Chandan shetty Alimony rumors ವಿಚ್ಛೇದನ ಪಡೆದುಕೊಂಡ ಬಳಿಕ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಲವಾರು ವಿಚಾರಗಳ ಸ್ಪಷ್ಟನೆ ನೀಡಿದರು. ಇದೇ ವೇಳೆ ಕೆಲವು ವದಂತಿಗಳ ಬಗ್ಗೆ ಉತ್ತರ ನೀಡುವ ಪ್ರಯತ್ನ ಮಾಡಿದರು.

ಬೆಂಗಳೂರು (ಜೂ.10): ಮಾನಸಿಕವಾಗಿ ನೋವು ಪಡೆದುಕೊಂಡು ಒಟ್ಟಿಗೆ ಇರೋದು ಸರಿಯಲ್ಲ ಎನ್ನುವ ಕಾರಣಕ್ಕಾಗಿ ಮಾತ್ರವೇ ನಾವು ವಿಚ್ಚೇದನ ಪಡೆದುಕೊಂಡಿದ್ದೇವೆ ಎಂದು ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಹೇಳಿದ್ದಾರೆ. ಜೂನ್‌ 6 ರಂದು ಕಾನೂನುಬದ್ಧವಾಗಿ ವಿಚ್ಛೇದನ ಪಡೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಾಕಷ್ಟು ವಿಚಾರಗಳನ್ನು ಮಾತನಾಡಿದರು. ಇದೇ ವೇಳೆ ತಮ್ಮ ವಿಚ್ಛೇದನದ ಕುರಿತಾಗಿ ಆಗುತ್ತಿರುವ ಅಪಪ್ರಚಾರದ ಬಗ್ಗೆಯೂ ಅವರು ವಿವರಣೆ ನೀಡಿದರು. ನಾವಿಬ್ಬರೂ ಬೇರೆ ಬೇರೆಯಾಗಿದ್ದರೂ, ಪರಸ್ಪರ ಗೌರವ ಮಾತ್ರ ಹಾಗಯೇ ಉಳಿದುಕೊಂಡಿದೆ. ನಿವೇದಿತಾ ಗೌಡ ಅವರ ಯಶಸ್ಸಿನ ಬಗ್ಗೆ ನನಗೆ ಖುಷಿ ಇದೆ. ಅದೇ ರೀತಿ ನನ್ನ ಯಶಸ್ಸಿನ ಬಗ್ಗೆಯೂ ಅವರೂ ಖುಷಿಯಲ್ಲಿದ್ದಾರೆ ಎಂದು ಹೇಳಿದರು. ವಿಚ್ಛೇದನಕ್ಕೆ ಇರುವ ನಿಜವಾದ ಕಾರಣ ತಿಳಿಸಿದ ಬಳಿಕ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ಡಿವೋರ್ಸ್‌ ಕುರಿತಾಗಿ ಬಂದ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.

ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಅವರಿಂದ ಕೋಟ್ಯಂತರ ರೂಪಾಯಿ ಜೀವನಾಂಶ ಕೇಳಿದ್ದಾರೆ ಎಂದು ವರದಿಯಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ಚರ್ಚೆಯಾಗಿದ್ದು ಮಾತ್ರವಲ್ಲದೆ, ಚಂದನ್‌ ಆದಷ್ಟು ಬೇಗ ತನ್ನ ಆಸ್ತಿಯನ್ನು ತಾಯಿಯ ಹೆಸರಿಗೆ ವರ್ಗಾವಣೆ ಮಾಡಬೇಕು ಎಂದೂ ಟ್ರೋಲ್‌ ಕೂಡ ಮಾಡಲಾಗಿತ್ತು. 

