divorce) ಬಳಿಕ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬೇರೆ ಆಗುತ್ತಿರುವ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದರು. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹಲವು ವದಂತಿಗಳು ಹರಿದಾಡಿದ್ದವು. ಇನ್ನು ಕೆಲವರು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕುರಿತ ಕೆಲವು ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನೆಲೆ ಇಂದು ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಲವು ವಿಷಯಗಳನ್ನು ಹಂಚಿಕೊಂಡರು. 

ಚಂದನ್ ಶೆಟ್ಟಿ ಮಗು ಮಾಡಿಕೊಳ್ಳಲು ಬಯಸುತ್ತಾರೆ. ಆದ್ರೆ ನಿವೇದಿತಾ ಗೌಡ ಮಕ್ಕಳು ಮಾಡಿಕೊಳ್ಳಲಯ ಒಪ್ಪಿಕೊಳ್ಳುತ್ತಿಲ್ಲ ಎಂಬ ಸುದ್ದಿಗೆ ಪ್ರತಿಕ್ರಿಯ ನೀಡಲಾಯ್ತು. ಮಕ್ಕಳ ವಿಚಾರಕ್ಕೆ ನಾವು ಬೇರೆಯಾಗುತ್ತಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟಪಡಿಸಿದರು. ನಾನು ಬೆಳೆದು ಬಂದ ರೀತಿಯೇ ಬೇರೆ. ಅದೇ ರೀತಿ ನಿವೇದಿತಾ ಬೆಳೆದ ಪರಿಸರ ಬೇರೆಯಾಗಿದೆ. ಹಾಗಾಗಿ ಇಬ್ಬರ ಮಧ್ಯೆ ಅಷ್ಟು ಹೊಂದಾಣಿಕೆ ಆಗಲಿಲ್ಲ. ಇಷ್ಟು ವರ್ಷ ನಾವು ಜೊತೆಯಾಗಿ ಹೋಗಬೇಕು ಎಂದು ಇಷ್ಟು ವರ್ಷ ಪ್ರಯತ್ನಿಸಿದೇವು. ಆದರೆ ಅದು ಸಾಧ್ಯ ಆಗಲಿಲ್ಲ ಎಂದು ಚಂದನ್ ಶೆಟ್ಟಿ ಹೇಳಿದರು.

ನಾವಿಬ್ಬರು ಮದುವೆ ಆದಾಗ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವಾದ ಮಾಡಿದ್ದರು. ಆದರೆ ನಮ್ಮಿಬ್ಬರ ಜೀವನಶೈಲಿ ತುಂಬಾ ಡಿಫರೆಂಟ್. ಹಾಗಾಗಿ ಸಹಮತದಿಂದ ಕುಟುಂಬಸ್ಥರಿಗೆ ತಿಳಿಸಿ ಡಿವೋರ್ಸ್ ಪಡೆದುಕೊಂಡಿದ್ದೇವೆ. ಕಾನೂನಿನ ಪ್ರಕಾರವಾಗಿ ನಾವು ವಿಚ್ಛೇದನ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಹೇಗೆ ಇಬ್ಬರ ನಡುವೆ ಹೊಂದಾಣಿಕೆ ಆಗಲಿಲ್ಲ ಅನ್ನೋದನ್ನು ಉದಾಹರಣೆ ಸಹಿತವಾಗಿ ನಿವೇದಿತಾ ಗೌಡ ವಿವರಣೆ ನೀಡಿದರು. 

ನಿವೇದಿತಾ ನನ್ನಿಂದ ಕೋಟಿ ಕೋಟಿ ಜೀವನಾಂಶ ಕೇಳಿದ್ದಾರೆ ಅನ್ನೋದೆಲ್ಲಾ ಸುಳ್ಳು

ಇದೇ ತಿಂಗಳು 6ರಂದು ಶಾಂತಿ ನಗರದ ಫ್ಯಾಮಿಲಿ ಕೋರ್ಟ್ನಲ್ಲಿ 13ಬಿ ಸೆಕ್ಷನ್‌ ಅಡಿಯಲ್ಲಿ ವಿಚ್ಛೇದನಕ್ಕೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಬ್ಬರೂ ಅರ್ಜಿ ಸಲ್ಲಿಸಿದ್ದರು. ಮರುದಿನ ಹಿಯರಿಂಗ್‌ ಆಗಿ ಡಿವೋರ್ಸ್‌ ಕೂಡ ಪಡೆದಿದ್ದಾರೆ. ಆದರೆ, ಅವರಿಬ್ಬರೂ ಡಿವೋರ್ಸ್ ಪಡೆದ ಬಳಿಕ, ಸೋಷಿಯಲ್ ಮೀಡಿಯಾಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕೆಟ್ಟ ಕೆಟ್ಟ ಕಾಮೆಂಟ್‌ಗಳು, ಊಹಾಪೋಹಗಳು ಹರಿದಾಡಿವೆ. ಅವರಿಬ್ಬರ ಡಿವೋರ್ಸ್‌ ಬಗ್ಗೆ ಇಲ್ಲಸಲ್ಲದ ಕಾಮೆಂಟ್‌ಗಳು ಬಂದಿದ್ದವು.

Latest Videos
Follow Us:
Download App:
  • android
  • ios