ತಮ್ಮ ಕಿವಿಗೆ ಬಿದ್ಧಂತ ವದಂತಿಗಳ ಬಗ್ಗೆ ಮಾತನಾಡಿದ ಚಂದನ್‌ ಶೆಟ್ಟಿ, ನನ್ನಿಂದ ನಿವೇದಿತಾ ಕೋಟ್ಯಂತರ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಹಾಗೇನೂ ಇಲ್ಲ. ನನ್ನಿಂದ ಆಕೆ ಯಾವದೇ ರೀತಿಯ ಹಣವನ್ನೂ ಡಿಮಾಂಡ್‌ ಮಾಡಿಲ್ಲ. ಅದಲ್ಲದೆ, ಜೀವನಾಂಶ ಬೇಕು ಎಂದು ಆಕೆ ಎಲ್ಲಿಯೂ ಹೇಳಿಲ್ಲ. ನಾನೂ ಕೂಡ ಕೊಟ್ಟಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಬಂದಿರುವಂಥ ಈ ಕುರಿತಾದ ಸುದ್ದಿ ಎಲ್ಲವೂ ಸುಳ್ಳು ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಬಿಗ್‌ ಬಾಸ್‌ ಟು ಡಿವೋರ್ಸ್‌..'ಬೊಂಬೆ..' ಬಾಳಿನಲ್ಲಿ ವಿಲನ್‌ ಆಗಿದ್ಯಾರು?

ಇದಕ್ಕೂ ಮುನ್ನ ವಿಚ್ಛೇದನದ ಬಗ್ಗೆ ಮಾತನಾಡಿದ ನಿವೇದಿತಾ ಗೌಡ, 'ಎಲ್ಲರಿಗೂ ಥ್ಯಾಂಕ್‌ ಯು. ನನ್ನ ನಿರ್ಧಾರವನ್ನು ಬೆಂಬಲಿಸಿದ್ದಕ್ಕೆ ಥ್ಯಾಂಕ್ಸ್‌. ನಮ್ಮ ನಿರ್ಧಾರವನ್ನು ಬೆಂಬಲಿಸಿ ಪೋಸ್ಟ್‌ ಮಾಡಿದ ಎಲ್ಲರಿಗೂ ನಾನು ವೈಯಕ್ತಿಕವಾಗಿ ಥ್ಯಾಂಕ್ಸ್‌ ಕೂಡ ಹೇಳಿದ್ದೇನೆ. ಆ ಕ್ಷಣದಲ್ಲಿ ನನಗೆ ಬೆಂಬಲ ಬಹಳ ಅಗತ್ಯವಾಗಿತ್ತು. ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಬೇರೆ ಬೇರೆಯಾಗಿದ್ದೇವೆ. ಇದೇ ಕಾರಣಕ್ಕಾಗಿ ನಮ್ಮಿಬ್ಬರ ನಡುವೆ ನಿರಂತರವಾಗಿ ಜಗಳಗಳು ಆಗುತ್ತಿದ್ದ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇವೆ. ಅದು ಬಿಟ್ಟು ಬೇರೆ ಯಾವ ಕಾರಣವೂ ಇಲ್ಲ. ನಮ್ಮ ಮನಸ್ಸು ಹರ್ಟ್‌ ಆಗುವ ರೀತಿಯಲ್ಲಿ ಬರುತ್ತಿರುವ ವದಂತಿಗಳು ಬರುತ್ತಿವೆ. ಸೋಶಿಯಲ್‌ ಮೀಡಿಯಾದಲ್ಲಿ ಹರಡುತ್ತಿರುವ ರೀತಿಯಲ್ಲಿ ನಮ್ಮಿಬ್ಬರ ನಡುವೆ ಬೇರೆ ಯಾವ ಕಾರಣಕ್ಕೂ ವಿಚ್ಛೇದನ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಚಂದನ್‌ ಶೆಟ್ಟಿ-ನಿವೇದಿತಾಗೆ ಸಿಕ್ತು ಒಂದೇ ದಿನದಲ್ಲಿ ಡಿವೋರ್ಸ್‌, ಏನಿದು ಫ್ಯಾಮಿಲಿ ಕೋರ್ಟ್‌ 13ಬಿ ಸೆಕ್ಷನ್‌?